Friday, September 20, 2024

ಪ್ರಾಯೋಗಿಕ ಆವೃತ್ತಿ

ರಕ್ತದಾನಿಗಳ ಸಂಖ್ಯೆಯನ್ನು ಹೆಚ್ಚು ಮಾಡಬೇಕಿದೆ – ಡಾ.ಎಚ್.ಎಲ್ ನಾಗರಾಜು

ಪ್ರಸ್ತುತ ಸಂದರ್ಭದಲ್ಲಿ ರಕ್ತನಿಧಿ ಕೇಂದ್ರಗಳಲ್ಲಿ ಚುನಾವಣೆಯ ಕಾರಣದಿಂದಾಗಿ ರಕ್ತ ಸಂಗ್ರಹಣೆ ಪ್ರಮಾಣ ಕಡಿಮೆ ಇದೆ, ಹಾಗಾಗಿ ರಕ್ತದಾನಿಗಳನ್ನು ಹೆಚ್ಚಳ ಮಾಡಿ, ರಕ್ತದಾನ ಮಾಡುವಂತೆ ಪ್ರೇರೆಪಿಸಬೇಕಿದೆ ಎಂದು  ಅಪರ ಜಿಲ್ಲಾಧಿಕಾರಿ ಡಾ.ಎಚ್ ಎಲ್ ನಾಗರಾಜು ಸಲಹೆ ನೀಡಿದರು.

ಮಂಡ್ಯ ವಿಶ್ವವಿದ್ಯಾಲಯ ಹಾಗೂ ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಂಡ್ಯ, ಜಿಲ್ಲಾ ಏಡ್ಸ್ ನಿಯಂತ್ರಣ ಮತ್ತು ಪ್ರತಿಬಂಧಕ ಘಟಕ ಮಂಡ್ಯ ಮತ್ತು ರಾಷ್ಟ್ರೀಯ ಸೇವಾ ಯೋಜನೆ, ಎನ್.ಸಿ.ಸಿ  ಘಟಕಗಳ ವತಿಯಿಂದ ವಿಶ್ವ ಸ್ವಯಂ ಪ್ರೇರಿತ ರಕ್ತದಾನಿಗಳ ದಿನಾಚರಣೆ ಪ್ರಯುಕ್ತ ಮಂಡ್ಯ ವಿಶ್ವವಿದ್ಯಾಲಯದ ವಾಣಿಜ್ಯ ಭವನದಲ್ಲಿ ನಡೆದ ಸ್ವಯಂ ಪ್ರೇರಿತ ರಕ್ತದಾನ ಶಿಬಿರ ಹಾಗೂ ರಸಪ್ರಶ್ನೆ ಸ್ಪರ್ಧೆಯ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ದಾನ ಮಾಡುವುದು ಭಾರತೀಯರ ಗುಣವಾಗಿದೆ, ಕಷ್ಟದಲ್ಲಿರುವವರಿಗೆ ರಕ್ತದಾನ ಮಾಡುವುದು ದೊಡ್ಡತನವಾಗಿದೆ, ಈ ನಿಟ್ಟಿನಲ್ಲಿ ಕಾಲೇಜು ವಿದ್ಯಾರ್ಥಿಗಳು ಗಮನ ಹರಿಸಬೇಕೆಂದು.

ಮಂಡ್ಯ ರೆಡ್ ಕ್ರಾಸ್ ಸಂಸ್ಥೆ ಅಧ್ಯಕ್ಷೆ ಮೀರಾ ಶಿವಲಿಂಗಯ್ಯ ಮಾತನಾಡಿ, ವಿದ್ಯಾರ್ಥಿಗಳಿಗೆ ರಕ್ತದಾನದ ಮಹತ್ವವನ್ನು ದಾನ ಶೂರ ಕರ್ಣನ ಉದಾಹರಣೆಯೊಂದಿಗೆ ತಿಳಿಸಿಕೊಟ್ಟರು. ಕೆ.ಟಿ. ಹನುಮಂತು ಕೃಷಿಕ್ ಲಯನ್ಸ್ ಕ್ಲಬ್ನ ಆಡಳಿತಾಧಿಕಾರಿಗಳು ರಕ್ತದ ವರ್ಗೀಕರಣದ ಬಗ್ಗೆ ತಿಳಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಮಂಡ್ಯ ವಿಶ್ವವಿದ್ಯಾಲಯದ ಆಡಳಿತ ಕುಲ ಸಚಿವ ಡಾ. ನಾಗರಾಜ ಜಿ. ಚೊಳ್ಳಿ, ಪರೀಕ್ಷಾಂಗ ಕುಲ ಸಚಿವ ಡಾ.ರಂಗರಾಜು , ಉಪ ಪರೀಕ್ಷಾ ಕುಲ ಸಚಿವ ಡಾ. ಪಾರ್ಥ, ಸಂಯೋಜನಾಧಿಕಾರಿಗಳಾದ ಡಾ. ಆನಂದ್, ಜಿಲ್ಲಾ ಕ್ಷಯ ರೋಗ ನಿರ್ಮೂಲನಾಧಿಕಾರಿ ಡಾ. ಆಶಾಲತಾ, ಡಾ.ಮುರುಳಿಧರ ಭಟ್ , ಡಾ. ಕೆ ಎಲ್ ಶೋಭಾ ,ಡಾ. ಗಾಯಿತ್ರಿ,  ರಾ.ಸೇ.ಯೋ. ಕಾರ್ಯಕ್ರಮಾಧಿಕಾರಿ ಡಾ. ಲೋಕೇಶ್ ಕೆ ಪಿ,  ಘಟಕ-೨ರ ಕಾರ್ಯಕ್ರಮಾಧಿಕಾರಿಗಳಾದ ಹುಲ್ಲೇರಪ್ಪ ಸೇರಿದಂತೆ ಮತ್ತಿತರರು ಭಾಗವಹಿಸಿದ್ದರು.

ರಸಪ್ರಶ್ನೆ ಸ್ಪರ್ಧೆಯಲ್ಲಿ 5 ತಂಡಗಳು ಭಾಗವಹಿಸಿದ್ದವು. ಎರಡು ತಂಡಗಳು ತಲಾ ಮೊದಲ ಹಾಗೂ ದ್ವಿತೀಯ ಬಹುಮಾನಕ್ಕೆ ಆಯ್ಕೆಯಾದವು. ವಿದ್ಯಾರ್ಥಿಗಳು ರಕ್ತದಾನ ಮಾಡುವ ಮೂಲಕ ಅಮೂಲ್ಯ ಜೀವಗಳ ಉಳಿಸಲು ಸಹಾಯ ಮಾಡುವುದರೊಂದಿಗೆ ರಸಪ್ರಶ್ನೆ ಸ್ಪರ್ಧೆಯಲ್ಲಿ ಆರೋಗ್ಯದ ಅರಿವು ಪಡೆದುಕೊಂಡರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!