Thursday, September 19, 2024

ಪ್ರಾಯೋಗಿಕ ಆವೃತ್ತಿ

ಸರ್ವ ಸದಸ್ಯರ ಸಹಕಾರದಿಂದ ಆರ್‌ಎಪಿಸಿಎಂಎಸ್ ಲಾಭದತ್ತ ಹೆಜ್ಜೆ- ಯು.ಸಿ.ಶೇಖರ್

ಪ್ರಸಕ್ತ ವರ್ಷ ಸಂಘವು ಎಲ್ಲರ ಸಹಕಾರದಿಂದ 19,97,448 ರೂ ನಿವ್ವಳ ಲಾಭ ಗಳಿಸಿದೆ ಎಂದು ಆರ್‌ಎಪಿಸಿಎಂಎಸ್ ಅಧ್ಯಕ್ಷ ಯು.ಸಿ.ಶೇಖರ್ ಹೇಳಿದರು.

ಮಂಡ್ಯನಗರದ ರೈತ ಸಭಾಂಗಣದಲ್ಲಿ ರೈತರ ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘ ನಿಯಮಿತ (ಆರ್‌ಎಪಿಸಿಎಂಎಸ್) ಆಡಳಿತ ಮಂಡಳಿ ಆಯೋಜಿಸಿದ್ದ 52ನೇ ವಾರ್ಷಿಕ ಸರ್ವ ಸದಸ್ಯರ ಮಹಾಸಭೆಯನ್ನು ನಿರ್ದೇಕರೊಂದಿಗೆ ಉದ್ಘಾಟಿಸಿ ಅವರು ಮಾತನಾಡಿದರು.

ಪ್ರತಿ ವರ್ಷ 37.46 ಕೋಟಿ ರೂ ವಹಿವಾಟು ನಡೆಸುತ್ತಿದ್ದು, ಸಹಕಾರದಿಂದ 19,97,448 ರೂ ನಿವ್ವಳ ಲಾಭಗಳಿಸಿ, ಹತ್ತಾರು ಯೋಜನೆಗಳನ್ನು ಆಡಳಿತ ಮಂಡಳಿಯೊಂದಿಗೆ ಚರ್ಚಿಸಿ, ಅಭಿವೃದ್ದಿ ಕಾರ್ಯಗಳನ್ನು ಮಾಡಲು ಸಂಕಲ್ಪಮಾಡಿದೆ, ಎಲ್ಲಾ ಸದಸ್ಯರ ಸಹಕಾರ ನೀಡಬೇಕಾಗಿ ಕೋರಿದರು.

ಹಲವು ವರ್ಷಗಳಿಂದ ಅಭಿವೃದ್ದಿ ಕಾಣದೆ ಇರುವ ಪ್ರತಿಷ್ಠಿತ ರೈತ ಸಭಾಂಗಣ ನವೀಕರಣಕ್ಕೆ 68.50 ಲಕ್ಷ ರೂ ವೆಚ್ಚದ ಅಂದಾಜು ಪಟ್ಟಿ ರೂಪಿಸಲಾಗಿದೆ, ಇದಕ್ಕೆ ಸಂಘ 17 ಲಕ್ಷ ರೂ ವ್ಯಯಿಸಲಿದೆ. ಅಂತೆಯೇ ಜಿಲ್ಲಾ ಉಸ್ತುವಾರಿ ಸಚಿವರು, ಶಾಸಕರು ಹಾಗೂ ಜಿಲ್ಲಾಡಳಿತ ಸಹಕಾರದಿಂದ ನವೀಕರಣ ಕಾರ್ಯ ಪೂರೈಸಲಾಗುವುದು ಎಂದು ತಿಳಿಸಿದರು.

nudikarnataka.com

ಹಾಗೆಯೇ ಮರಕಾಡನದೊಡ್ಡಿ ಬಳಿ ಇರುವ ಸಂಸ್ಥೆಯ ಬೃಹತ್ ಗೋದಾಮಿನಲ್ಲಿ ರೈತ ಸ್ನೇಹಿ ಯೋಜನೆಗಳಾದ ಬೆಲ್ಲ, ಟಮೋಟೋ ಹಾಗೂ ಎಳನೀರು ಮೌಲ್ಯವರ್ಧನೆ ಉದ್ದೇಶದಿಂದ 20 ಕೋಟಿ ರೂ ಯೋಜನೆ ಜಾರಿಗೊಳಿಸಲಾಗುತ್ತಿದೆ. ಹಂತ ಹಂತವಾಗಿ ಅಭಿವೃದ್ದಿ ಕಾರ್ಯಗಳನ್ನು ಕೈಗೆತ್ತಿಕೊಳ್ಳಲಾಗುತ್ತಿದೆ, ಸರ್ವ ಸದಸ್ಯರ ಒಪ್ಪಿಗೆ ನೀಡಬೇಕಾಗಿ ಹೇಳಿದಾಗ ಎಲ್ಲ ಸದಸ್ಯರ ಒಮ್ಮತ ಸೂಚಿಸಿ ಒಪ್ಪಿಗೆ ನೀಡಿದರು.

ಅಂತೆಯೇ ಸಂಘದಲ್ಲಿ 7,738 ಸರ್ವ ಸದಸ್ಯರಿದ್ದು, ಈ ಪೈಕಿ 6,615 ಅರ್ಹ ಸದಸ್ಯರಿಗೆ ಅಂಚೆ ಮೂಲಕ ಆಹ್ವಾನ ಪತ್ರಿಕೆ ಕಳಿಸಲಾಗಿದೆ. ಅನಿವಾರ್ಯ ಕಾರಣದಿಂದ ಕೆಲವರಿಗೆ ಪತ್ರಿಕೆ ತಲುಪದಿದ್ದರೆ ಬೇಸರ ಮಾಡಿಕೊಳ್ಳಬೇಡಿ, ಮುಂದಿನ ದಿನಗಳಲ್ಲಿ ಸಮರ್ಪಕ ವಿಳಾಸ ನೀಡಿ ಸಹಕರಿಸಿ ಎಂದು ನುಡಿದರು.

ಜಿಲ್ಲೆಯ ಹಿರಿಯ ಸಹಕಾರಿ ಧುರೀಣರಾಗಿದ್ದ ಕೆ.ವಿ.ಶಂಕರಗೌಡ ಮತ್ತು ಜಿ.ಎಸ್.ಬೊಮ್ಮೇಗೌಡ ಮತ್ತವರ ಒಡನಾಡಿಗಳ ದೂರದೃಷ್ಠಿಯಿಂದ 75 ವರ್ಷದ ಹಿಂದೆ ಆರಂಭಗೊAಡ ಈ ಸಂಸ್ಥೆಯು ಅಭಿವೃದ್ಧಿಗೆ ಶ್ರಮಿಸಲಾಗುತ್ತಿದೆ, ರೈತರ ಉತ್ಪನ್ನಗಳನ್ನು ರಿಯಾಯಿತಿ ಧರದಲ್ಲಿ ಮಾರಾಟ ಮಾಡಿ, ಆರ್ಥಿಕ ಪ್ರಗತಿಗೆ ನೆರವಾಗುತ್ತಿದೆ ಎಂದರು.

ಇದೇ ಸಂದರ್ಭದಲ್ಲಿ ಹಲವು ಮಂದಿ ಸದಸ್ಯರು, ಚುನಾವಣೆಯಲ್ಲಿ ಮತದಾರರ ಕೈಬಿಟ್ಟಿದ್ದು, ಕೋರ್ಟ್ ವ್ಯಾಜ್ಯಗಳು, ಹಣಕಾಸಿನ ವ್ಯವಹಾರಗಳ ಕುರಿತು ಪ್ರಶ್ನೆಗಳನ್ನು ಕೇಳಿದರು. ಸಿಇಓ ಮತ್ತು ಅಧ್ಯಕ್ಷರು ಉತ್ತರ ನೀಡಿದರು. ಮಂಡ್ಯ ಬಂದ್ ಗೆ ಬಂಕ್ ಮುಂದೆ ಪರೋಕ್ಷವಾಗಿ ಬೆಂಬಲ ನೀಡಿದರು.

ಕಾರ್ಯಕ್ರಮದಲ್ಲಿ ಆರ್‌ಎಪಿಸಿಎಂಎಸ್ ಆಡಳಿತ ಮಂಡಳಿಯ ಉಪಾಧ್ಯಕ್ಷ ಜೆ.ಪಿ.ಮಹೇಶ್, ನಿರ್ದೇಶಕರಾದ ಬೇಲೂರು ಸೋಮಶೇಖರ್, ಅಂಜನಾ ಶ್ರೀಕಾಂತ್, ಉದಯ್‌ಕುಮಾರ್, ಎಚ್.ಎಸ್.ಯೋಗೇಶ್, ಕಲ್ಲಹಳ್ಳಿ ಕೆ.ಸಿ.ರವೀಂದ್ರ, ಪುನೀತ್, ಸಿ.ಕೆ.ಪಾಪಯ್ಯ, ಎಂ.ಪಿ.ಶ್ರೀಧರ್, ಕಾಳೇಗೌಡ, ವಿಕ್ರಮರಾಜ್, ನಾಗಭೂಷಣ್, ಕೆ.ಹೇಮಲತಾ, ವೈ.ಬಿ.ಬಸವರಾಜು, ವ್ಯವಸ್ಥಾಪಕ ಶಂಕರ್, ಸಿಬ್ಬಂದಿಗಳು ಹಾಜರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!