Thursday, September 19, 2024

ಪ್ರಾಯೋಗಿಕ ಆವೃತ್ತಿ

ಅತ್ತಿಬೆಲೆ ಪಟಾಕಿ ಅಗ್ನಿ ದುರಂತ| ಗಾಯಗೊಂಡಿದ್ದ ಬಾಡಿಬಿಲ್ಡರ್ ವೆಂಕಟೇಶ್ ಸಾವು

ಅತ್ತಿಬೆಲೆ ಪಟಾಕಿ ಗೋದಾಮಿನಲ್ಲಿ ಸಂಭವಿಸಿದ ಅಗ್ನಿ ಅವಘಡದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಗ್ರಾಹಕನೊಬ್ಬ ಅ.12 ರಂದು ಬೆಳಗ್ಗೆ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಈ ಅಗ್ನಿ ದುರಂತದಲ್ಲಿ ಸಾವನ್ನಪ್ಪಿದವರ ಸಂಖ್ಯೆ 16ಕ್ಕೆ ಏರಿಕೆಯಾಗಿದೆ.

ವೆಂಕಟೇಶ್(25) ಮೃತ ವ್ಯಕ್ತಿ. ಮೃತರನ್ನು ಬೆಂಗಳೂರು ನಗರ ಜಿಲ್ಲೆಯ ಗಾರೆ ಭಾವಿಪಾಳ್ಯದ ನಿವಾಸಿ ಎಂದು ಗುರುತಿಸಲಾಗಿದೆ. ಇವರು ವೃತ್ತಿಯಲ್ಲಿ ಛಾಯಾಗ್ರಾಹಕರಾಗಿದ್ದರು. ಪ್ರವೃತ್ತಿಯಲ್ಲಿ ಬಾಡಿ ಬಿಲ್ಡರ್ ಆಗಿದ್ದರು.

ಸ್ನೇಹಿತನ ಹುಟ್ಟುಹಬ್ಬದ ಹಿನ್ನೆಲೆ, ಕಾರ್ಯಕ್ರಮಕ್ಕಾಗಿ ಪಟಾಕಿ ತರಲು ಸ್ನೇಹಿತನ ಜೊತೆಗೆ ಅತ್ತಿಬೆಲೆಯ ಬಾಲಾಜಿ ಟ್ರೇಡರ್ಸ್​ಗೆ ಪಟಾಕಿ ಖರೀದಿಸಲು ಹೋಗಿದ್ದರು. ಇದೇ ವೇಳೆ, ಅಗ್ನಿ ದುರಂತ ಸಂಭವಿಸಿತ್ತು.

ಈ ದುರ್ಘಟನೆಯಲ್ಲಿ ವೆಂಕಟೇಶ್ ಅವರ ಸ್ನೇಹಿತ ಪಾರಾಗಿದ್ದಾರೆ. ​ವೆಂಕಟೇಶ್ ಅವರು ಅವಘಡದಲ್ಲಿ ಸಿಲುಕಿಕೊಂಡು ಗಂಭೀರವಾಗಿ ಗಾಯಗೊಂಡಿದ್ದರು. ಬೆಂಕಿ ಅವಘಡದಲ್ಲಿ ಅವರ ದೇಹ 50ರಷ್ಟು ಸುಟ್ಟಿತ್ತು. ಕೂಡಲೇ ಅವರನ್ನು ಸೇಂಟ್ ಜಾನ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಿಸದೆ ಅವರು ಅ.12 ರಂದು ಬೆಳಗ್ಗೆ ಕೊನೆಯುಸಿರೆಳೆದಿದ್ದಾರೆ ಎಂದು ತಿಳಿದುಂಬಂದಿದೆ.

ಅಕ್ಟೋಬರ್ 07ರಂದು ಬೆಂಗಳೂರು ನಗರ ಜಿಲ್ಲೆಯ ಆನೇಕಲ್ ತಾಲೂಕಿನ ಅತ್ತಿಬೆಲೆಯಲ್ಲಿ ಪಟಾಕಿ ಗೋದಾಮಿನಲ್ಲಿ ಅಗ್ನಿ ದುರಂತ ಸಂಭವಿಸಿತ್ತು. ಈ ಅಗ್ನಿ ಅವಘಡದಲ್ಲಿ ಪಟಾಕಿಗಳು ಹೊತ್ತಿ ಉರಿದಿದ್ದವು. ಇದರಿಂದ ಗೋದಾಮಿನಲ್ಲಿ ಕೆಲಸ ಮಾಡುತ್ತಿದ್ದ ತಮಿಳುನಾಡಿನ ಮೂಲದ 15 ಜನ ಮೃತಪಟ್ಟಿದ್ದರು.

ದುರಂತದಲ್ಲಿ 14 ಮಂದಿ ಸಜೀವ ದಹನಗೊಂಡಿದ್ದರೆ, ಗಂಭೀರವಾಗಿ ಗಾಯಗೊಂಡಿದ್ದ ತಮಿಳುನಾಡಿನ ದಿನೇಶ್ ಎಂಬ ಯುವಕ ಬುಧವಾರ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ. ಇನ್ನು ಆರು ಮಂದಿ ಗಾಯಾಳುಗಳು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!