Wednesday, October 23, 2024

ಪ್ರಾಯೋಗಿಕ ಆವೃತ್ತಿ

ಹಾಸ್ಯನಟ ಮೋಹನ್ ಜುನೇಜಾ ನಿಧನ

ನಟ ಮತ್ತು ಹಾಸ್ಯನಟ ಮೋಹನ್ ಜುನೇಜಾ ಇಂದು ಬೆಳಗ್ಗೆ ನಿಧನರಾಗಿದ್ದಾರೆ. ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ ಮೋಹನ್ ಜುನೇಜಾ ಚಿಕಿತ್ಸೆಗೆ ಸ್ಪಂದಿಸದೆ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಅವರಿಗೆ 54 ವರ್ಷ ವಯಸ್ಸಾಗಿತ್ತು.

ಮೋಹನ್ ಹಾಸ್ಯನಟನಾಗಿ ದಶಕಗಳಿಂದ ನಟಿಸುತ್ತಿದ್ದು, ಹಲವು ಭಾಷೆಗಳಲ್ಲಿ ನಟಿಸಿದ್ದಾರೆ. ಮೋಹನ್ 100 ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ.

ಅವರ ಸೂಪರ್ಹಿಟ್ ಚಿತ್ರ ಕೆಜಿಎಫ್ ಭಾಗ 1 ಮತ್ತು ಭಾಗ 2 ರಲ್ಲಿಯೂ ನಟಿಸಿದ್ದರು. ಗಣೇಶ್ ಅವರ ವೃತ್ತಿಜೀವನದಲ್ಲಿ ಪ್ರಮುಖ ಬ್ರೇಕ್ ನೀಡಿದ ‘ಚೆಲ್ಲಾಟ’ ಸಿನಿಮಾದಲ್ಲಿನ ಅವರ ಪಾತ್ರವು ಇನ್ನೂ ಪ್ರೇಕ್ಷಕರ ನೆನಪಿನಲ್ಲಿದೆ.

ಅವರ ನಿಧನಕ್ಕೆ ಅಭಿಮಾನಿಗಳು ಮತ್ತು ಕನ್ನಡ ಚಿತ್ರರಂಗದ ಸಮುದಾಯದ ಸದಸ್ಯರು, ಸಾಮಾಜಿಕ ಮಾಧ್ಯಮ ಪುಟಗಳಲ್ಲಿ ತಮ್ಮ ಸಂತಾಪ ವ್ಯಕ್ತಪಡಿಸಿದ್ದಾರೆ. ಮೋಹನ್ ಅವರು ವಠರಾ ದಂತಹ ಹಲವಾರು ಧಾರಾವಾಹಿಗಳಲ್ಲಿ ನಟಿಸಿದ್ದಾರೆ ಮತ್ತು ಪ್ರೇಕ್ಷಕರಿಗೆ ಹತ್ತಿರವಾಗಿದ್ದಾರೆ.

ಅವರ ನಿಧನಕ್ಕೆ ನಟ ಗಣೇಶ್ ತಮ್ಮ ಟ್ವಿಟರ್ ಪೇಜ್ ನಲ್ಲಿ ಸಂತಾಪ ಸೂಚಿಸಿದ್ದಾರೆ. ಮೋಹನ್ ರವರ ಚಿತ್ರವನ್ನು ಹಂಚಿಕೊಳ್ಳುವ ಮೂಲಕ ಅವರು “ಓಂ ಶಾಂತಿ” ಎಂದು ಬರೆದಿದ್ದಾರೆ.

ಮೋಹನ್ ಜುನೇಜಾ ದಕ್ಷಿಣ ಭಾರತದ ಪ್ರಸಿದ್ಧ ನಟರಾಗಿದ್ದು, ಅವರು ಮುಖ್ಕವಾಗಿ ನ್ನಡ ಮತ್ತು ತೆಲುಗು ಚಲನಚಿತ್ರಗಳಲ್ಲಿ ಹೆಚ್ಚು ಕೆಲಸ ಮಾಡಿದ್ದಾರೆ. ಕೆಜಿಎಫ್ (2018), ಲಕ್ಷ್ಮಿ (2013), ಬೃಂದಾವನ (2013), ಪದೇ ಪದೇ (2013), ಕೊಕೊ (2012), ಮತ್ತು ಸ್ನೇಹಿತರು (2012) ಮೋಹನ್ ಅವರ ಕೆಲವು ಜನಪ್ರಿಯ ಚಲನಚಿತ್ರಗಳು (2012).

ಮೋಹನ್ ಜುನೇಜಾ ಅವರು ಕನ್ನಡ ಚಲನಚಿತ್ರಗಳಲ್ಲಿನ ಕೆಲಸಕ್ಕಾಗಿ ಹೆಚ್ಚು ಹೆಸರುವಾಸಿಯಾಗಿದ್ದರು. ಇವರು ತುಮಕೂರಿನವರಾಗಿದ್ದು, ಮೋಹನ್ ಅವರು ಕ್ಯಾಂಪಸ್ ರಂಗಭೂಮಿಯಲ್ಲಿ ಆಸಕ್ತಿ ಹೊಂದಿದ್ದರು ಮತ್ತು ಅನೇಕ ನಾಟಕಗಳನ್ನು ಮಾಡಿದರು. ಸಂಗಮ, 2008 ರ ಕನ್ನಡ ಪ್ರಣಯ ಚಲನಚಿತ್ರವು ನಟನ ಚೊಚ್ಚಲ ಚಿತ್ರವಾಗಿದೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!