Thursday, November 19, 2026

ಪ್ರಾಯೋಗಿಕ ಆವೃತ್ತಿ

ಎಸ್.ಎಸ್.ಎಲ್.ಸಿ ಫಲಿತಾಂಶ | ಚಿತ್ರದುರ್ಗ ಪ್ರಥಮ, 2ನೇ ಸ್ಥಾನಕ್ಕೆ ಜಿಗಿದ ಮಂಡ್ಯ,

ಪ್ರಸಕ್ತ ಸಾಲಿನ ಕರ್ನಾಟಕ ಎಸ್​ಎಸ್​ಎಲ್​ಸಿ ಫಲಿತಾಂಶ ಪ್ರಕಟವಾಗಿದ್ದು, ಚಿತ್ರದುರ್ಗ ಪ್ರಥಮ, ಮಂಡ್ಯ ದ್ವಿತೀಯ, ಹಾಸನ ತೃತೀಯ ಸ್ಥಾನಗಳನ್ನು ತಮ್ಮದಾಗಿಸಿಕೊಂಡಿವೆ. ಈ ಮೂಲಕ ಮಂಡ್ಯವು ಗಮನಾರ್ಹ ಸಾಧನೆಯನ್ನು ಮಾಡಿದೆ.

ಬುದ್ದಿವಂತರ ಜಿಲ್ಲೆಗಳೆನಿಸಿಕೊಂಡಿದ್ದ ದಕ್ಷಿಣ ಕನ್ನಡ, ಉತ್ತರ ಕನ್ನಡ ಹಾಗೂ ಉಡುಪಿ ಜಿಲ್ಲೆಗಳು ಈ ಭಾರಿ ಮಂಡ್ಯಕ್ಕಿಂತ ಕೆಳಗಿನ ಸ್ಥಾನಗಳನ್ನು ಪಡೆದಿದ್ದು, ಎಲ್ಲರೂ ಹುಬ್ಬೇರಿಸುವಂತೆ ಮಾಡಿದೆ.

ಯಾದಗಿರಿ ಅಂತಿಮ ಸ್ಥಾನ ಗಳಿಸಿದೆ. ಈ ಬಾರಿ ಶೇಕಡಾ 83.89ರಷ್ಟು ಫಲಿತಾಂಶ ಬಂದಿದೆ, ಎಸ್​ಎಸ್​ಎಲ್​ಸಿ ಪರೀಕ್ಷೆಯಲ್ಲಿ ಒಟ್ಟು 7,00,619 ವಿದ್ಯಾರ್ಥಿಗಳು ಪಾಸಾಗಿದ್ದಾರೆ. 625ಕ್ಕೆ 625 ಅಂಕವನ್ನು ನಾಲ್ಕು ವಿದ್ಯಾರ್ಥಿಗಳು ಪಡೆದಿದ್ದಾರೆ.

ಪರೀಕ್ಷೆಯಲ್ಲಿ 3,41,108 ಬಾಲಕರು, 3,59,511 ಬಾಲಕಿಯರು ಉತ್ತೀರ್ಣರಾಗಿದ್ದಾರೆ. ಫಲಿತಾಂಶದಲ್ಲಿ A ಗ್ರೇಡ್ ಪಡೆದ ಜಿಲ್ಲೆಗಳು ಸಂಖ್ಯೆ-23, ಬಿ ಗ್ರೇಡ್ ಪಡೆದ ಜಿಲ್ಲೆಗಳು ಸಂಖ್ಯೆ 12, ಮೇ 15ರಿಂದ ಮೇ 21ರವರೆಗೆ ಮರುಮೌಲ್ಯಮಾಪನಕ್ಕೆ ಅವಕಾಶ ನೀಡಲಾಗಿದೆ, ಇಂದಿನಿಂದ ಮೇ 15ರವರೆಗೆ ಪೂರಕ ಪರೀಕ್ಷೆ ನೋಂದಣಿಗೆ ಅವಕಾಶ ನೀಡಲಾಗುತ್ತಿದೆ.

  • ಜಿಲ್ಲಾವಾರು ಫಲಿತಾಂಶ 
  • 1.ಚಿತ್ರದುರ್ಗ -ಶೇ.96.8
  • 2.ಮಂಡ್ಯ-ಶೇ.96.74
  • 3.ಹಾಸನ-ಶೇ.96.68
  • 4.ಬೆಂಗಳೂರು ಗ್ರಾಮಾಂತರ-ಶೇ.96.48
  • 5.ಚಿಕ್ಕಬಳ್ಳಾಪುರ-ಶೇ.96.15
  • 6.ಕೋಲಾರ-ಶೇ.94.6
  • 7.ಚಾಮರಾಜನಗರ -ಶೇ.,94.32
  • 8.ಮಧುಗಿರಿ- ಶೇ.93.23
  • 9.ಕೊಡಗು-ಶೇ.93.19
  • 10.ವಿಜಯನಗರ- ಶೇ.91.41
  • 11.ವಿಜಯಪುರ- ಶೇ. 91.23
  • 12.ಚಿಕ್ಕೋಡಿ-91.07
  • 13.ಉತ್ತರಕನ್ನಡ- ಶೇ.90.53
  • 14.ದಾವಣಗೆರೆ- ಶೇ.90.43
  • 15.ಕೊಪ್ಪಳ- ಶೇ.90.27
  • 16.ಮೈಸೂರು ಜಿಲ್ಲೆ- ಶೇ.89.75
  • 17.ಚಿಕ್ಕಮಗಳೂರು-ಶೇ.89.69
  • 18.ಉಡುಪಿ- ಶೇ. 89.49
  • 20.ದಕ್ಷಿಣ ಕನ್ನಡ- ಶೇ. 89.47
  • 21.ತುಮಕೂರು- ಶೇ. 89.43
  • 22.ರಾಮನಗರ- ಶೇ. 89.42
  • 23.ಹಾವೇರಿ ಶೇ.89.11
  • 24.ಶಿರಸಿ- ಶೇ.87.39
  • 25.ಧಾರವಾಡ-ಶೇ.86.55
  • 26.ಗದಗ-ಶೇ.86.51
  • 27.ಬೆಳಗಾವಿ-ಶೇ.85.85
  • 28.ಬಾಗಲಕೋಟೆ-ಶೇ.85.14
  • 29.ಕಲಬುರಗಿ- ಶೇ.84.51
  • 30.ಶಿವಮೊಗ್ಗ-ಶೇ.84.04
  • 31.ರಾಯಚೂರು- ಶೇ. 84.02
  • 32.ಬಳ್ಳಾರಿ- ಶೇ.81.54
  • 33.ಬೆಂಗಳೂರು ಉತ್ತರ ಶೇ.80.93
  • 34.ಬೆಂಗಳೂರು ದಕ್ಷಿಣ ಶೇ.78.95
  • 35.ಬೆಂಗಳೂರು ಪಶ್ಚಿಮ ಶೇ.80.93
  • 36.ಬೀದರ್ ಶೇ. 78.73
  • 37.ಯಾದಗಿರಿಗೆ ಕೊನೆಯ ಸ್ಥಾನ- ಶೇ.75.49

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ