Thursday, September 19, 2024

ಪ್ರಾಯೋಗಿಕ ಆವೃತ್ತಿ

ಪೌರ ಕಾರ್ಮಿಕರು ಆರೋಗ್ಯವಂತ ಸಮಾಜದ ನಿರ್ಮಾತೃಗಳು: ತುಷಾರಮಣಿ

ಸಧೃಡ, ಸ್ವಚ್ಛ, ಆರೋಗ್ಯವಂತ ಸಮಾಜದ ನಿರ್ಮಾಣದಲ್ಲಿ ತಮ್ಮ ಜೀವದ  ಹಂಗು ತೊರೆದು ಅರ್ಪಣಾ ಮನೋಭಾವದಿಂದ ದುಡಿಯುತ್ತಿರುವ ಪೌರ ಕಾರ್ಮಿಕರ ಪಾತ್ರವು ನಿರ್ಣಾಯಕವಾಗಿದೆ ಎಂದು ಜಿಲ್ಲಾ ನಗರಾಭಿವೃದ್ಧಿ ಕೋಸದ ಯೋಜನಾ ನಿರ್ದೇಶಕಿ ತುಷಾರಮಣಿ ಹೇಳಿದರು.

ಕೆ.ಆರ್.ಪೇಟೆ ಪಟ್ಟಣದ ಪುರಸಭೆಯಲ್ಲಿ ಪೌರಕಾರ್ಮಿಕ ದಿನಾಚರಣೆಯ ಅಂಗವಾಗಿ ಆಯೋಜಿಸಿದ್ದ ಕಾರ್ಯಕ್ರಮ ದಲ್ಲಿ ಭಾಗವಹಿಸಿ ವಿವಿಧ ಸ್ಪರ್ಧೆಗಳಲ್ಲಿ ವಿಜೇಧತರಾದ ಪೌರಕಾರ್ಮಿಕರಿಗೆ ಬಹುಮಾನಗಳನ್ನು ವಿತರಿಸಿ ಮಾತನಾಡಿದರು.

ನಗರದ ವಿವಿಧ ಬಡಾವಣೆಗಳ ಸ್ವಚ್ಛತೆ, ಚರಂಡಿಗಳ ನಿರ್ಮಲೀಕರಣ ಹಾಗೂ ಕಸವಿಲೇವಾರಿ ಸೇರಿದಂತೆ ಆರೋಗ್ಯವಂತ ಸಮಾಜದ ನಿರ್ಮಾಣಕ್ಕಾಗಿ ದುಡಿಯುತ್ತಿರುವ ಪೌರಕಾರ್ಮಿಕರ ಬದುಕು ಇಂದು ಸಂಕಷ್ಠದಲ್ಲಿದೆ. ನಗರವನ್ನು ಸ್ವಚ್ಛಗೊಳಿಸಿ ಶ್ರೀಸಾಮಾನ್ಯರ ಆರೋಗ್ಯ ಸಂವರ್ಧನೆಯ ಬಗ್ಗೆ ಕಾಳಜಿ ವಹಿಸುತ್ತಿರುವ ಪೌರಕಾರ್ಮಿಕ ಬಂಧುಗಳು ತಮ್ಮ ವಯಕ್ತಿಕ ಸ್ವಚ್ಛತೆ ಹಾಗೂ ಆರೋಗ್ಯದ ಕಡೆಗೂ ಗಮನಹರಿಸಿ ಎಚ್ಚರಿಕೆಯಿಂದ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಅನುಸರಿಸಿ ಕೆಲಸ ಮಾಡಬೇಕು ಎಂದು ಕಿವಿಮಾತು
ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪುರಸಭೆ ಅಧ್ಯಕ್ಷ ಎನ್.ನಟರಾಜು ಮಾತನಾಡಿ, ತಮ್ಮ ಆರೋಗ್ಯವನ್ನು ಲೆಕ್ಕಿಸದೇ ಸಮಾಜದ ಆರೋಗ್ಯವನ್ನು ಕಾಪಾಡುವ ನಿಟ್ಟಿನಲ್ಲಿ ದುಡಿಯುತ್ತಿರುವ ಪೌರಕಾರ್ಮಿಕರಿಗೆ ಸಮವಸ್ತç, ಶೂಗಳು ಗ್ಲೌಸ್‌ಗಳು, ಬ್ಯಾಡ್ಜ್ ಸೇರಿದಂತೆ ಅಗತ್ಯವಾಗಿ ಬೇಕಾದ ಮೂಲಭೂತ ಸೌಲಭ್ಯಗಳನ್ನು
ದೊರಕಿಸಿಕೊಡಲು ಇಂದೇ ಕ್ರಮ ವಹಿಸಬೇಕು ಎಂದು ಮುಖ್ಯಾಧಿಕಾರಿಗೆ ನಿರ್ದೇಶನ ನೀಡಿದರು.

ಪುರಸಭೆಯ ಹಿರಿಯ ಸದಸ್ಯ ಕೆ.ಸಿ.ಮಂಜುನಾಥ್ ಹಾಗೂ ಡಿ. ಪ್ರೇಮಕುಮಾರ್ ಮಾತನಾಡಿ ನಗರದ ಸ್ವಚ್ಛತೆಯಲ್ಲಿ ತೊಡಗಿರುವ ಪೌರಕಾರ್ಮಿಕರಿಗೆ ಸಮಾಜದ ಕರುಣೆ ಬೇಕಾಗಿಲ್ಲ, ಅವರಿಗೆ ಬೇಕಾಗಿರುವುದು ನ್ಯಾಯ ಬದ್ಧವಾಗಿ ದೊರೆಯಬೇಕಾದ ಸವಲತ್ತುಗಳು ಮಾತ್ರ ಎಂದರು.

ಪುರಸಭೆಯ ಮುಖ್ಯಾಧಿಕಾರಿ ಜಗರೆಡ್ಡಿ, ಸದಸ್ಯರಾದ ಶಾಮಿಯಾನ ತಿಮ್ಮೇಗೌಡ, ಕೆ.ಎಸ್.ಪ್ರಮೋದ್, ಬಸ್ ಸಂತೋಷ್‌ಕುಮಾರ್, ಪೌರಕಾರ್ಮಿಕರ ಸಂಘದ ಅಧ್ಯಕ್ಷ ಚಲುವರಾಜು, ಪೌರಕಾರ್ಮಿಕರ ಕ್ಷೇಮಾಭಿವೃದ್ಧಿ ಸಂಘದ ಮಂಟೇ ಮಂಜು, ಆದಿದ್ರಾವಿಡ ಪೌರಕಾರ್ಮಿಕರ ಸಂಘದ
ಜಿಲ್ಲಾಧ್ಯಕ್ಷ ಬನ್ನಾರಿ, ಪೌರಕಾರ್ಮಿಕರಾದ ಕೃಷ್ಣ, ಮುತ್ತಯ್ಯ, ಚನ್ನಮ್ಮ ಕಾರ್ಯಕ್ರಮದಲ್ಲಿ ಮಾತನಾಡಿದರು.

ಕಾರ್ಯಕ್ರಮದಲ್ಲಿ ಪುರಸಭೆ ಸದಸ್ಯೆಯರಾದ ಇಂದ್ರಾಣಿವಿಶ್ವನಾಥ್, ಸೌಭಾಗ್ಯ ಉಮೇಶ್, ಖಮ್ಮರ್‌ಬೇಗಂಸಲ್ಲೂ, ಕಲ್ಪನಾದೇವರಾಜು, ಗಿರೀಶ್, ಪರಿಸರ ಎಂಜಿನಿಯರ್ ಅರ್ಚನಾ ಆರಾಧ್ಯ, ಕಂದಾಯಾಧಿಕಾರಿ ರವಿಕುಮಾರ್, ಯೋಜನಾಧಿಕಾರಿ ಭಾರತಿ, ಸಹಾಯಕ ಎಂಜಿನಿಯರ್ ಹರ್ಷ ಮತ್ತಿತರರು ಭಾಗವಹಿಸಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!