Thursday, September 19, 2024

ಪ್ರಾಯೋಗಿಕ ಆವೃತ್ತಿ

ರಾಷ್ಟ್ರೀಯ ಶಿಕ್ಷಣ ನೀತಿಗೆ 3ನೇ ವರ್ಷದ ಸಂಭ್ರಮ ; ಸುಧೀರ್ ಶರ್ಮಾ

ಕೇಂದ್ರ ಸರ್ಕಾರವು ದೇಶದಾದ್ಯಂತ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಶಾಲೆಗಳಲ್ಲಿ ಜಾರಿಗೊಳಿಸಿ ಜುಲೈ 29 ಕ್ಕೆ ಮೂರು ವರ್ಷಗಳು ತುಂಬುತ್ತಿದೆ. ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಕೌಶಲ್ಯಾಧಾರಿತ ಶಿಕ್ಷಣಕ್ಕೆ ಆದ್ಯತೆ ನೀಡಲಾಗಿದೆ ಎಂದು ಕೇಂದ್ರೀಯ ವಿದ್ಯಾಲಯದ ಪ್ರಾಚಾರ್ಯ ಸುಧೀರ್ ಶರ್ಮಾ ತಿಳಿಸಿದರು.
https://youtu.be/2q6fPWsJGhE
ಮಂಡ್ಯನಗರದ ಸ್ವರ್ಣಸಂದ್ರದ ಕಾರ್ಯ ನಿರ್ವಹಿಸುತ್ತಿರುವ ಕೇಂದ್ರೀಯ ವಿದ್ಯಾಲಯದಲ್ಲಿ ಮಾಧ್ಯಮ ಪ್ರತಿನಿಧಿಗಳನ್ನುದ್ದೇಶಿಸಿ ಮಾತನಾಡಿದ ಅವರು, ರಾಷ್ಟ್ರಿಯ ಶಿಕ್ಷಣ ನೀತಿ ಪುಸ್ತಕದ ಕಲಿಕೆಗಿಂತ ರಚನಾತ್ಮಕ ಚಿಂತನೆಯನ್ನು ಉತ್ತೇಜಿಸುತ್ತದೆ. ವೈಜ್ಞಾನಿಕ ಮನೋಭಾವ ಬೆಳೆಸಿಕೊಳ್ಳಲು ಅನುವಾಗುವಂತೆ ವಿಷಯವನ್ನು ‌ಮಕ್ಕಳಿಗೆ ತಿಳಿಸಲಾಗುತ್ತದೆ ಎಂದರು.
ಸಾರ್ವಜನಿಕ ಶಿಕ್ಷಣ ಇಲಾಖೆಯ‌ ರೇಣುಕಮ್ಮ ಮಾತನಾಡಿ‌, ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಮಕ್ಕಳಲ್ಲಿ ಕೌಶಲ್ಯಾಧಾರಿತ, ಮಾನವೀಯ ಮೌಲ್ಯ, ಭಾರತದ ಸಂಸ್ಕೃತಿ, ಪರಂಪರೆಗಳನ್ನು ಬೆಳೆಸುವ ರೀತಿ ರೂಪಿಸಲಾಗಿದೆ. ಮಕ್ಕಳಿಗೆ ಅವರಿಗೆ ಆಸಕ್ತಿ ಇರುವ ಉದ್ಯೋಗದ ಕಡೆ ಪ್ರೇರಣೆ ನೀಡುತ್ತದೆ. ವಿದ್ಯಾರ್ಥಿಗಳಲ್ಲಿ 21ನೇ ಶತಮಾನದ ಕೌಶಲ್ಯವನ್ನು ಬೆಳೆಸಲು ರೂಪಿಸಲಾಗಿದೆ‌ ಎಂದರು.
ಜಾಹೀರಾತು
ಶಿಕ್ಷಣ ನೀತಿಯಲ್ಲಿ 3 ರಿಂದ 18 ವರ್ಷದವರೆಗೆ ಶಿಕ್ಷಣದ ಸ್ವರೂಪ ಮತ್ತು ಪಠ್ಯಕ್ರಮದ ಅವಶ್ಯಕತೆಗಳನ್ನು 5+3+3+4 ವಿನ್ಯಾಸ ಆಧರಿಸಿ ರೂಪಿಸಲಾಗಿದೆ. 5 ವರ್ಷಗಳ ಅಡಿಪಾಯದ ಹಂತ (2ನೇ ತರಗತಿವರೆಗೆ), 3 ವರ್ಷಗಳ ಪೂರ್ವ ಸಿದ್ದತಾ ಹಂತ (3 ರಿಂದ 5), 3 ವರ್ಷಗಳ ಮಧ್ಯಮ ಹಂತ (6 ರಿಂದ 8) ಮತ್ತು 4 ವರ್ಷಗಳ ದ್ವಿತೀಯ ಹಂತ (9 ರಿಂದ 12ವರೆಗೆ) ಮಾಡಲಾಗಿದೆ ಎಂದರು.
ಜವಾಹರ್ ನವೋದಯ ವಿದ್ಯಾಲಯದ ಪ್ರಾಚಾರ್ಯ ಉಮಾಪತಿ ರೆಡ್ಡಿ ಮಾತನಾಡಿ, ಮಕ್ಕಳಿಗೆ ಶಿಕ್ಷಣ ಪಡೆಯುವಾಗ ಭಯವನ್ನು ಹೋಗಲಾಡಿಸಿ ಪ್ರಶ್ನೆ ಕೇಳುವ ಮನೋಭಾವ ಬೆಳೆಸಬೇಕು, ಇದರಿಂದ ಮಕ್ಕಳಲ್ಲಿ ಕಲಿಕೆ ಹೆಚ್ಚುತ್ತದೆ ಎಂದರು
ಗೋಷ್ಠಿಯಲ್ಲಿ ಡಯಟ್ ನ ಭಾನು ಕುಮಾರ್, ವಾರ್ತಾ ಮತ್ತು ಸಾರ್ವಜನಿಕ ಶಿಕ್ಷಣ ಇಲಾಖೆ ಸಹಾಯಕ ನಿರ್ದೇಶಕಿ ನಿರ್ಮಲ ಎಸ್.ಹೆಚ್ ಉಪಸ್ಥಿತರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!