Saturday, September 21, 2024

ಪ್ರಾಯೋಗಿಕ ಆವೃತ್ತಿ

ಮದ್ದೂರು | ಅಜ್ಜಹಳ್ಳಿಗೆ ಲಗ್ಗೆ ಇಟ್ಟ ಆನೆ ಹಿಂಡು

ವರದಿ : ನ.ಲಿ.ಕೃಷ್ಣ

ಅಜ್ಜಹಳ್ಳಿಗೆ ಮಂಗಳವಾರ ರಾತ್ರಿ ಆನೆಗಳ ಹಿಂಡು ಲಗ್ಗೆ ಇಟ್ಟಿವೆ. ಚನ್ನಪಟ್ಟಣ ರಾಮನಗರದಲ್ಲಿ ಪದೇ ಪದೆ ಕಾಣಿಸಿಕ್ಕೊಳ್ಳುತ್ತಿದ್ದ ಅನೆಗಳ ಈ ಹಿಂಡು ರಾತ್ರಿ ಇಲ್ಲಿಗೆ ಲಗ್ಗೆ ಇಟ್ಟಿವೆ.

ಚನ್ನಪಟ್ಟಣದ ಸೊಗಾಲ ಗ್ರಾಮದಲ್ಲಿ ಕಾಣಿಸಿಕೊಂಡಿದ್ದ ಈ ಆನೆಗಳ ಗುಂಪಿನಲ್ಲಿ ಒಂಬತ್ತು ಆನೆಗಳು ಇದ್ದು ನಿನ್ನೆ ಚನ್ನಪಟ್ಟಣ ದ ಅರಣ್ಯ ಇಲಾಖೆಯವರು ಅನೆಗಳನ್ನು ಕಾಡಿನತ್ತ ಕಳುಹಿಸಲು ಕಾರ್ಯಚರಣೆ ನಡೆಸಿದ್ದರು.

ಆದರೆ ದಿಕ್ಕು ತಪ್ಪಿದ ಆನೆಗಳು ಮದ್ದೂರು ತಾಲೂಕಿನತ್ತ ಸಂಚರಿಸಿ ಶಿಂಷಾ ನದಿ ದಾಟಿ ಅಜ್ಜಹಳ್ಳಿ ಗ್ರಾಮದ ಕಬ್ಬಿನ ಗದ್ದೆಯಲ್ಲಿ ಬೀಡು ಬಿಟ್ಟಿದ್ದು ಇದೀಗ ಐದು ಆನೆಗಳು ಕಾಣಿಸಿಕ್ಕೊಂಡಿವೆ ಎಂದು ಅರಣ್ಯ ಇಲಾಖೆ ಅಧಿಕಾರಿ ಗವಿಯಪ್ಪ ನುಡಿಕರ್ನಾಟಕದ ಜೊತೆ ಮಾತನಾಡಿ ಮಾಹಿತಿ ನೀಡಿದರು.

ಜನರು ಆನೆಗಳನ್ನು ಬೆದರಿಸುವ ಕಾರ್ಯಕ್ಕೆ ಮುಂದಾಗದೆ ಶಾಂತಿ ರೀತಿಯಲ್ಲಿ ವರ್ತಿಸಲು ಮನವಿ ಮಾಡಿರುವ ಗವಿಯಪ್ಪ ಇಂದು ರಾತ್ರಿ ಕಾರ್ಯಚರಣೆ ನಡೆಸಿ ಅನೆಗಳನ್ನು ಕಾಡಿನತ್ತ ಕಳುಹಿಸಲಾಗುವುದು ಎಂದಿದ್ದಾರೆ.

ಆನೆ ಲಗ್ಗೆ ಇಟ್ಟ ಬಗ್ಗೆ ಮತ್ತು ಬೆಳೆ ಹಾನಿ ಕುರಿತು ಮುಖಂಡ ಅಜ್ಜಹಳ್ಳಿ ಕುಮಾರ್ ಆತಂಕ ವ್ಯಕ್ತಪಡಿಸಿದ್ದು, ರಾತ್ರಿ ವೇಳೆ ಗದ್ದೆಗೆ ಪಂಪಸೆಟ್ ನಲ್ಲಿ ನೀರು ಹಾಯಿಸಲು ಹೋಗುವ ರೈತರ ರಕ್ಷಣೆ ಹೇಗೆ? ಮುಂಜಾನೆ ವಾಯು ವಿಹಾರಕ್ಕೆ ಹೋಗುವ ಜನರಿಗೂ ಹೀಗೆ ದೀಡಿರನೆ ಲಗ್ಗೆ ಇಡುವ ಆನೆಗಳಿಂದ ಪ್ರಾಣ ಹಾನಿ ಆಗುವ ಆಪಾಯ ಇರುತ್ತದೆ ಎಂದಿದ್ದಾರೆ

ಚನ್ನಪಟ್ಟಣ ತಾಲೂಕು ಆರಣ್ಯ ಇಲಾಖೆ ಅಧಿಕಾರಿಗಳು ತಾವು ಆನೆ ಹೊರಡಿಸಲು ನಡೆಸಿದ ಕಾರ್ಯಚರಣೆ ವೇಳೆ ಅನೆಗಳು ಮದ್ದೂರು ಕಡೆ ಹೊರಟಾಗ ಮದ್ದೂರು ಅರಣ್ಯ ಇಲಾಖೆಯವರಿಗೆ ಮಾಹಿತಿ ನೀಡಬೇಕಿತ್ತು.

ಮದ್ದೂರು ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳೀಯ ಗ್ರಾಮ ಪಂಚಾಯಿತಿ ಅಧಿಕಾರಿಗಳಿಗೆ ಮಾಹಿತಿ ನೀಡಿ ಆನೆಗಳ ತಂಡ ಹಳ್ಳಿಗಳ ಬರುತ್ತಿರುವ ಮಾಹಿತಿ ನೀಡುವ ಮೂಲಕ ಜನರಿಗೆ ಸುರಕ್ಷತೆ ಒದಗಿಸಬಹುದಾಗಿತ್ತು ಅದು ಆಗಲಿಲ್ಲಾ.

ಈ ನಿಟ್ಟಿನಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಪರಸ್ಪರ ಸಂವಹನ ನಡೆಸಿ ಕಾರ್ಯ ಪ್ರವೃತ್ತವಾಗಬೇಕು ಎಂದು ಕ್ಯಾತಘಟ್ಟ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಎ. ಎಚ್. ಬಸವರಾಜ್ ಆಗ್ರಹಿಸಿದ್ದಾರೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!