Thursday, September 19, 2024

ಪ್ರಾಯೋಗಿಕ ಆವೃತ್ತಿ

ಪ್ರತಿಭಾ ಪುರಸ್ಕಾರವು ವಿದ್ಯಾರ್ಥಿಗಳಿಗೆ ಉತ್ತೇಜನ ನೀಡುತ್ತದೆ- ರವಿಕುಮಾರ್

ಪ್ರತಿಭಾ ಪುರಸ್ಕಾರ ಕಾರ್ಯಕ್ರಮವು ವಿದ್ಯಾರ್ಥಿಗಳಲ್ಲಿ ಚೆನ್ನಾಗಿ ಓದಲು ಉತ್ತೇಜನ ತುಂಬುತ್ತದೆ. ಚೆನ್ನಾಗಿ ಓದುವ ಮಕ್ಕಳು ಹಣವಿಲ್ಲದ ಕಾರಣಕ್ಕೆ ಓದು ನಿಲ್ಲಿಸಬಾರದು, ಅಂತಹ ಸಂದರ್ಭದಲ್ಲಿ ವಿದ್ಯಾರ್ಥಿಗಳು ಖಂಡಿತವಾಗಿಯೂ ನನ್ನಲ್ಲಿ ಬಂದು ಹಣದ ನೆರವು ಪಡೆಯಬಹುದು ಎಂದು ಶಾಸಕ ಪಿ. ರವಿಕುಮಾರ್ ಹೇಳಿದರು.

ಮಂಡ್ಯ ನಗರದ ರಾಘವೇಂದ್ರ ಸ್ವಾಮಿ ಮಠದಲ್ಲಿ ಅಖಿಲ ಕರ್ನಾಟಕ ಕರಾವಳಿ ಸಾಂಸ್ಕೃತಿಕ ಒಕ್ಕೂಟ ಇವರ ಆಶ್ರಯದಲ್ಲಿ ಶಿಕ್ಷಕರ ದಿನಾಚರಣೆ, ಪ್ರತಿಭಾ ಪುರಸ್ಕಾರ ಮತ್ತು ಯಕ್ಷಗಾನ ಪ್ರದರ್ಶನದ ಕಾರ್ಯಕ್ರಮ  ಉದ್ಘಾಟಿಸಿ ಅವರು ಮಾತನಾಡಿದರು.

ನಾನು ಶಾಸಕನಾಗುವ ಮುಂಚಿನಿಂದಲೂ ಹಣವಿಲ್ಲದೇ ಓದು ನಿಲ್ಲಿಸಿದ ಮಕ್ಕಳಿಗೆ ಹಣದ ಸಹಾಯ ಮಾಡುತ್ತಿದ್ದೇನೆ, ಮುಂದೆಯೂ ಕೂಡ ಇದು ಮುಂದುವರೆಯುತ್ತದೆ ಎಂದರು.

ಕಾರ್ಯಕ್ರಮದಲ್ಲಿ ಪತಂಜಲಿ ಯೋಗ ಶಿಕ್ಷಕ ಎಸ್. ಶಂಕರನಾರಾಯಣ ಶಾಸ್ತ್ರಿರವರಿಗೆ ಉತ್ತಮ ಶಿಕ್ಷಕ ಪ್ರಶಸ್ತಿ ಹಾಗೂ ಸರ್ಕಾರಿ ಪದವಿ ಪೂರ್ವ ಕಾಲೇಜು(ವಿ.ಸಿ.ಫಾರಂ) ಕನ್ನಡ ಭಾಷಾ ಶಿಕ್ಷಕರು ಹಾಗೂ ಕರ್ನಾಟಕ ರಾಜ್ಯದ ಉತ್ತಮ ಶಿಕ್ಷಕಿ ಪ್ರಶಸ್ತಿ ವಿಜೇತರಾದ ಜಿ.ಸಿ. ರಜನಿರವರಿಗೆ ಉತ್ತಮ ಶಿಕ್ಷಕಿ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.

ಇದೇ ಸಂದರ್ಭದಲ್ಲಿ ಕರಾವಳಿ ಬಡಗು ತಿಟ್ಟು ನುರಿತ ಕಲಾವಿದರಿಂದ ಕಂಸವಧೆ ಎಂಬ ಯಕ್ಷಗಾನ ಪ್ರದರ್ಶನ ಜರುಗಿತು.

ಎಸ್.ಎಸ್.ಎಲ್.ಸಿ ತರಗತಿಯಲ್ಲಿ ಅತೀ ಹೆಚ್ಚು ಅಂಕ ಪಡೆದ ಪ್ರೀತಂ (ರಾಜ್ಯಕ್ಕೆ), ಸಹನಾ ಆರ್ ಭಟ್ (ರಾಜ್ಯಕ್ಕೆ) ಎಸ್. ಪೈ ಮಾನ್ಯ (ರಾಜ್ಯಕ್ಕೆ) ಅನಗ ಎಸ್ ಅಡಿಗ (ಸಿ.ಬಿ.ಎಸ್.ಸಿ) ಹಾಗೂ ತೇಜಸ್ವಿನಿ, (ಐ.ಸಿ.ಎಸ್.ಸಿ) ವಿಭಾಗದಲ್ಲಿ ಅತೀ ಹೆಚ್ಚು ಅಂಕ ಪಿ.ಯು.ಸಿ ವಿಭಾಗದಲ್ಲಿ ಮಿಥುನ್ ಡಿ ಬುದ್ಯಾ, ದಿಶಾ ವಿ ಶೆಟ್ಟಿ (ಇಬ್ಬರು ಸಹಾ ಪಿ.ಸಿ.ಎಂ.ಬಿ ವಿಭಾಗದಲ್ಲಿ) ಅತೀ ಹೆಚ್ಚು ಅಂಕ ಬಿ.ಇ. ವಿಭಾಗದಲ್ಲಿ ಕಾವ್ಯಶ್ರೀ ಹೊಳಲು, ಐಟಿಐ ವಿಭಾಗದಲ್ಲಿ ಆದರ್ಶ ಮಯ್ಯ (ಬಿ.ಎಸ್.ಸಿ ) ಮಾನಸ ಎಂ ಹೆಗಡೆ, ಕುಮಾರಿ ಸಾನ್ವಿ (ಚೆಸ್ ಚಾಂಪಿಯನ್) ಪ್ರಣಮ್ಯ ಎಸ್ ಶೆಟ್ಟಿ (ರಾಷ್ಟ್ರೀಯ ಟೂರ್ನಮೆಂಟ್ ವಿಭಾಗ), ಬ್ಯಾಸ್ಕೆಟ್ಬಾಲ್ ವಿಭಾಗದಲ್ಲಿ ಪಾಲ್ಗೊಂಡಿದ್ದ ತನ್ವಿ ವಿ ಶೆಟ್ಟಿ (ಪ್ರಥಮ) ಹಾಗೂ ಭರತನಾಟ್ಯದಲ್ಲಿ ಉತ್ತಮ ಸಾಧನೆ ತೋರಿದ ಡಾ. ಪಿ. ಮಾನಸ (ಎಂ.ಟೆಕ್) ಅವರನ್ನು ಅಭಿನಂದಿಸಲಾಯಿತು.

ವೇದಿಕೆಯಲ್ಲಿ ಅಧ್ಯಕ್ಷ ಟಿ.ಸದಾಶಿವ ಭಟ್, ಮೈಸೂರು ವಲಯದ ಲಯನ್ಸ್ ಕ್ಲಬ್ ಹಿರಿಯ ಮುಖಂಡ ಡಾ. ನಾಗರಾಜು ವಿ ಬಾಯರಿ, ಮಕ್ಕಳ ತಜ್ಞ ಡಾ. ಪಿ.ಎಂ. ಜಗದೀಶ್ ಕುಮಾರ್, ನಿಕಟಪೂರ್ವ ಅಧ್ಯಕ್ಷ ಡಾ. ಎಸ್ ಶ್ರೀನಿವಾಸ ಶೆಟ್ಟಿ, ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಸಂಪತ್ ಕುಮಾರ್ ಶೆಟ್ಟಿ, ಖಜಾಂಚಿ ಜಿ.ಕೆ. ಶೆಣೈ ಇನ್ನಿತರರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!