ನಾಯಕರ ಹೆಸರು ಹೇಳಿಕೊಂಡು ಮತ ಪಡೆದವರು ಕ್ಷೇತ್ರಕ್ಕೆ ಯಾವುದೇ ಅಭಿವೃದ್ದಿ ಕಾರ್ಯಗಳನ್ನು ಮಾಡದೇ ತಾನು ತಂದಿದ್ದ ಯೋಜನೆಗಳನ್ನು ಹಳ್ಳ ಹಿಡಿಯುವಂತೆ ಮಾಡಿದ್ದಾರೆಂದು ಕೆಪಿಸಿಸಿ ಉಪಾಧ್ಯಕ್ಷ ಪಿಎಂ ನರೇಂದ್ರಸ್ವಾಮಿ ಕಿಡಿಕಾರಿದರು.
ಮಳವಳ್ಳಿ ಪಟ್ಟಣದ ಅನಂತ್ರಾಂ ವೃತ್ತದಲ್ಲಿ ‘ಪ್ರಜಾಧ್ವನಿಯಾತ್ರೆ’ಯ ಬಹಿರಂಗ ಸಭೆಯಲ್ಲಿ ಮಾತನಾಡಿದ ಅವರು, ಹಿಂದಿನ ವಿಧಾನಸಭಾ ಚುನಾವಣೆಯಲ್ಲಿ ಒಪ್ಪಂದ ಹಾಗೂ ಷಡ್ಯಂತ್ರದಿಂದ ಸೋಲಿಸಿದರು. ಆದರೇ ಪ್ರಸ್ತುತ ಚುನಾವಣೆಯಲ್ಲಿ ಬಂಡೆ ಮುಂದೆ ಯಾವುದೇ ಆಟ ನಡೆಯುವುದಿಲ್ಲ ಎಂದರು.
ಮಳವಳ್ಳಿ ತಾಲ್ಲೂಕಿಗೆ ಬೇಕಾದ ಡಾ. ಬಿಆರ್ ಅಂಬೇಡ್ಕರ್ ಭವನ, ಕ್ರೀಡಾಂಗಣ,ಅಗ್ನಿಶಾಮಕದಳ, ಮೀನು ಸಂಸ್ಕರಣ ಘಟಕ, ಸ್ತ್ರೀ ಶಕ್ತಿ ಭವನ, ಕೆಎಸ್ಆರ್ಟಿಸಿ ಬಸ್ ಚಾಲಕ ತರಬೇತಿ ಕೇಂದ್ರ, ಪೂರಿಗಾಲಿ ಹನಿನೀರಾವರಿಯೋಜನೆ ಕುಡಿಯುವ ನೀರು ಸೇರಿದಂತೆ ಹಲವಾರು ಯೋಜನೆಗಳನ್ನು ತಂದಿದ್ದೇನೆಂದು ಹೇಳಿದರು.
ಸಂಕಷ್ಟದ ಜೀವನದಲ್ಲಿ ಬಾರದ ನಾಯಕರು ಚುನಾವಣೆ ಬರುತ್ತಿದ್ದಂತೆ ಕುಣಿಯುತ್ತಿದ್ದಾರೆ. ನಾನು ಎಲ್ಲಾ ಸಮಯದಲ್ಲಿಯೂ ಕಾರ್ಯಕರ್ತರ ಜೊತೆಯಲ್ಲಿರುತ್ತೇನೆ, ಮುಂದಿನ ದಿನಗಳಲ್ಲಿತಯೂ ಕಾರ್ಯಕರ್ತರ ಜೊತೆಗಿದ್ದು, ಕಷ್ಟಸುಖಗಳಿಗೆ ಬಾಗಿಯಾಗುತ್ತೇನೆಂದು ತಿಳಿಸಿದರು.
ವಿಧಾನಸಭಾ ಚುನಾವಣೆಯಲ್ಲಿ ನನ್ನನ್ನು ಆರ್ಶಿವದಿಸಿದರೇ ನಿಮ್ಮ ಋಣ ತೀರುಸಲು ನಿದ್ದೆ ಮಾಡುವುದಿಲ್ಲ, ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಅಭಿವೃದ್ದಿ ಕಾರ್ಯಗಳನ್ನು ಪ್ರಮಾಣಿಕವಾಗಿ ಮಾಡುತ್ತೇನೆಂದು ಹೇಳಿದರು.
ವಿಧಾನ ಪರಿಷತ್ ಮಾಜಿ ಸದಸ್ಯ ಎಚ್ಎಂ ರೇವಣ್ಣ, ಮಾಜಿ ಸಂಸದ ವಿ.ಎಸ್.ಉಗ್ರಪ್ಪ, ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್.ದ್ರುವನಾರಾಯಣ, ಉಪಾಧ್ಯಕ್ಷ ಎನ್.ಚಲುವರಾಯಸ್ವಾಮಿ, ವಿಧಾನ ಪರಿಷತ್ ಸದಸ್ಯ ದಿನೇಶ್ ಗೂಳಿಗೌಡ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಬಿ.ಎಸ್.ಶಿವಣ್ಣ, ಜಿಲ್ಲಾ ಘಟಕದ ಅಧ್ಯಕ್ಷ ಸಿ.ಡಿ.ಗಂಗಾಧರ್, ಮಹಿಳಾ ಜಿಲ್ಲಾ ಘಟಕದ ಅಧ್ಯಕ್ಷ ಅಂಜನಾ ಶ್ರೀಕಾಂತ್, ಯುವ ಘಟಕದ ಅಧ್ಯಕ್ಷ ವಿಜಯ್ ಕುಮಾರ್, ಮುಖಂಡರಾದ ಮಲ್ಲಾಜಮ್ಮ, ಗಣಿಗ ರವಿ ಕುಮಾರ್, ಕನಕಪುರದ ವಿಶ್ವನಾಥ್, ಕೆ.ಜೆ.ದೇವರಾಜು,
ಎಸ್.ಪಿ.ಸುಂದರ್ ರಾಜ್, ಡಾ.ಮೂರ್ತಿ, ಎಂ.ಬಿ.ಮಲ್ಲಯ್ಯ, ಸುಜಾತಾ ಕೆ.ಎಂ.ಪುಟ್ಟು,
ಸುಷ್ಮಾ ರಾಜು ಇದ್ದರು.




