Thursday, November 19, 2026

ಪ್ರಾಯೋಗಿಕ ಆವೃತ್ತಿ

ಮಂಡ್ಯನಗರದ ವಿವೇಕಾನಂದ ಜೋಡಿ ರಸ್ತೆಯಲ್ಲಿ ‘ರಸ್ತೆ ದಿಬ್ಬ’ ನಿರ್ಮಿಸಲು ಒತ್ತಾಯ

ಮಂಡ್ಯನಗರದ ಅಶೋಕ ನಗರ ಬಡಾವಣೆಯ ವಿವೇಕಾನಂದ ಜೋಡಿ ರಸ್ತೆಯಲ್ಲಿ ಅತ್ಯಾಧಕ ವಾಹನ ದಟ್ಟಣೆ ಹೆಚ್ಚಾಗಿದ್ದು, ಚಾಲಕರು ವಾಹನವನ್ನು ವೇಗದಲ್ಲಿ ಚಾಲನೆ ಮಾಡುವುದರಿಂದ ಮಹಿಳೆಯರು, ಮಕ್ಕಳು ಹಾಗೂ ವೃದ್ಧರು ಜೀವ ಕೈಯಲ್ಲಿ ಹಿಡಿದು ರಸ್ತೆ ದಾಟುವ ಪರಿಸ್ಥಿತಿ ನಿರ್ಮಾಣವಾಗಿದೆ.

ಮಂಡ್ಯ ನಗರದ ಪ್ರತಿಷ್ಠಿತ ಬಡಾವಣೆಗಳಲ್ಲೊಂದಾದ ಅಶೋಕ ನಗರ, ಮಂಡ್ಯದ ಹೃದಯ ಭಾಗದಲ್ಲಿರುವುದರಿಂದ ಈ ಬಡಾವಣೆಯಲ್ಲಿ ಶಾಲೆಗಳು, ಆಸ್ಪತ್ರೆಗಳು, ಲ್ಯಾಬ್ ಗಳು, ಪಾರ್ಕ್ ಇರುವುದರಿಂದ ಜನ ಸಂದಣಿ ಹೆಚ್ಚಾಗಿವೆ. ಆದ್ದರಿಂದ ಈ ರಸ್ತೆಯಲ್ಲಿ ರಸ್ತೆ ದಿಬ್ಬ( ಹಂಪ್ಸ್)ಗಳನ್ನು ನಿರ್ಮಿಸುವಂತೆ ನಾಗರೀಕರು ಆಗ್ರಹಿಸಿದ್ದಾರೆ.

ಈ ಬಡಾವಣೆ ಮಧ್ಯ ಭಾಗದಲ್ಲಿ ವಿಶಾಲವಾದ ಸಿಮೆಂಟ್ ರಸ್ತೆಯನ್ನು ನಿರ್ಮಿಸಲಾಗಿದೆ. ಆದರೆ ರಸ್ತೆ ಇಕ್ಕೆಲಗಳಲ್ಲಿ ಅನಧಿಕೃತವಾಗಿ ವಾಹನಗಳನ್ನು ಪಾರ್ಕಿಂಗ್ ಮಾಡುವುದು, ಅಲ್ಲವೇ ಬೀದಿ ಬದಿಯ ವ್ಯಾಪಾರಿಗಳು ವಸ್ತುಗಳನ್ನು ಮಾರಾಟ ಮಾಡುವುದರಿಂದ ವಾಹನಗಳ ಸಂಚಾರಕ್ಕೆ ಅಡ್ಡಿಯಾಗುತ್ತಿದೆ ಎಂಬುದು ಸ್ಥಳೀಯರ ದೂರಾಗಿದೆ.

ಈ ರಸ್ತೆಯು ಬೆಂಗಳೂರು – ಮೈಸೂರು ಮುಖ್ಯ ರಸ್ತೆಗೆ ಸಂಪರ್ಕ ಕಲ್ಪಿಸುತ್ತದೆಯಲ್ಲದೇ ಮಂಡ್ಯ ರೈಲ್ವೇ ನಿಲ್ದಾಣಕ್ಕೆ ಹೋಗುವವರು, ಬರುವವರು, ಅಲ್ಲದೇ ಬನ್ನೂರು, ಟಿ. ನರಸೀಪುರ ಹಾಗೂ ಅರಕೆರೆ ಮಾರ್ಗವಾಗಿ ಮೈಸೂರಿಗೆ ಪಯಣಿಸುವ ಬಸ್ಸುಗಳ ಇದೆ ದಾರಿಯಲ್ಲಿ ಸಂಚರಿಸುವುದರಿಂದ ವಾಹನದಟ್ಟಣೆ ವಿಪರೀತವಾಗಿದೆ. ಅತ್ಯಂತ ವೇಗವಾಗಿ ಬರುವ ವಾಹನಗಳಿಗೆ ನಿಯಂತ್ರಣ ಹಾಕಲು ರಸ್ತೆ ದಿಬ್ಬಗಳು ಇಲ್ಲದಿರುವುದರಿಂದ ಅಪಘಾತಗಳ ಮೇಲಿಂದಮೇಲೆ  ಸಂಭವಿಸುತ್ತಿವೆ.

ಪ್ರತಿನಿತ್ಯ ರಸ್ತೆ ಸಾರಿಗೆ ಬಸ್ಸುಗಳು ಸೇರಿದಂತೆ ಕಾರು, ಬೈಕುಗಳು ಸಾವಿರಾರು ಸಂಖ್ಯೆಯಲ್ಲಿ ಸಂಚರಿಸುವುದರಿಂದ ವೃದ್ಧರು, ಮಕ್ಕಳು ರಸ್ತೆ ದಾಟಲು ಎಣಗಾಡಬೇಕಾದ ಸ್ಥಿತಿಯಲ್ಲಿ ಇದೆ. ಅಲ್ಲದೆ ಚಾಲಕರು ವಾಹನವನ್ನು ಅಜಾಗರೂಕತೆಯಿಂದ ವೇಗವಾಗಿ ಚಾಲನೆ ಮಾಡುವುದರಿಂದ ದಿನನಿತ್ಯ ಅಪಘಾತಗಳು ಸಂಭವಿಸುತ್ತಿರುತ್ತವೆ, ಆದರಿಂದ ಅವುಗಳ ವೇಗಕ್ಕೆ ಕಡಿವಾಣ ಹಾಕಲು ರಸ್ತೆಯಲ್ಲಿ ದಿಬ್ಬ ನಿರ್ಮಿಸಬೆಂಬುದು ನಾಗರೀಕರ ಒತ್ತಾಯವಾಗಿದೆ.

ಈ ಬಗ್ಗೆ ಹಲವಾರು ಬಾರಿ ಜಿಲ್ಲಾಡಳಿತ ಹಾಗೂ ಸ್ಥಳೀಯ ಶಾಸಕರ ಗಮನಕ್ಕೆ ತಂದರು, ಯಾವುದೇ ಪ್ರಯೋಜನವಾಗಿಲ್ಲ, ಇನ್ನಾದರೂ ಜಿಲ್ಲಾಡಳಿತ ಇತ್ತ ಗಮನಹರಿಸಿ ರಸ್ತೆ ದಿಬ್ಬ ನಿರ್ಮಿಸಿ ಮುಂದೆ ಸಂಭವಿಸಬಹುದಾದ ಅನಾಹುತಗಳನ್ನು ತಪ್ಪಿಸಬೇಕೆಂದು ಸ್ಥಳೀಯರಾದ ಶ್ರೀನಿವಾಸ್ ಎಂ. ಪಟೇಲ್, ಡಿ. ಮಂಜುನಾಥ್ ಮನವಿ ಮಾಡಿದ್ದಾರೆ.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ