Thursday, September 19, 2024

ಪ್ರಾಯೋಗಿಕ ಆವೃತ್ತಿ

ಚಂದ್ರನ ದಕ್ಷಿಣ ಧ್ರುವವನ್ನು ತಲುಪಿದ ವಿಶ್ವದ ಮೊದಲ ದೇಶ ಭಾರತ !

ಚಂದ್ರನ ದಕ್ಷಿಣ ಧ್ರುವವನ್ನು ತಲುಪಿದ ವಿಶ್ವದ ಮೊದಲ ದೇಶ ಎಂಬ ಹೆಗ್ಗಳಿಕೆಗೆ ಭಾರತ ಪಾತ್ರವಾಗಿದೆ.

ಭಾರತದ ಬಾಹ್ಯಾಕಾಶ ಸಂಸ್ಥೆ(ಇಸ್ರೋ) ರೂಪಿಸಿದ ಮಾನವ ರಹಿತ ಚಂದ್ರಯಾನ-3 ರೊಬೊಟಿಕ್ ಮೂನ್ ಲ್ಯಾಂಡರ್, ಬುಧವಾರ ಸಂಜೆ 6ಗಂಟೆ 4 ನಿಮಿಷಕ್ಕೆ ಚಂದ್ರನ ದಕ್ಷಿಣ ಧ್ರುವ ಪ್ರದೇಶವನ್ನು ಸ್ಪರ್ಶಿಸುವ ಮೂಲಕ ಈ ಐತಿಹಾಸಿಕ ಸಾಧನೆಯನ್ನು ಭಾರತ ತನ್ನದಾಗಿಸಿಕೊಂಡಿದೆ.

ವಿಶ್ವದ 195 ರಾಷ್ಟ್ರಗಳ ಪೈಕಿ ರಷ್ಯಾ, ಅಮೇರಿಕಾ ಮತ್ತು ಚೀನಾ ದೇಶಗಳು ಚಂದ್ರನನ್ನು ತಲುಪಿವೆ. ಆದರೆ ದಕ್ಷಿಣ ಧ್ರುವದಲ್ಲಿ ಲ್ಯಾಂಡಿಂಗ್ ಮಾಡಿ ಯಶಸ್ವಿಯಾದ ಪ್ರಥಮ ದೇಶವೆಂದರೆ ಅದು ಭಾರತ ಮಾತ್ರ. ಇತರೆ ಮೂರು ದೇಶಗಳು ಉತ್ತರ ಧ್ರುವದಲ್ಲಿ ಲ್ಯಾಂಡಿಂಗ್ ಮಾಡಿ ಸಂಶೋಧನೆ ಕೈಗೊಂಡಿವೆ.

ಇದೇ ದಕ್ಷಿಣ ಧ್ರುವ ಪ್ರದೇಶಕ್ಕೆ ತೆರಳುತ್ತಿದ್ದ ರಷ್ಯಾದ ಬಾಹ್ಯಾಕಾಶ ನೌಕೆಯು ಕಕ್ಷೆಯ ಕುಶಲತೆಯ ಸಮಯದಲ್ಲಿ ವಿಫಲಗೊಂಡು ಚಂದ್ರನ ಮೇಲ್ಮೈಗೆ ಅಪ್ಪಳಿಸಿ, ಇತ್ತೀಚೆಗೆ ವಿಫಲತೆ ಕಂಡಿತ್ತು. ಅದಾದ ಕೆಲವೇ ದಿನಗಳಲ್ಲಿ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ ಪ್ರಯೋಗ ಯಶಸ್ವಿಯಾಗಿರುವುದು ಇಡೀ ವಿಶ್ವವೇ ಬೆರಗಾಗುವಂತೆ ಮಾಡಿದೆ.

ಚಂದ್ರನ ದಕ್ಷಿಣ ಧ್ರುವದ ಬಗ್ಗೆ ಬಾಹ್ಯಾಕಾಶ ಸಂಸ್ಥೆಗಳು ಮತ್ತು ವಿಜ್ಞಾನಿಗಳಿಗೆ ಬಹಳ ಹಿಂದಿನಿಂದಲೂ ಆಸಕ್ತಿಯನ್ನು ಹೊಂದಿದ್ದಾರೆ. ಏಕೆಂದರೆ ಈ ಪ್ರದೇಶದ ನೆರಳಿನ ಕುಳಿಗಳು ಚಂದ್ರನ ಮೇಲ್ಮೈಯಲ್ಲಿ ಬೇರೆಡೆಗಿಂತ ಹೆಚ್ಚಿನ ನೀರಿನ ಮಂಜುಗಡ್ಡೆಯನ್ನು ಹಿಡಿದಿಟ್ಟುಕೊಳ್ಳುತ್ತವೆ ಎಂದು ಭಾವಿಸಲಾಗಿದೆ, ಆದ್ದರಿಂದ ದೀರ್ಘಕಾಲೀನ ಮಾನವ ವಸಾಹತುಗಳನ್ನು ಸ್ಥಾಪಿಸಲು ಇದು ನಿರ್ಣಾಯಕ ಪ್ರಾಮುಖ್ಯತೆಯನ್ನು ಹೊಂದಿದೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!