Friday, September 20, 2024

ಪ್ರಾಯೋಗಿಕ ಆವೃತ್ತಿ

ಮಳವಳ್ಳಿ| ಶಾಸಕರ ಅವಹೇಳನ; ಕೃಷ್ಣೇಗೌಡ ಬಂಧನಕ್ಕೆ ಆಗ್ರಹಿಸಿ ಪ್ರತಿಭಟನೆ

ಮಳವಳ್ಳಿ ಶಾಸಕ ಪಿ.ಎಂ ನರೇಂದ್ರಸ್ವಾಮಿ ಅವರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿರುವ ಸಿಪಿಐಎಂ ಕೃಷ್ಣೇಗೌಡ ವಿರುದ್ದ ದೂರು ದಾಖಲಿಸಿಕೊಂಡು ಕೂಡಲೇ ಬಂಧಿಸಬೇಕೆಂದು ಆಗ್ರಹಿಸಿ ದಲಿತರು ಮುಖಂಡರು ಡಿವೈಎಸ್ಪಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು

ಮಳವಳ್ಳಿ ತಾಲ್ಲೂಕು ಪಂಚಾಯಿತಿ ಮಾಜಿ ಉಪಾಧ್ಯಕ್ಷ ಮಾರ್ಕಾಲು ಮಾಧು ಮಾತನಾಡಿ, ಕೃಷಿ ಕೂಲಿಕಾರರ ಬೇಡಿಕೆಗಳನ್ನು ಈಡೇರಿಸಬೇಕೆಂದು ಒತ್ತಾಯಿಸಿ ಪ್ರತಿಭಟನೆ ನಡೆಸುವ ನೆಪದಲ್ಲಿ ಶಾಸಕ ಪಿ.ಎಂ ನರೇಂದ್ರಸ್ವಾಮಿ ವಿರುದ್ದ ಅವಹೇಳನವಾಗಿ ಮಾತನಾಡುವುದು ಖಂಡನೀಯ, ಬಂಗಲೆಯಲ್ಲಿ ವಾಸ ಮಾಡುವ ಕೃಷ್ಣೇಗೌಡ ಅಪ್ಪ ಅಮ್ಮನಿಗೆ ಊಟ ಕೊಡದೇ ಹಳೇಯ ಮನೆಯಲ್ಲಿ ಇರಿಸಿ ಬೇರೆಯವರ ಅಪ್ಪ ಅಮ್ಮನ ಬಗ್ಗೆ ಮಾತನಾಡುತ್ತಾರೆ, ದಲಿತನ್ನಾಗಿ ಹುಟ್ಟಿ ಪಾಳೇಗಾರಿಕೆಯಂತೆ ಮಾತನಾಡುತ್ತಾನೆಂದು ಹೇಳಿಕೆ ನೀಡಿರುವುದು ಖಂಡನೀಯ, ದಲಿತ ಶಾಸಕರು, ದಕ್ಷವಾಗಿ ಮಾತನಾಡಿದರೇ ಪಾಳೇಗಾರಿಗೆ ದುರಂಕಾರ ಎನ್ನುವ ಜಾತಿವಾದಿ ಕೃಷ್ಣೇಗೌಡ ಸಂಘಟನೆಯಲ್ಲಿ ಯಾವ ರೀತಿ ನ್ಯಾಯ ಕೊಡಿಸುತ್ತಾರೆಂದು ಕಿಡಿಕಾರಿದರು.

ಮಳವಳ್ಳಿ ತಾಲ್ಲೂಕು ಪಂಚಾಯಿತಿ ಆವರಣದಲ್ಲಿ ಕೃಷಿ ಕೂಲಿಕಾರರ ಬೇಡಿಕೆಗಳ ಈಡೇರಿಗಾಗಿ ನಡೆದಿರುವ ಪ್ರತಿಭಟನೆಯಲ್ಲಿ ಕೃಷಿಕೂಲಿಕಾರರರಿಗೆ ಸಂಬಂಧಿಸಿದಂತೆ ಕೃಷ್ಣೇಗೌಡ ಮಾತನಾಡಬೇಕಿತ್ತು. ಆದರೇ ಶಾಸಕರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿರುವುದು ಖಂಡನೀಯ ಎಂದು ಕಿಡಿಕಾರಿದರು.

ಪ್ರತಿಭಟನೆಯಲ್ಲಿ ಮುಖಂಡರಾದ ಪ್ರಭುಲಿಂಗು, ಸಾಗ್ಯ ಕೆಂಪಣ್ಣ, ವೇದಮೂರ್ತಿ, ಮಹೇಶ್, ಚಿಕ್ಕಸ್ವಾಮಿ, ಸಂತೋಷ್, ಕಿರಣ್ ಶಂಕರ್, ಸುಂದರ್, ಮುತ್ತುರಾಜ್, ಜಗದೀಶ್, ಪ್ರಕಾಶ್, ಶಿವಕುಮಾರ್ ಸೇರಿದಂತೆ ಇತರರು ಇದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!