ಕನ್ನಡದ ಜೀ ವಾಹಿನಿಯಲ್ಲಿ ಪ್ರಸಾರವಾಗುವ ಮಹಾನಾಯಕ ಡಾ.ಬಿ.ಆರ್.ಅಂಬೇಡ್ಕರ್ ಅವರ ಬಾಲಕನಾಗಿ ಪಾತ್ರ ನಿರ್ವಹಿಸಿರುವ ಆಯುಧ್ ಬನ್ಸಾಲಿ ಅವರು ಇಂದು ಮದ್ದೂರಿನ ಮಾಲಗಾರಹಳ್ಳಿಗೆ ಭೇಟಿ ನೀಡಿದಾಗ ಅಭಿನಂದನೆ ಸಲ್ಲಿಸಿ ಗೌರವಿಸಲಾಯಿತು.
ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಸುರೇಶ್ ಕಂಠಿ ಅವರ ಮನೆಗೆ ಬಂದ ಮಹಾನಾಯಕ ಧಾರವಾಹಿ ಬಾಲನಟ ಅಯುದ್ ಬನ್ಸಾಲಿ ಅಭಿನಂದನೆ ಸ್ವೀಕರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಬಾಲನಟ ಆಯುಧ್ ಬನ್ಸಾಲಿ, ನಾನು ಅಂಬೇಡ್ಕರ್ ಅವರ ಪಾತ್ರ ಮಾಡಿದ ಮೇಲೆ ನನ್ನನ್ನು ಎಲ್ಲರೂ ಗುರುತಿಸಿ ಪ್ರೀತಿ ತೋರಿಸುತ್ತಾರೆ. ಅವರ ಅಭಿಮಾನ ನನಗೆ ತುಂಬಾ ಖುಷಿ ತಂದಿದೆ.ನಿಮ್ಮೆಲ್ಲರ ಪ್ರೀತಿ ,ಆಶೀರ್ವಾದ ನಾನು ಎಂದಿಗೂ ಮರೆಯುವುದಿಲ್ಲ ಎಂದು ತಿಳಿಸಿದರು.
ಸುರೇಶ್ ಕಂಠಿ ಮಾತನಾಡಿ, ಅಂಬೇಡ್ಕರ್ ಅವರ ಬಾಲನಟ ಪಾತ್ರಧಾರಿ ಆಯುಧ್ ಬನ್ಸಾಲಿ ಅಭಿನಯ ಬಹಳ ಚೆನ್ನಾಗಿ ಮೂಡಿ ಬಂದಿದೆ. ಅದಕ್ಕಾಗಿ ಆತನಿಗೆ ಅಭಿನಂದಿಸುತ್ತೇನೆ ಎಂದರು.
ಈ ಸಂದರ್ಭದಲ್ಲಿ ಮುತ್ತಗೆರೆ ಗ್ರಾಮ ಪಂಚಾಯಿತಿ ಅಧ್ಯಕ್ಷ ರವಿಕುಮಾರ್. ಕರಟಕೆರೆ ಯೋಗೇಶ. ಶಿಕ್ಷಕ ಚಂದ್ರಹಾಸ ಹಾಗೂ ಗ್ರಾಮಸ್ಥರು ಇದ್ದರು.
ಇದನ್ನೂ ಓದಿ: ದಕ್ಷಿಣ ಪದವೀಧರ ಕ್ಷೇತ್ರದ ಅಭ್ಯರ್ಥಿ ಕೆ.ಪಿ.ಪ್ರಸನ್ನ ಕುಮಾರ್ ಪ್ರಚಾರ