Friday, September 20, 2024

ಪ್ರಾಯೋಗಿಕ ಆವೃತ್ತಿ

ಆರೋಗ್ಯ ಸಮಸ್ಯೆ ನಿಯಂತ್ರಣಕ್ಕೆ ಯೋಗವೇ ಮದ್ದು – ಶಿವರುದ್ರಸ್ವಾಮಿ

ಇಂದಿನ ದಿನಗಳಲ್ಲಿ ಬಾಧಿಸುತ್ತಿರುವ ಆರೋಗ್ಯ ಸಮಸ್ಯೆ ನಿಯಂತ್ರಣಕ್ಕಾಗಿ ಮತ್ತು ಸದೃಢ ದೇಹಕ್ಕಾಗಿ ಯೋಗವನ್ನು ಪ್ರತಿನಿತ್ಯ ಅಭ್ಯಾಸ ಮಾಡುವುದು ಅವಶ್ಯಕ ಎಂದು ಯೋಗ ಗುರು ಎಚ್‌.ವಿ.ಶಿವರುದ್ರಸ್ವಾಮಿ ತಿಳಿಸಿದರು.

ಮಂಡ್ಯ ಹೊರ ವಲಯದ ಪ್ರತಿಷ್ಠಿತ ಅನಿಕೇತನ ವಿದ್ಯಾ ಸಂಸ್ಥೆ ಶಾಲಾ ಮಕ್ಕಳಿಗೆ ಉಸಿರಾಟದ ವ್ಯಾಯಾಮ, ಓಂಕಾರ, ಧ್ಯಾನ, ಪ್ರಾಣಾಯಾಮ ಸರಳ ಆಸನಗಳನ್ನು ಹೇಳಿಕೊಟ್ಟರು.

ಯೋಗ ಸಾಧನೆಯು ಚಿಕ್ಕವಯಸ್ಸಿನಲ್ಲಿಯೇ ಅಳವಡಿಸಿಕೊಂಡರೆ ದೈಹಿಕ ಮಾನಸಿಕವಾಗಿ ಸದೃಢ ಹೊಂದಿ ಉತ್ತಮ ಪ್ರಜೆಗಳಾಗಿ ಹೊರಹೊಮ್ಮುವುದರಲ್ಲಿ ಸಂದೇಹವಿಲ್ಲ, ಪ್ರಸ್ತುತ ಇಂದಿನ ಜೀವನ ಶೈಲಿಯಿಂದ ಮಾನಸಿಕ ಖಿನ್ನತೆ, ರಕ್ತದೊತ್ತಡ, ಸಕ್ಕರೆ ಕಾಯಿಲೆ, ಹೃದಯ ಸಂಬಂಧಿಸಿದೆ ಸಮಸ್ಯೆಗಳಿಗೆ ಯೋಗ ಪೂರಕವಾಗಿ ಸಹಕಾರಿಯಾಗಲಿದೆ ಎಂದು ತಿಳಿಸಿದರು.

ಪ್ರಾಂಶುಪಾಲ ಡಾ. ರಾಮಲಿಂಗಯ್ಯ ಅವರು, ಮಕ್ಕಳು ಶಾಲಾ ಹಂತದಲ್ಲಿ ಯೋಗ ಕಲಿಕೆಯಿಂದ ದೈಹಿಕ ಮತ್ತು ಮಾನಸಿಕ ಸದೃಢತೆ ಸಾಧಿಸುವುದರ ಜೊತೆಗೆ ಸಕಾರಾತ್ಮಕ ಭಾವನೆಗಳನ್ನು ಬೆಳೆಸಿಕೊಳ್ಳಬೇಕು. ವಿವಿಧ ಆಸನ, ಪ್ರಾಣಾಯಾಮ ಕಲಿಕೆಯಿಂದ ಮಕ್ಕಳಲ್ಲಿ ಬರುವ ಉಸಿರಾಟ ತೊಂದರೆ, ಶ್ವಾಸಕೋಶ ಸರಾಗ ಉಸಿರಾಟಕ್ಕೆ ಅನುಕೂಲವಾಗಲಿದೆ ಎಂದರು.

ಈ ಸಂದರ್ಭದಲ್ಲಿ ಅನಿಕೇತನ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಡಾಕ್ಟರ್ ಕೆ ಎಂ ಜಗದೀಶ್, ಉಪ ಪ್ರಾಂಶುಪಾಲರಾದ ಮಂಗಳಮ್ಮ, ಪ್ರೌಢಶಾಲಾ ವಿಭಾಗದ ಮುಖ್ಯ ಉಪಾಧ್ಯಾಯನಿ ತೇಜೇಶ್ವರಿ ಎನ್ ಹಾಗೂ ಶಾಲೆಯ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!