Sunday, May 19, 2024

ಪ್ರಾಯೋಗಿಕ ಆವೃತ್ತಿ

ಮೇ 27ಕ್ಕೆ ಮಂಡ್ಯದಲ್ಲಿ ಲಯನ್ಸ್ ಪ್ರಾಂತೀಯ ಸಮ್ಮೇಳನ

ಅಂತರ ರಾಷ್ಟೀಯ ಲಯನ್ಸ್ ಕ್ಲಬ್ ವತಿಯಿಂದ 317ಎ ವ್ಯಾಪ್ತಿಯ ಪ್ರಾಂತೀಯ ಸಮ್ಮೇಳನವನ್ನು ಮೇ 27ರಂದು ಬೆಳಿಗ್ಗೆ 9 ಗಂಟೆಗೆ ಮಂಡ್ಯನಗರದ ಅಂಬೇಡ್ಕರ್ ಭವನದಲ್ಲಿ ಆಯೋಜಿಸಲಾಗಿದೆ ಎಂದು ಪ್ರಾಂತಿಯ ಸಮ್ಮೇಳನಾಧ್ಯಕ್ಷ ಹೆಚ್.ಎಲ್.ವಿಶಾಲ ರಘು ತಿಳಿಸಿದರು.

ಮಂಡ್ಯದಲ್ಲಿ ಸುದ್ದಿಗೋ‍ಷ್ಠಿಯಲ್ಲಿ ಮಾತನಾಡಿದ ಅವರು, ಪ್ರಾಂತ್ಯ 9ರ ಪ್ರಾಂತೀಯ ಅಧ್ಯಕ್ಷೆ ಲಯನ್ ಡಾ. ರತ್ನಮ್ಮ ವೈ.ಹೆಚ್, ಪ್ರಾಂತ್ಯ 10ರ ಪ್ರಾಂತೀಯ ಅಧ್ಯಕ್ಷೆ ಲಯನ್‌ ಅಪ್ಪಾಜಿ ಹಾಗೂ ಪ್ರಾಂತೀಯ 11ರ ಅಧ್ಯಕ್ಷ ಹೆಚ್‌.ಆರ್.ಪದ್ಮನಾಭ ಅವರ ನೇತೃತ್ವದಲ್ಲಿ ಸಮ್ಮೇಳನ ಜರುಗಲಿದೆ ಎಂದು ಹೇಳಿದರು.

ಈ ಸಮ್ಮೇಳನದಲ್ಲಿ  ಅಗತ್ಯವುಳ್ಳವರಿಗಾಗಿ ವಿವಿಧ ಕ್ಲಬ್‌ಗಳಿಂದ ರೋಗಿಗಳಿಗೆ ಧನ ಸಹಾಯ, ಹೊಲಿಗೆ ಯಂತ್ರ ವಿತರಣೆ, ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಧನ ಸಹಾಯ, ಎಸ್‌.ಎಸ್‌.ಎಲ್ ಸಿ, ಪಿಯುಸಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ಆರೋಗ್ಯ ತಪಾಸಣಾ ಶಿಬಿರ ಸೇರಿದಂತೆ ವಿವಿಧ ಸೇವಾ ಚಟುವಟಿಕೆ ಕಾರ್ಯಕ್ರಮಗಳು ನಡೆಯಲಿದೆ ಎಂದರು.

ಬೆಳಿಗ್ಗೆ 11-30 ಗಂಟೆಗೆ ಪ್ರಾಂತೀಯ ಸಮ್ಮೇಳನ ಉದ್ಘಾಟನೆಯನ್ನು ಕರ್ನಾಟಕ ರಾಜ್ಯದ ಲೋಕಾಯುಕ್ತರಾದ ಬಿ.ಎಸ್.ಪಾಟೀಲ್ ನೆರವೇರಿಸುವರು. ಮುಖ್ಯ ಅತಿಥಿಗಳಾಗಿ ಉಚ್ಛ ನ್ಯಾಯಲಯದ ನ್ಯಾಯಮೂರ್ತಿ ಶ್ರೀಟಿ.ಜಿ ಶಿವಶಂಕರೇಗೌಡ ಕಾನೂನು ಅರಿವು ಕುರಿತು ಉಪನ್ಯಾಸ ನೀಡುವರು. ಮುಖ್ಯ ಅತಿಥಿಗಳಾಗಿ ಮೈಸೂರಿನ  ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ ಡಾ.ಕೆ.ಎಸ್.ಸದಾನಂದ ಉಪನ್ಯಾಸ ನೀಡುವರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಾಂತೀಯ ಸಮ್ಮೇಳನದ ಅಧ್ಯಕ್ಷ ಹೆಚ್.ಎಲ್‌, ವಿಶಾಲ್‌ರಘು ವಹಿಸುವರು ಎಂದರು.

ಸಮ್ಮೇಳನದಲ್ಲಿ ಆತಿಥೇಯ ಸಮಿತಿಯ ಮಾರ್ಗದರ್ಶಕರಾದ ಡಾ.ನಾಗರಾಜು.ವಿ.ಬೈರಿ, ಸಂಯೋಜಕರಾದ ಕೆ.ಎಂ ಮುನಿಯಪ್ಪ, ಎಂ.ವಿ.ದೇವಿಪ್ರಸಾದ್, ಎಂ.ಅನಿಲ್‌ ಕುಮಾರ್, ಪ್ರಾಂತೀಯ ಸಲಹೆಗಾರರಾದ ಕೆ.ಟಿ.ಹನುಮಂತು, ಹೆಚ್.ಮಾದೇಗೌಡ, ಎಂ.ಜಯರಾಮು, ಜಿ.ಎಸ್.ನಂಜುಂಡಸ್ವಾಮಿ, ಉಪಾಧ್ಯಕ್ಷರಾದ ಬಿ.ಎಂ.ರವಿಶಂಕರ್, ಡಿ.ನಿಂಗೇಗೌಡ, ಎಸ್‌.ರಾಕೇಶ್, ಡಾ.ಸಿದ್ದರಾಜು, ಸಹ ಕಾರ್ಯದರ್ಶಿ ಕಾರ್ಯದರ್ಶಿಗಳಾದ ಎಂ.ಕೆ.ಜಗದೀಶ್‌, ಕೆ.ಆರ್. ಶಶಿಧರ ಈಚರೆರ, ಖಜಾಂಚಿ ಡಾ.ಎ.ಎಸ್. ನಾಗೇಶ್‌ ಹಾಗೂ ವಲಯ ಅಧ್ಯಕ್ಷರಾದ ಎಂ.ಕೆ.ಪ್ರಶಾಂತ್, ಪಿ.ಪುಟ್ಟಸ್ವಾಮಿ, ಸಂಪತ್ ಕುಮಾರ್‌ ಶೆಟ್ಟಿ, ಯು.ಎಸ್‌.ಸದಾಶಿವ, ಹೆಚ್.ಜೆ. ಸುರೇಶ್‌, ಕೆ.ಆರ್.ಶಶಿಧರ ಈಚಗೆರೆ, ನೀನಾ ಪಟೇಲ್, ಡಾ.ಎ.ಎಸ್‌.ನಾಗೇಶ್, ನಾಗಲಿಂಗಪ್ಪ ಹಾಗೂ ಪುಟ್ಟಬಸವೇಗೌಡ ಭಾಗವಹಿಸುವರು ಎಂದರು.

ಗೋಷ್ಠಿಯಲ್ಲಿ ಪ್ರಾಂತೀಯ ಅಧ್ಯಕ್ಷರಾದ ಅಪ್ಪಾಜಿ, ರತ್ನಮ್ಮ, ಪದ್ಮನಾಭ ಹೆಚ್.ಆರ್., ವಲಯ ಅಧ್ಯಕ್ಷ ಕೆ.ಆರ್.ಶಶಿಧರ್ ಹಾಗೂ ಪ್ರಶಾಂತ್ ಉಪಸ್ಥಿತರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!