Thursday, September 19, 2024

ಪ್ರಾಯೋಗಿಕ ಆವೃತ್ತಿ

ಚಿನ್ನದ ಸರಗಳ ವಶ : ಆರೋಪಿಯ ಬಂಧನ

ನಾಗಮಂಗಲದ ಎಂ.ಆರ್.ಪಿ ಕಲ್ಯಾಣ ಮಂಟಪದಲ್ಲಿ ಮಧುವೆ ಕಾರ್ಯ ನಡೆಯುತ್ತಿದ್ದ ವೇಳೆ 15 ವರ್ಷದ ಹೆಣ್ಣು ಮಗುವಿನ ಕುತ್ತಿಗೆಯಿಂದ, 12 ಗ್ರಾಂ ಚಿನ್ನದ ಸರ ಕದ್ದು ಪರಾರಿಯಾಗಿದ್ದ ಸರಣೀ ಸರಗಳ್ಳನನ್ನು ಪೋಲೀಸರು ಪತ್ತೆಹಚ್ಚದ್ದಾರೆ.

ದಿನಾಂಕ 06-05-2022 ರಂದು ವಿ.ವಸಂತಕುಮಾರ್ ಮತ್ತು ಕುಟುಂಬದವರು, ಬೆಂಗಳೂರಿನಿಂದ ಸಂಬಂಧಿಕರ ಮದುವೆಗೆ ನಾಗಮಂಗಲಕ್ಕೆ ಬಂದಿದ್ದರು. ಮದುವೆಯ ಕಾರ್ಯಕ್ರಮದಲ್ಲಿ ವಸಂತಕುಮಾರ್ ರವರ ಮಗಳು ಊಟದ ಹಾಲ್ ನಿಂದ ಆಚೆ ಬರುವ ಸಮಯದಲ್ಲಿ ನನ್ನ ಕುತ್ತಿಗೆಗೆ ಕೈ ಹಾಕಿ ಚಿನ್ನದ ಸರವನ್ನು ಕಿತ್ತುಕೊಂಡು ಹೋದ ಎಂದು  ಅವರ ಕುಟುಂಬದವರು ದೂರು ನೀಡಿದ್ದರು.

ಈ ಪ್ರಕರಣದ ಆರೋಪಿಯನ್ನು ಪತ್ತೆ ಹಚ್ಚಲು ಜಿಲ್ಲಾ ಪೋಲೀಸ್ ಅಧೀಕ್ಷಕರ ಮಾರ್ಗದರ್ಶನದಂತೆ, ಡಿ.ಎಸ್.ಪಿ. ನಾಗಮಂಗಲ ಮತ್ತು ಸಿ.ಪಿ.ಐ. ನಾಗಮಂಗಲ ವೃತ್ತ ಪೋಲೀಸ್ ರನ್ನು ಒಳಗೊಂಡಂತೆ ವಿಶೇಷ ತಂಡವನ್ನು ರಚಿಸಿಲಾಗಿತ್ತು.

ಆರೋಪಿಯನ್ನು ದಸ್ತಗಿರಿಮಾಡಿ ಕಂಡುಹಿಡಿದು ವಿಚಾರಣೆಗೆ ಒಳಪಡಿಸಿದಾಗ ಆರೋಪಿಯು ಒಟ್ಟು ಐದು ಪ್ರಕರಣಗಳಲ್ಲಿ ಭಾಗಿಯಾಗಿರುವುದು ಕಂಡುಬಂದಿದೆ.

ಒಟ್ಟು ಐದು ಪ್ರಕರಣಗಳಲ್ಲಿ ಆರೋಪಿಯು ಸುಲಿಗೆ ಮಾಡಿದ್ದ ಪ್ರಮಾಣ 150 ಗ್ರಾಂ ತೂಕದ 5 ಚಿನ್ನದ ಸರಗಳು(7.50.000 ಲಕ್ಷ ಬೆಲೆಬಾಳುವ) ವಶಪಡಿಸಿಕೊಳ್ಳಲಾಗಿರುತ್ತದೆ.

ಈ ಸರಗಳ್ಳ ಆರೋಪಿಯನ್ನು ಪತ್ತೆಹಚ್ಚಿದ ಕಾರ್ಯಕ್ಕೆ ಪೊಲೀಸ್ ತಂಡವನ್ನು ಜಿಲ್ಲಾ ಪೊಲೀಸ್ ಅಧೀಕ್ಷಕರು ಶ್ಲಾಘಿಸಿರುತ್ತಾರೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!