Wednesday, November 18, 2026

ಪ್ರಾಯೋಗಿಕ ಆವೃತ್ತಿ

ತಮಿಳುನಾಡಿಗೆ ನೀರು ಸರ್ಕಾರದ ಏಕಪಕ್ಷೀಯ ನಿರ್ಧಾರ; ಸಿ.ಟಿ ರವಿ

ತಮಿಳುನಾಡಿಗೆ ನೀರು ಹರಿಸಿರುವ ಸರ್ಕಾರ ಯಾವ ಉದ್ದೇಶಕ್ಕಾಗಿ ಸಭೆ ಕರೆದಿದೆ, ನೀರು ಬಿಡುವ ಮುನ್ನ ಸರ್ವ ಪಕ್ಷದವರನ್ನ ಕೇಳಿದ್ದೀರಾ ? ಇದು ಸರ್ಕಾರದ ಏಕಪಕ್ಷಿಯ ನಿರ್ಧಾರವಾಗಿದೆ, ರೈತರಿಗೆ ಮಾಡಿದ ದ್ರೋಹ ಮತ್ತು ತಪ್ಪನ್ನು ಎತ್ತಿ ತೋರಿಸಲು ಬಿಜೆಪಿ ಪಕ್ಷ ಸರ್ವಪಕ್ಷ ಸಭೆಯಲ್ಲಿ ಭಾಗವಹಿಸಲು ತೀರ್ಮಾನಿಸಿದೆ ಎಂದು ಬಿಜೆಪಿ ನಾಯಕ ಸಿ.ಟಿ.ರವಿ ಹೇಳಿದರು.

ಮಂಡ್ಯದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾವೇರಿ ಕೊಳ್ಳದ ಜಲಾಶಯಗಳಿಂದ ತಮಿಳುನಾಡಿಗೆ ರಾಜ್ಯ ಕಾಂಗ್ರೆಸ್ ಸರ್ಕಾರ ನೀರು ಹರಿಸಿ ಮಾಡಿರುವ ಪಾಪಕ್ಕೆ ಅಧಿಕೃತ ಮುದ್ರೆ ಒತ್ತಿಸಿಕೊಳ್ಳಲು ಸರ್ವ ಪಕ್ಷ ಸಭೆ ಕರೆದಿದೆ. ಚುನಾವಣೆಗೂ ಮುನ್ನ ನಮ್ಮ ನೀರು ನಮ್ಮ ಹಕ್ಕು ಎಂದು ಮೇಕೆದಾಟು ಪಾದಯಾತ್ರೆ ನಡೆಸಿದ ಕಾಂಗ್ರೆಸ್ ನಾಯಕರು ಕಾವೇರಿ ನದಿ ನೀರು ಹಂಚಿಕೆ ವಿಚಾರದಲ್ಲಿ ರೂಪಿಸಲಾಗಿರುವ ಸಂಕಷ್ಟ ಸೂತ್ರವನ್ನು ಮರೆತು ತಮಿಳುನಾಡಿಗೆ ನೀರು ಹರಿಸಿದೆ ಎಂದ ಅವರು ಕಾಂಗ್ರೆಸ್ ಸರ್ಕಾರ ಮಂಡ್ಯ ಜಿಲ್ಲಾ ರೈತರಿಗೆ ಶಾಪ ವಾಗಿದ್ದರೆ, ತಮಿಳುನಾಡಿಗೆ ವರವಾಗಿದೆ ಎಂದು ಹೇಳಿದರು.

ಬಿಜೆಪಿ ಶಾಸಕರು ಪಕ್ಷ ತೊರೆಯುವ ಬಗ್ಗೆ ಯಾವ ಭಯ ಕಾಡುತ್ತಿದ್ದೀಯೊ ಗೊತ್ತಿಲ್ಲ, ಮರ್ಯಾದೆ ನೀಡಿ, ಪ್ರೀತಿಯಿಂದ ಕೂಗಿಲ್ಲ. ಅವರೇ ಹೇಳಿದಂತೆ ಅಲ್ಲಿಗೆ ಹೋದವರು ಲಾಸ್ಟ್ ಬೆಂಚ್ ನಲ್ಲಿರಬೇಕು. ಇಂತಹ ಸ್ಥಿತಿಯಲ್ಲಿ ಅಲ್ಲಿಗೆ ಹೋಗುತ್ತಿದ್ದಾರೆ ಎಂದರೆ ಯಾವ ಭಯ ಇರಬಹುದು ಎಂದರು.

ಬಿಜೆಪಿ ಪಕ್ಷ ಆಪರೇಷನ್ ಕಮಲ ಮಾಡಿದಾಗ ಭಿನ್ನ ಪರಿಸ್ಥಿತಿ ಇತ್ತು, ಯಾವುದೇ ಪಕ್ಷಕ್ಕೆ ಸ್ಪಷ್ಟ ಬಹುಮತ ಇರಲಿಲ್ಲ, ಅಲ್ಲದೆ ಕಾಂಗ್ರೆಸ್- ಜೆಡಿಎಸ್ ಸಮ್ಮಿಶ್ರ ಸರ್ಕಾರದ ಅದ್ವಾನದಿಂದ ಆ ಪಕ್ಷಗಳ ಶಾಸಕರು ಬಿಜೆಪಿ ಪಕ್ಷದತ್ತ ಮುಖ ಮಾಡಿದ್ದರೂ ಎಂದು ಆಪರೇಷನ್ ಕಮಲದ ಬಗ್ಗೆ ಸಮರ್ಥಿಸಿಕೊಂಡರು.

ಗ್ಯಾರಂಟಿ ಯೋಜನೆಗಳಿಗೆ ಹಣ ಸರಿದೂಗಿಸಲು ಎಲ್ಲಾ ಇಲಾಖೆಗಳಲ್ಲಿ ಅನುದಾನ ಕಡಿತ ಮಾಡುತ್ತಿದ್ದು. ಮಧ್ಯ ಮಾರಾಟದಲ್ಲಿ ಶೇ 15 ರಷ್ಟು ಕುಸಿತ ಗೊಂಡಿದ್ದು. ಸರ್ಕಾರದ ಆದಾಯಕ್ಕೆ ಖೋತಾ ಬಿದ್ದಿದೆ ಕಾಂಗ್ರೆಸ್ ಸರ್ಕಾರದಲ್ಲಿ ಜನತೆ ಮತ್ತಷ್ಟು ಸಂಕಷ್ಟಕ್ಕೆ ಸಿಲುಕಲಿದ್ದಾರೆ ಎಂದು ಹೇಳಿದರು.

ಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಸಿ.ಪಿ.ಉಮೇಶ್, ಮುಖಂಡ ಸಿದ್ದರಾಮಯ್ಯ ಉಪಸ್ಥಿತರಿದ್ದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ