Saturday, July 13, 2024

ಪ್ರಾಯೋಗಿಕ ಆವೃತ್ತಿ

ಕೌಶಲ್ಯಾಭಿವೃದ್ಧಿ ಉದ್ಯಮಶೀಲತೆ ಸಭೆ

ಮಂಡ್ಯದ ಜಿಲ್ಲಾಧಿಕಾರಿಗಳ ಕಚೇರಿಯ ಸಭಾಂಗಣದಲ್ಲಿ ಕೌಶಲ್ಯಾಭಿವೃದ್ಧಿ ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ವತಿಯಿಂದ ಜಿಲ್ಲಾ ಕೌಶಲ್ಯ ಮಿಷನ್ ಸಮಿತಿ ಸಭೆ ಹಾಗೂ ಪಿ.ಎಂ. ಸ್ವನಿಧಿ ಮತ್ತು ಡೇ- ನಲ್ಮ್ ಯೋಜನೆಯ ಪ್ರಗತಿ ಪರಿಶೀಲನಾ ಸಭೆಯು ಜಿಲ್ಲಾಧಿಕಾರಿ ಎಸ್.ಅಶ್ವತಿ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.

CMKKY ಮತ್ತು PMKVY ತರಬೇತಿಯ ವರದಿ, ಆರೋಗ್ಯ ಕ್ಷೇತ್ರದ ತರಬೇತಿ ವರದಿ, ಉದ್ಯೋಗ ಮೇಳ, ಆಜಾದಿ ಕಾ ಅಮೃತ್ ಮಹೋತ್ಸವ್ ಅಂಗವಾಗಿ ಯುವ ಸಪ್ತಾಹ ಕಾರ್ಯಕ್ರಮ, ನಾಂದಿಪೌಂಡೇಶನ್ ರವರ ಸಹಭಾಗಿತ್ವದಲ್ಲಿ ಕೌಶಲ್ಯ ತರಬೇತಿ ನೀಡುವ ಕಾರ್ಯಕ್ರಮ ಹಾಗೂ ಜಿಲ್ಲಾ ಕೌಶಲ್ಯ ಉಪಸಮಿತಿಗಳ ಪ್ರಗತಿ ವರದಿ, ವಿದ್ಯಾಪೀಠಗಳಿಗೆ ಸಂಬಂಧಿಸಿದಂತೆ ಮಾಹಿತಿ ಹಾಗೂ ಪಿ.ಎಂ.ಸ್ವನಿಧಿ ಮತ್ತು ಡೇ- ನಲ್ಮ್ ಯೋಜನೆ ಸಂಬಂಧಿಸಿದ ಮಾಹಿತಿಗಳನ್ನು ಪಡೆದರು.

ಸಭೆಯಲ್ಲಿ ನಗರಸಭೆಯ ಆಯುಕ್ತರಾದ ಆರ್. ಮಂಜುನಾಥ್,ನಗರಾಭಿವೃದ್ಧಿ ಕೋಶದ ಜಿಲ್ಲಾ ಯೋಜನಾಧಿಕಾರಿ ತುಷಾರಮಣಿ, ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿ ಎನ್.ಆರ್. ವೇಣುಗೋಪಾಲ್, ಲೀಡ್ ಬ್ಯಾಂಕ್ ವ್ಯವಸ್ಥಾಪಕರಾದ ದೀಪಕ್ ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ. ಸಂಜಯ್ ಮಿಷನ್ ಮ್ಯಾನೇಜರ್ ಯೋಗೇಶ್ ಸೇರಿದಂತೆ ಮತ್ತಿತರರು ಹಾಜರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!