ಪ್ರಸಕ್ತ ಸಾಲಿನ ಕರ್ನಾಟಕ ಎಸ್ಎಸ್ಎಲ್ಸಿ ಫಲಿತಾಂಶ ಪ್ರಕಟವಾಗಿದ್ದು, ಚಿತ್ರದುರ್ಗ ಪ್ರಥಮ, ಮಂಡ್ಯ ದ್ವಿತೀಯ, ಹಾಸನ ತೃತೀಯ ಸ್ಥಾನಗಳನ್ನು ತಮ್ಮದಾಗಿಸಿಕೊಂಡಿವೆ. ಈ ಮೂಲಕ ಮಂಡ್ಯವು ಗಮನಾರ್ಹ ಸಾಧನೆಯನ್ನು ಮಾಡಿದೆ.
ಬುದ್ದಿವಂತರ ಜಿಲ್ಲೆಗಳೆನಿಸಿಕೊಂಡಿದ್ದ ದಕ್ಷಿಣ ಕನ್ನಡ, ಉತ್ತರ ಕನ್ನಡ ಹಾಗೂ ಉಡುಪಿ ಜಿಲ್ಲೆಗಳು ಈ ಭಾರಿ ಮಂಡ್ಯಕ್ಕಿಂತ ಕೆಳಗಿನ ಸ್ಥಾನಗಳನ್ನು ಪಡೆದಿದ್ದು, ಎಲ್ಲರೂ ಹುಬ್ಬೇರಿಸುವಂತೆ ಮಾಡಿದೆ.
ಯಾದಗಿರಿ ಅಂತಿಮ ಸ್ಥಾನ ಗಳಿಸಿದೆ. ಈ ಬಾರಿ ಶೇಕಡಾ 83.89ರಷ್ಟು ಫಲಿತಾಂಶ ಬಂದಿದೆ, ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಒಟ್ಟು 7,00,619 ವಿದ್ಯಾರ್ಥಿಗಳು ಪಾಸಾಗಿದ್ದಾರೆ. 625ಕ್ಕೆ 625 ಅಂಕವನ್ನು ನಾಲ್ಕು ವಿದ್ಯಾರ್ಥಿಗಳು ಪಡೆದಿದ್ದಾರೆ.
ಪರೀಕ್ಷೆಯಲ್ಲಿ 3,41,108 ಬಾಲಕರು, 3,59,511 ಬಾಲಕಿಯರು ಉತ್ತೀರ್ಣರಾಗಿದ್ದಾರೆ. ಫಲಿತಾಂಶದಲ್ಲಿ A ಗ್ರೇಡ್ ಪಡೆದ ಜಿಲ್ಲೆಗಳು ಸಂಖ್ಯೆ-23, ಬಿ ಗ್ರೇಡ್ ಪಡೆದ ಜಿಲ್ಲೆಗಳು ಸಂಖ್ಯೆ 12, ಮೇ 15ರಿಂದ ಮೇ 21ರವರೆಗೆ ಮರುಮೌಲ್ಯಮಾಪನಕ್ಕೆ ಅವಕಾಶ ನೀಡಲಾಗಿದೆ, ಇಂದಿನಿಂದ ಮೇ 15ರವರೆಗೆ ಪೂರಕ ಪರೀಕ್ಷೆ ನೋಂದಣಿಗೆ ಅವಕಾಶ ನೀಡಲಾಗುತ್ತಿದೆ.
- ಜಿಲ್ಲಾವಾರು ಫಲಿತಾಂಶ
- 1.ಚಿತ್ರದುರ್ಗ -ಶೇ.96.8
- 2.ಮಂಡ್ಯ-ಶೇ.96.74
- 3.ಹಾಸನ-ಶೇ.96.68
- 4.ಬೆಂಗಳೂರು ಗ್ರಾಮಾಂತರ-ಶೇ.96.48
- 5.ಚಿಕ್ಕಬಳ್ಳಾಪುರ-ಶೇ.96.15
- 6.ಕೋಲಾರ-ಶೇ.94.6
- 7.ಚಾಮರಾಜನಗರ -ಶೇ.,94.32
- 8.ಮಧುಗಿರಿ- ಶೇ.93.23
- 9.ಕೊಡಗು-ಶೇ.93.19
- 10.ವಿಜಯನಗರ- ಶೇ.91.41
- 11.ವಿಜಯಪುರ- ಶೇ. 91.23
- 12.ಚಿಕ್ಕೋಡಿ-91.07
- 13.ಉತ್ತರಕನ್ನಡ- ಶೇ.90.53
- 14.ದಾವಣಗೆರೆ- ಶೇ.90.43
- 15.ಕೊಪ್ಪಳ- ಶೇ.90.27
- 16.ಮೈಸೂರು ಜಿಲ್ಲೆ- ಶೇ.89.75
- 17.ಚಿಕ್ಕಮಗಳೂರು-ಶೇ.89.69
- 18.ಉಡುಪಿ- ಶೇ. 89.49
- 20.ದಕ್ಷಿಣ ಕನ್ನಡ- ಶೇ. 89.47
- 21.ತುಮಕೂರು- ಶೇ. 89.43
- 22.ರಾಮನಗರ- ಶೇ. 89.42
- 23.ಹಾವೇರಿ ಶೇ.89.11
- 24.ಶಿರಸಿ- ಶೇ.87.39
- 25.ಧಾರವಾಡ-ಶೇ.86.55
- 26.ಗದಗ-ಶೇ.86.51
- 27.ಬೆಳಗಾವಿ-ಶೇ.85.85
- 28.ಬಾಗಲಕೋಟೆ-ಶೇ.85.14
- 29.ಕಲಬುರಗಿ- ಶೇ.84.51
- 30.ಶಿವಮೊಗ್ಗ-ಶೇ.84.04
- 31.ರಾಯಚೂರು- ಶೇ. 84.02
- 32.ಬಳ್ಳಾರಿ- ಶೇ.81.54
- 33.ಬೆಂಗಳೂರು ಉತ್ತರ ಶೇ.80.93
- 34.ಬೆಂಗಳೂರು ದಕ್ಷಿಣ ಶೇ.78.95
- 35.ಬೆಂಗಳೂರು ಪಶ್ಚಿಮ ಶೇ.80.93
- 36.ಬೀದರ್ ಶೇ. 78.73
- 37.ಯಾದಗಿರಿಗೆ ಕೊನೆಯ ಸ್ಥಾನ- ಶೇ.75.49




