ಪ್ರಸ್ತುತ ರಾಜಕೀಯ ಸನ್ನಿವೇಶಗಳನ್ನು ಒಳಗೊಂಡ ರಾಜಕೀಯ ವಿಡಂಬನೆಯೇ ಕಥಾಹಂದರವಾಗಿರುವ ‘ದರ್ಬಾರ್’ ಚಿತ್ರ ಜೂನ್ 9ರಂದು ಬೆಳ್ಳಿತೆರೆಗೆ ಬರಲಿದೆ ಎಂದು ಚಿತ್ರದ ನಿರ್ದೇಶಕ ವಿ.ಮನೋಹರ್ ತಿಳಿಸಿದರು.
ಈ ಚಿತ್ರದಲ್ಲಿ ನಿರ್ಮಾಪಕ ಸತೀಶ್ ಅವರೇ ನಾಯಕನಾಗಿ ಅಭಿನಯಿಸಿದ್ದಾರೆ. ಚಿತ್ರಕಥೆಯೂ ಅವರದ್ದೇ ಆಗಿದೆ. ಓ ಮಲ್ಲಿಗೆ, ಇಂದ್ರಧನುಶ್ ನಂತರ ‘ದರ್ಬಾರ್’ ಚಿತ್ರವನ್ನು 23 ವರ್ಷಗಳ ನಂತರ ನಿರ್ದೇಶನ ಮಾಡಿದ್ದೇನೆ ಎಂದು ಮಂಡ್ಯದಲ್ಲಿ ಸುದ್ದಿಗೋಷ್ಠಿಯಲ್ಲಿ ವಿವರಿಸಿದರು.

ಮೊದಲಿಗೆ ಉಪೇಂದ್ರ ನಿರ್ದೇಶನದ ತರ್ಲೆ ನನ್ಮಗ ಚಿತ್ರಕ್ಕೆ ಸಂಗೀತ ನಿರ್ದೇಶಕನಾಗಿ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದೆ, ಸಂಗೀತ ನಿರ್ದೇಶನದ ಜೊತೆಗೆ ಹಲವಾರು ಸಿನಿಮಾಗಳಲ್ಲಿ ನಟನೆಯನ್ನು ಮಾಡಿದೆ. ಹಾಗೇಯೆ ನಿರ್ದೇಶಕನಾಗಿದ್ದು ಹೊಸ ಅನುಭವವನ್ನು ತಂದು ಕೊಟ್ಟಿದೆ. ದರ್ಬಾರ್ ಚಿತ್ರದಲ್ಲಿ ಹೆಚ್ಚಾಗಿ ಮಂಡ್ಯದ ಸ್ಥಳೀಯ ಕಲಾವಿದರನ್ನೇ ಹೆಚ್ಚಾಗಿ ಬಳಸಿಕೊಳ್ಳಲಾಗಿದೆ. ಚಿತ್ರದಲ್ಲಿ ಮೂರು ಹಾಡುಗಳಿದ್ದು, ಅವನ್ನು ನಾನೇ ನಿರ್ದೇಶನ ಮಾಡಿದ್ದೇನೆ, ಚಿತ್ರದಲ್ಲಿ ಮೂರು ಫೈಟ್ ಗಳೂ ಇವೆ. ಚಿತ್ರ ಬಜೆಟ ₹3,50 ಕೋಟಿಯಾಗಿದ್ದು, ಒಂದು ಕಮರ್ಷಿಯಲ್ ಚಿತ್ರಕ್ಕೆ ಏನೇನು ಬೇಕೋ ಅದೆಲ್ಲವನ್ನೂ ಚಿತ್ರದಲ್ಲಿ ಕಾಣಬಹುದು ಎಂದರು.
ಗೋಷ್ಠಿಯಲ್ಲಿ ನಿರ್ಮಾಪಕ ಸತೀಶ್, ಕಲಾವಿದರಾದ ಕೆಂಚೇಗೌಡ, ಜಯರಾಂ, ಕಾಮಿಡಿ ಕಿಲಾಡಿ ಸಂತು ಮತ್ತಿತರರಿದ್ದರು.




