Thursday, September 19, 2024

ಪ್ರಾಯೋಗಿಕ ಆವೃತ್ತಿ

ಮಂಡ್ಯ| ಬೀದಿ ಬದಿ ವ್ಯಾಪಾರಿಗೆ ಕೊಡೆ ವಿತರಣೆ

ಮಂಡ್ಯನಗರದ ನೂರಡಿ ರಸ್ತೆಯಲ್ಲಿ 15 ವರ್ಷಗಳಿಂದ ಟೀ ವ್ಯಾಪಾರ ಮಾಡುತ್ತಿರುವ ರಾಜು ಟೀ ಸೆಂಟರ್ ಮಾಲೀಕ ಎಂ ಪಿ ರಾಜು ಅವರಿಗೆ ಮಂಡ್ಯ ನಾಲ್ವಡಿ ಲಯನ್ಸ್ ಕ್ಲಬ್ ಹಾಗೂ ಬಸರಾಳು ಲಯನ್ಸ್ ಕ್ಲಬ್ ವತಿಯಿಂದ ಕೊಡೆಗಳನ್ನು ವಿತರಣೆ ಮಾಡಲಾಯಿತು.

ಈ ಸಂದರ್ಭದಲ್ಲಿ ಜಿ.ಈ.ಟಿ ಕೋ -ಆರ್ಡಿನೇಟರ್ ಲ.ಹನುಮಂತಯ್ಯ ಮಾತನಾಡಿ, ಸ್ವಾಭಿಮಾನದಿಂದ ಬದುಕು ಕಟ್ಟಿಕೊಳ್ಳುವ ಬೀದಿ ಬದಿ ವ್ಯಾಪಾರಿಗಳಿಗೆ ಬಿಸಿಲು- ಮಳೆಯಿಂದ ರಕ್ಷಿಸಿ ಕೊಳ್ಳಲು ಕೊಡೆ ಅವಶ್ಯಕತೆ ಇದ್ದೇ ಇದೆ, ಇದನ್ನು ಅರಿತು ಕೊಡೆ ವಿತರಣೆ ಮಾಡಿದ್ದೇವೆ ಎಂದರು.

ಅ.1ರಿಂದ  7ರವರೆಗೆ “ಲಯನ್ ಸೇವಾ ಸಪ್ತಾಹ”ವನ್ನು, ಲಯನ್ಸ್ ಜಿಲ್ಲೆ, 317ಜಿ ವತಿಯಿಂದ ಮಂಡ್ಯದಲ್ಲಿರುವ ಲಯನ್ಸ್ ಕ್ಲಬ್ಬುಗಳ ಸಹಯೋಗದಲ್ಲಿ ನಡೆಸಲಾಗುತ್ತಿದ್ದು, ಅದರ ಅಂಗವಾಗಿ ಕೊಡೆ ವಿತರಣೆ ಮಾಡಿದ್ದೇವೆ ಎಂದರು.

ವಲಯ ಅಧ್ಯಕ್ಷ ಲಯನ್ ಜಿ ಧನಂಜಯ ಧರಸಗುಪ್ಪೆ ಮಾತನಾಡಿ, ಲಯನ್ಸ್ ಜಿಲ್ಲೆ 317-ಜಿ ರ ರಾಜ್ಯಪಾಲರಾದ ಡಾ. ಲ.ಎನ್. ಕೃಷ್ಣೇಗೌಡ ಪಿ.ಎಂ.ಜೆ.ಎಫ್‍.ರವರ ಮಾರ್ಗದರ್ಶನದಲ್ಲಿ, ಹಸಿವು ನಿವಾರಣೆ, ಅರೋಗ್ಯ ತಪಾಸಣೆ (ನೇತ್ರ-ಕಿವಿ -ಮೂಗು -ಹೃದಯ -ದಂತ-ಕ್ಯಾನ್ಸರ್ (ವಿಶೇಷವಾಗಿ ಮಕ್ಕಳ ಕ್ಯಾನ್ಸರ್,), ಮಧುಮೇಹ ಹಾಗೂ ಇನ್ನಿತರ ಸಾಮಾನ್ಯ ಕಾಯಿಲೆಗಳ) ಬೀದಿ ಬದಿ ವ್ಯಾಪಾರಿಗಳ ಸ್ವಾವಲಂಬನೆಗಾಗಿ, ತಳ್ಳುವ ಗಾಡಿ ವಿತರಣೆ -ಕೊಡೆ -ಮಹಿಳಾ ಸ್ವಾವಲಂಬನೆಗಾಗಿ ಹೊಲಿಗೆ ಯಂತ್ರ – ಎಂಬ್ರಾಯ್ಡರಿ ಮೆಸೇನ್ ವಿತರಣೆ, ಗಿಡ ವಿತರಿಸುವ ಹಾಗೂ ನೆಟ್ಟು ಆರೈಕೆ ಮಾಡುವ ಪರಿಸರ ಜಾಗೃತಿ ಕಾರ್ಯಕ್ರಮ, ಬಡ ವಿದ್ಯಾರ್ಥಿಗಳಿಗೆ ಹಾಗೂ ಬಡ ರೋಗಿಗಳಿಗೆ ಆರ್ಥಿಕವಾಗಿ ಧನ ಸಹಾಯ,ಹೀಗೆ ಹತ್ತು ಹಲವು ಸೇವಾ ಕಾರ್ಯಕ್ರಮಗಳನ್ನು ಜಿಲ್ಲೆಯಾದ್ಯಂತ ಇರುವ ವಿವಿಧ ಲಯನ್ಸ್ ಕ್ಲಬ್ಗಳ ಮೂಲಕ ಸೇವಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದರು.

ಈ ಸಂದರ್ಭದಲ್ಲಿ ಮಧುರ ಲಯನ್ಸ್ ಕ್ಲಬ್ಬಿನ ಅಧ್ಯಕ್ಷ ಲ.ಬಸರಾಳು ಪ್ರದೀಪ್, ರಾಜು,ಕೃಷ್ಣಪ್ಪ ಹಾಗೂ ಇತರರು ಉಪಸ್ಥಿತರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!