Thursday, September 19, 2024

ಪ್ರಾಯೋಗಿಕ ಆವೃತ್ತಿ

ಬಿಎಸ್ಪಿಯಿಂದ ರಾಜಕೀಯ ಪರಿವರ್ತನೆ ಸಾಧ್ಯವಾಗಿದೆ- ಎಂ. ಕೃಷ್ಣಮೂರ್ತಿ

ಬಹುಜನ ಸಮಾಜ ಪಕ್ಷ ರಚನೆಯಾದ ಮೇಲೆ ದೇಶದಲ್ಲಿ ಬಹುದೊಡ್ಡ ರಾಜಕೀಯ ಪರಿವರ್ತತೆ ಸಾಧ್ಯವಾಗಿದೆ ಎಂದ ಬಿಎಸ್ಪಿ ರಾಜ್ಯ ಉಸ್ತುವಾರಿ ಸಂಯೋಜಕ ಎಂ.ಕೃಷ್ಣಮೂರ್ತಿ ಹೇಳಿದರು.

ಬಹುಜನ ಸಮಾಜ ಪಕ್ಷದ ಜಿಲ್ಲಾ ಸಮಿತಿ ವತಿಯಿಂದ ಮಂಡ್ಯ ನಗರದ ಡಾ.ಬಿ.ಆರ್.ಅಂಬೇಡ್ಕರ್ ರಸ್ತೆಯ ಮಹಾಚೇತನ ಟ್ರಸ್ಟ್ ಸಭಾಂಗಣದಲ್ಲಿ ಬಿಎಸ್ಪಿ ಸಂಸ್ಥಾಪಕ ದಾದಾ ಸಾಹೇಬ್ ಕಾನ್ಸಿರಾಮ್ ಅವರ 17ನೇ ಪುಣ್ಯ ಸ್ಮರಣಾರ್ಥ ನಡೆದ ವಿಚಾರ ಸಂಕಿರಣಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಭಾರತ ದೇಶಕಂಡ ವಿಜ್ಞಾನಿ ದಾದಾ ಸಾಹೇಬ್ ಕಾನ್ಸಿರಾಮ್ ಜೀ ಅವರು ಹಿಂದುಳಿದ ಜಾತಿಗಳು,ಎಸ್ಸಿ,ಎಸ್ಟಿಗಳು ಮತ್ತು ಧಾರ್ಮಿಕ ಅಲ್ಪಸಂಖ್ಯಾತರು ಒಂದು ರಾಜಕೀಯ ಶಕ್ತಿಯಾಗಿ ರೂಪುಗೊಳ್ಳಬೇಕೆಂದು ಬಹುಜನ ಸಮಾಜ ಪಕ್ಷವನ್ನು ಸ್ಥಾಪಿಸಿ, ಸಮರ್ಪಿಸಿ ಬದಲಾವಣಗೆ ನಾಂದಿಯಾಡಿದ್ದಾರೆ ಎಂದು ಸ್ಮರಿಸಿದರು.

ಬಹುಜನ ಸಮಾಜ ಪಕ್ಷ ರಚನೆಯಾದ ಮೇಲೆ ದೇಶದಲ್ಲಿ ಬಹುದೊಡ್ಡ ರಾಜಕೀಯ ಪರಿವರ್ತತೆ ಕಾಣಲು ಸಾಧ್ಯವಾಗಿದೆ, ಉತ್ತರಪ್ರದೇಶದಂತಹ ಅತಿದೊಡ್ಡ ರಾಜ್ಯದಲ್ಲಿ ಸುಮಾರು 4 ಬಾರಿ ಮಹಿಳಾ ಮುಖ್ಯಮಂತ್ರಿ ಮಾಯಾವತಿಯವರು ರಾಜ್ಯಾಡಳಿತ ಮಾಡುವಷ್ಟು ಶಕ್ತಿ ತುಂಬಿ, ಹೊಸ ಬದಲಾವಣೆಯ ಬೆಳಕು ನೀಡಿದರು ಎಂದು ನುಡಿದರು.

ರಾಜ್ಯಾಧಿಕಾರ ಪಡೆದ ಬಿಎಸ್ಪಿಯು ಹಿಂದುಳಿದ ಜಾತಿ, ಎಸ್ಸಿ-ಎಸ್ಟಿಗಳು ಮತ್ತು ಧಾರ್ಮಿಕ ಅಲ್ಪಸಂಖ್ಯಾತರಿಗೆ 1.10ಕೋಟಿ ಎಕರೆ ಭೂಮಿ ವಿತರಣೆ ಮಾಡಿದೆ, ಅಲ್ಲಿ ಖಾಸಗಿ ವಲಯದಲ್ಲಿ ಶೇ.30ರಷ್ಟು ಮೀಸಲಾತಿ ನೀಡಲಾಗಿದೆ,  ಶೇ.50ರಷ್ಟು ಗುತ್ತಿಗೆ ಕಾಮಗಾರಿಗಳು ಶೋಷಿತರಿಗೆ ಲಭ್ಯವಾದವು ಎಂದು ವಿವರಿಸಿದರು.

ಕಾರ್ಯಕ್ರಮದಲ್ಲಿ ಬಿಎಸ್ಪಿ ರಾಜ್ಯ ಕಾರ್ಯದರ್ಶಿ ಎಂ.ವಿ ವೆಂಕಟೇಶ್, ಜಿಲ್ಲಾಧ್ಯಕ್ಷ ಶಿವಶಂಕರ್, ಜಿಲ್ಲಾ ಉಸ್ತುವಾರಿ ಚೆಲುವರಾಜು, ಕಾರ್ಯದರ್ಶಿ ಶಿವಕುಮಾರ್, ವೀರಭದ್ರಯ್ಯ, ಚುಂಚಯ್ಯ,  ಕುಮಾರ್ , ಮುರುಗನ್, ಆನಂದ್, ಬಸ್ತಿಪ್ರದೀಪ್, ಮಧು ಮತ್ತಿತರರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!