Thursday, September 19, 2024

ಪ್ರಾಯೋಗಿಕ ಆವೃತ್ತಿ

ಕಾವೇರಿ ವಿಚಾರದಲ್ಲಿ ತಮಿಳುನಾಡು- ಕರ್ನಾಟಕ ರಾಜ್ಯಗಳು ಕುಳಿತು ಮಾತಾಡಬೇಕು- ಸಂಸದೆ ಸುಮಲತಾ

ಕಾವೇರಿ ವಿಚಾರದಲ್ಲಿ ತಮಿಳುನಾಡು- ಕರ್ನಾಟಕ ಪರಸ್ಪರ ರಾಜ್ಯಗಳು ಕುಳಿತು ಮಾತನಾಡಬೇಕು, ಗುಡ್ ವಿಲ್ ಬಳಸಿಕೊಂಡು ಮಾತುಕತೆ ನಡೆಸಬೇಕೆಂದು ಸಂಸದೇ ಸುಮಲತಾ ಅಂಬರೀಶ್ ಅಭಿಪ್ರಾಯ ವ್ಯಕ್ತಪಡಿಸಿದರು.

ಮಂಡ್ಯದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪಾಕಿಸ್ತಾನದ ಜೊತೆ ಕೂಡ ಮಾತನಾಡಿದ್ದೇವೆ,
ತಮಿಳುನಾಡು ಜೊತೆ ಯಾಕೆ ಮಾತನಾಡಲು ಸಾಧ್ಯವಿಲ್ಲ, ಪರಿಹಾರ ಸಿಗುವುದಾದರೇ ಯಾಕೆ ಮಾತನಾಡಬಾರದು, ಈಗ ಬೇರೆ ದಾರಿ ಕಾಣುತ್ತಿಲ್ಲ, ನೆರೆ ರಾಜ್ಯಕ್ಕೆ ಇಲ್ಲಿನ ಪರಿಸ್ಥಿತಿ ತಿಳಿಸಬೇಕು, ನೀರು ಕೊಡಲು ಆಗಲ್ಲ ಎಂಬುದಲ್ಲ, ನಮ್ಮ ಪರಿಸ್ಥಿತಿ ಏನಿದೆ ಎಂದು ನೋಡಿ ಎಂದು ತಿಳಿಸಬೇಕು ನಮ್ಮಲ್ಲೂ ತಮಿಳಿಗರು ಇದ್ದಾರೆ, ಹಾಗಾಗಿ ಮಾತುಕತೆ ನಡೆಯಬೇಕೆಂದರು.

ಸುಪ್ರಿಂ ಕೋರ್ಟ್ ರಿಲೀಫ್ ಕೊಡುತ್ತದೆ ಎಂದು ಭಾವಿಸಿದ್ದೇವು, ಮತ್ತೆ ನಮಗೆ ಅನ್ಯಾಯ ಆಗಿದೆ. ಸುಪ್ರಿಂ ಕೋರ್ಟ್ ಆದೇಶ ಗೌರವಿಸಬೇಕು, ಪಾಲಿಸಬೇಕು. ಇದರಲ್ಲಿ ನಾನು ರಾಜಕೀಯವಾಗಿ ಮಾತನಾಡಲ್ಲ. ಯಾರು ಮದ್ಯ ಪ್ರವೇಶಿಸಿದ ಪರಿಸ್ಥಿತಿಯಲ್ಲಿ ಇದ್ದೇವೆ, ಕೇಂದ್ರ ಸಹಾ ಮಧ್ಯ ಪ್ರವೇಶಿಸಿದ ಪರಿಸ್ಥಿತಿ ಇದೆ, ಅನ್ಯಾಯ ಆಗುವ ರೈತರಿಗೆ ಏನು ಉತ್ತರ ಕೊಡಬೇಕು ? ಸುಪ್ರಿಂ ಕೋರ್ಟ್ ಹತ್ತಿರ ಹೋಗಿ ಹೋರಾಟ ಮಾಡಲು ಸಾಧ್ಯವಿಲ್ಲ,
ಅಧಿಕಾರಿಗಳು ಹೇಳುವ ಮಾಹಿತಿ ಕೇಳಿ ಆತಂಕ ಆಗುತ್ತದೆ ಎಂದು ನುಡಿದರು.

ಕೃಷಿಗೆ ನೀರು ಬಿಡುವ ಪರಿಸ್ಥಿತಿ ಇಲ್ಲ, ಕುಡಿಯುವ ನೀರಿಗೂ ಸಮಸ್ಯೆ ಆಗಲಿದೆ, ಏನು ಮಾಡಬೇಕು ಎಂದು ಕೇಳಿದ್ದೇನೆ ? ಸಿಎಂ ಅವರು ಮೂರು ಸಭೆ ಕರೆದಿದ್ದರು, ಎಲ್ಲ ಸಭೆ ಕೂಡ ಭಾಗಿಯಾಗಿದ್ದಾನೆ, ಯಾತಕ್ಕೆ ಪ್ರತಿಭಾರಿ ಹಿನ್ನಡೆಯಾಗುತ್ತಿದೆ, ವಾದ ಮಾಡುವಲ್ಲಿ ಲೋಪ ಕಾಣಿಸುತ್ತಿದೆ. ಸಿಬ್ಲ್ಯೂಡಿ ಮೀಟಿಂಗ್ ನಲ್ಲಿ ತಮಿಳುನಾಡಿನ ಎಲ್ಲ ಅಧಿಕಾರಿಗಳು ಭಾಗಿಯಾಗಿದ್ದರು, ಆದರೆ ನಮ್ಮ ಅಧಿಕಾರಿಗಳು ವಿಡಿಯೋ ಕನ್ಪರೆನ್ಸ್ ಮೂಲಕ ಭಾಗಿಯಾಗಿದ್ದಾರೆ, ಗಂಭೀರ ವಿಷಯವನ್ನ ಉಡಾಫೆಯಾಗಿ ತೆಗೆದುಕೊಂಡಿದ್ದಾರೆ, ಇದನ್ನ ಖಂಡಿಸುತ್ತೇನೆ ಎಂದು
ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

16 ಟಿಎಂಸಿ ಯಲ್ಲಿ ತಮಿಳುನಾಡಿಗೆ ಬಿಟ್ಟು, ಕೃಷಿ ಕುಡಿಯಲು ಬಳಸಬೇಕಿದೆ, 4 ಟಿಎಂಸಿ ಡೆಡ್ ಸ್ಟೋರೇಜ್ ಇದೆ
ಮಳೆ ಬಂದರೆ ಮಾತ್ರ ಕಷ್ಟ ಬಗೆಹರಿಯಲಿದೆ, ಬೇರೆ ದಾರಿ ಕಾಣುತ್ತಿಲ್ಲ, ದೆಹಲಿಯಲ್ಲಿ ಜಲಶಕ್ತಿ ಸಚಿವರನ್ನ ಭೇಟಿ ಮಾಡಿದ್ದೇನೆ, ಏನಾದರೂ ದಾರಿ ಮಾಡಿಕೊಡಿ ಎಂದು ಕೇಳಿದ್ದೇ, ಒಂದು ಕಮಿಟಿ ಮಾಡಿ ವಾಸ್ತವ ಪರಿಸ್ಥಿತಿ ತಿಳಿಯಲು ಸರ್ವೆ ಮಾಡಿಸುತ್ತೇನೆ ಎಂದಿದ್ದಾರೆ, ನಮಗೆ ಉಳಿದಿರುವ ದಾರಿ ಬೇರೆ ಇಲ್ಲ. ಕುಡಿಯುವ ನೀರಿನ ಅಗತ್ಯ ಬಿಟ್ಟು, ಕೃಷಿಗೆ ನೀರನ್ನ ಬಿಡಲು ಸಾಧ್ಯವಿಲ್ಲ ಎಂದು ಅಧಿಕಾರಿಗಳು‌ ಹೇಳುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಸರ್ಕಾರ ರೈತರ ನೆರವಿಗೆ ಬರಬೇಕು, ಸರ್ಕಾರ ನಷ್ಟ ಪರಿಹಾರ ಘೋಷಣೆ ಮಾಡಬೇಕು, ರೈತರಿಗೆ
ಬೆಳೆ ಇನ್ಸೂರೆನ್ಸ್ ಮಾಡಿಸಿಕೊಳ್ಳುವಲ್ಲಿ ರೈತರು ಎಡವಿದ್ದಾರೆ ಎಂದರು.

ಗೋ‍ಷ್ಠಿಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಸಿ.ಪಿ.ಉಮೇಶ್, ಮುಖಂಡರಾದ ಇಂಡುವಾಳು ಸಚ್ಚಿದಾನಂದ, ಹನಕೆರೆ ಶಶಿಕುಮಾರ್  ಉಪಸ್ಥಿತರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!