Friday, September 20, 2024

ಪ್ರಾಯೋಗಿಕ ಆವೃತ್ತಿ

ಚನ್ನಪಟ್ಟಣ – ಮದ್ದೂರು ನಡುವೆ ಗ್ರಾಮೀಣಾ ಸಾರಿಗೆ ಬಸ್ ಸೌಕರ್ಯ ಕಲ್ಪಿಸಿ

ವರದಿ : ನ.ಲಿ.ಕೃಷ್ಣ

ಚನ್ನಪಟ್ಟಣ ಹಾಗು ಮದ್ದೂರು ನಡುವಿನ ಅಂತರ ಕೇವಲ 18 ಕಿ. ಮಿ. ಇದ್ದರೂ,
ರಾಷ್ಟ್ರೀಯ ಹೆದ್ದಾರಿ ಇದಾಗಿದ್ದರೂ,  ಈ ಎರಡು ಪಟ್ಟಣಗಳ ನಡುವಿನ ಹಳ್ಳಿಗಳವರಿಗೆ ತಮ್ಮ ತಮ್ಮ ಗ್ರಾಮದಿಂದ ಪೇಟೆ ತಲುಪುವುದು ದುಸ್ಥರವಾಗಿದೆ.

ಗ್ರಾಮಾಂತರ ಸಾರಿಗೆ ವ್ಯವಸ್ಥೆ ಇಲ್ಲದ ಕಾರಣ, ಈ ಭಾಗದ ಹಳ್ಳಿಯ ಜನರು ಆಟೋಗಳನ್ನೆ ಆವಲಂಭಿಸಬೇಕಾದ ಪರಿಸ್ಥಿತಿ ಹಲವು ವರ್ಷಗಳ ಹಿಂದಿನಿಂದಲೂ ಇದೆ.

ದುಬಾರಿ ವೆಚ್ಚ ಅಸುರಕ್ಷಿತ ಪ್ರಯಾಣ ನಿಗಧಿಗಿಂತ. ಹೆಚ್ಚು ಜನರನ್ನು ಹೊತ್ತೊಯ್ಯುವಾ ಆಟೋದಲ್ಲಿ ಈ ಭಾಗದ ಹಿರಿಯ ನಾಗರೀಕರು, ವಿಧ್ಯಾರ್ಥಿಗಳು, ರೋಗಿಗಳು ಸಂಚರಿಸಬೇಕಾದ ದುಸ್ಥಿತಿ ಇದೆ.

ಹಿಂದೆ ಈ ರಸ್ತೆಯಲ್ಲಿ ಉಂಟಾಗಿದ್ದ ರಸ್ತೆ ಅವಘಡದಿಂದ ಎಚ್ಚೆತ್ತು ಕೊಂಡಿದ್ದ ಅಂದಿನ ಸರ್ಕಾರ, ಕೆಂಗಲ್ ಸಾರಿಗೆ ಹೆಸರಿನಲ್ಲಿ ರಾಮನಗರ ಡಿಪೊ‌ದಿಂದ ರಾಮನಗರ – ಮಂಡ್ಯ ಮತ್ತು ಗ್ರಾಮೀಣ ಸಾರಿಗೆ ಹೆಸರಿನಲ್ಲಿ ಮಂಡ್ಯದಿಂದ ಚನ್ನಪಟ್ಟಣ – ರಾಮನಗರಕ್ಕೆ ಸಂಚರಿಸುತ್ತಿದ್ದವು. ಕೈ ತೋರಿದಲ್ಲಿ ನಿಲುಗಡೆ ಇರುತ್ತಿದ್ದ ಈ ಸಾರಿಗೆ ಸೇವೆ ತುಂಬಾ ಉಪಯುಕ್ತ ವಾಗಿದ್ದವು. ಆದರೆ ಇತ್ತೀಚಿನ ವರ್ಷಗಳಲ್ಲಿ ಈ ಸೇವೆ ನಿಲುಗಡೆಯಾಗಿ ಈ ಭಾಗದ ಜನರು ಸಂಚಾರಕ್ಕಾಗಿ ಭವಣೆ ಪಡುವಂತಾಗಿದೆ.

ಶಾಲೆ ಕಾಲೇಜಿನ ಮಕ್ಕಳಿಗಂತು ಸಕಾಲಿಕವಾಗಿ ತರಗತಿಗಳಿಗೆ ಹಾಜರಾಗದೆ ಶೈಕ್ಷಣಿಕ ಪ್ರಗತಿ ಕುಂಠಿತಗೊಂಡಿದೆ.
ಇದೀಗ ಮದ್ದೂರು – ಚನ್ನಪಟ್ಟಣ ನಡುವೆ ಚಾಮುಂಡೇಶ್ವರಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯು ಇರುವುದರಿಂದ ಇಲ್ಲಿಗೆ ತಲುಪಲು  ನಿಲುಗಡೆಯ (ಸೆಟಲ್) ಬಸ್ಸ್ ಗಳ ಅಗತ್ಯ ತುಂಬಾ ಇದೆ.

ಶಾಲಾ-ಕಾಲೇಜು ವಿಧ್ಯಾರ್ಥಿಗಳು, ಹಿರಿಯ ನಾಗರೀಕರು ರೋಗಿಗಳು ಮತ್ತು ನಿತ್ಯ ಪ್ರಯಾಣಿಕರ ಅಗತ್ಯ ಮನಗಂಡು ಗ್ರಾಮೀಣ ಸಾರಿಗೆ ವ್ಯವಸ್ಥೆ ಮಂಡ್ಯ ಹಾಗೂ ರಾಮನಗರ ಡಿಪೊದಿಂದ ಮಾಡಿಕೊಡುವಲ್ಲಿ ಮಾನ್ಯ ಸಾರಿಗೆ ಸಚಿವರಾದ ರಾಮಲಿಂಗರೆಡ್ಡಿರವರು ಕ್ರಮ ವಹಿಸಲಿ ಎಂದು ಹಿರಿಯ ನಾಗರೀಕರಾದ ಗೊರವನಹಳ್ಳಿಯ  ಬೋರಯ್ಯ ಅವರು ಮನವಿ ಮಾಡಿದ್ದಾರೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!