Thursday, September 19, 2024

ಪ್ರಾಯೋಗಿಕ ಆವೃತ್ತಿ

ಮಳವಳ್ಳಿ| ಅಗಸನಪುರ ಡೇರಿಯಲ್ಲಿ ಅವ್ಯವಹಾರ ತನಿಖೆಗೆ ಆಗ್ರಹ

ಮಳವಳ್ಳಿ ತಾಲ್ಲೂಕಿನ ಆಗಸನಪುರ ಹಾಲು ಉತ್ಪಾದಕರ ಸಹಕಾರ ಸಂಘದಲ್ಲಿ ಅವ್ಯವಹಾರ ನಡೆದಿದ್ದು, ಸೂಕ್ತ ತನಿಖೆ ನಡೆಸಿ ತಪ್ಪಿತಸ್ಥರವಿರುದ್ದ ಕ್ರಮ ಕೈಗೊಳ್ಳಬೇಕೆಂದು ಸಂಘದ ನಿರ್ದೇಶಕ ನಾಗ ಮಹದೇವ್ ಆರೋಪಿಸಿದರು.

ಅಗಸನಪುರ ಹಾಲು ಉತ್ಪಾದಕರ ಸಹಕಾರ ಸಂಘದ ವಾರ್ಷಿಕ ಸಭೆಯಲ್ಲಿ ಆರೋಪಿಸಿದ ಅವರು, ಹಾಲು ಉತ್ಪಾದಕರ ಸಹಕಾರಿ ಸಂಘದ ಹಂಗಾಮಿ ಕಾರ್ಯದರ್ಶಿಯಾಗಿ ನಾಗಅರ್ಜುನ್ ಅವರನ್ನು ಸುಮಾರು 3 ವರ್ಷಗಳ ಹಿಂದೆ ನಮ್ಮ ಆಡಳಿತ ಮಂಡಳಿಯಿಂದ ಹಂಗಾಮಿ ಕಾರ್ಯದರ್ಶಿಯಾಗಿ ನೇಮಕ ಮಾಡಿಕೊಳ್ಳಲಾಗಿತ್ತು, ಕೆಲವು ತಿಂಗಳುವರೆಗೆ ಸಭೆಯಲ್ಲಿ ಸೂಕ್ತ ಲೆಕ್ಕಪತ್ರಗಳನ್ನು ಇಟ್ಟು ಚರ್ಚಿಸುತ್ತಿದ್ದೇವು, ಅಲ್ಲಿಯವರೆವಿಗೂ ನಿಷ್ಠೆಯಿಂದ ಕಾರ್ಯ ನಿರ್ವಹಿಸುತ್ತಿದ್ದರು, ನಂತರದ ದಿನಗಳಲ್ಲಿ ಆಡಳಿತ ಮಂಡಳಿಯ ಸದಸ್ಯರ ಮಾತನ್ನು ಲೆಕ್ಕಿಸಿದೇ ಕೆಲವು ನಿದೇರ್ಶಕರ ಪರವಾಗಿ ಕೆಲಸ ನಿರ್ವಹಿಸುತ್ತಿದ್ದಾರೆಂದು ದೂರಿದರು.

ನಿರ್ದೇಶಕರು ಲೆಕ್ಕಗಳನ್ನು ಆಡಳಿತ ಮಂಡಳಿಯ ಸಭೆಯಲ್ಲಿ ಕೇಳಿದರೇ ತಪ್ಪಾದ ಲೆಕ್ಕವನ್ನು ನೀಡುತ್ತಿದ್ದಾರೆ. ಹಿಂದಿನ 21-22ನೇ ಸಾಲಿನ ಜಮಾ-ಖರ್ಚುನಲ್ಲಿ ಲೋಪದೋಶದಿಂದ ಕೂಡಿದು ಮುಂದಿನ ದಿನಗಳಲ್ಲಿ ಸಂಘದ ಆದಾಯ ಖರ್ಚು ಲೆಕ್ಕವನ್ನು ಪ್ರಮಾಣೀಕ ರೀತಿಯಲ್ಲಿ ಬರೆದು ಸಭೆಯಲ್ಲಿ ಚರ್ಚಿಸಬೇಕು ಎಂದು ತಿಳಿಸಿದರೂ ಕಾರ್ಯದರ್ಶಿ ತನ್ನ ತಪ್ಪನ್ನು ತಿದ್ದುಕೊಳ್ಳದೆ ಸಂಘಕ್ಕೆ ಸುಳ್ಳು ಲೆಕ್ಕವನ್ನು ಮುಂದುವರೆಸಿದ್ದಾರೆ, 2022-23ನೇ ಸಾಲಿನ ಜಮಾ ಖರ್ಚು ವರದಿಯನ್ನು ಸಂಪೂರ್ಣವಾಗಿ ಪರಿಶೀಲಿಸಿ ಲೋಪ ದೋಷಗಳನ್ನು ಸರಿಪಡಿಸಿ ಸಂಘಕ್ಕೆ ಕಾರ್ಯದರ್ಶಿಯಿಂದ ಬರಬೇಕಾದ ಬಾಕಿ ವಸೂಲಿ ಮಾಡಿ, ಆತನ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.

ಸಭೆಯಲ್ಲಿ ವಿವಿಧ ವಿಷಯಗಳ ಬಗ್ಗೆ ಚರ್ಚೆ ನಡೆಸಲಾಯಿತು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!