Thursday, September 19, 2024

ಪ್ರಾಯೋಗಿಕ ಆವೃತ್ತಿ

ಮಂಡ್ಯ| ಪಿತೃಪಕ್ಷದ ತಿಂಡಿಗಳನ್ನು ಸವಿದು ಕಾವೇರಿ ಹೋರಾಟ ಮುಂದುವರಿಕೆ

ಮಂಡ್ಯದಲ್ಲಿ ಹಲವಾರು ದಿನಗಳಿಂದ ನಿರಂತರವಾಗಿ ನಡೆಯುತ್ತಿರುವ ಕಾವೇರಿ ಹೋರಾಟವು ಮಹಾಲಯ ಅಮಾವಾಸ್ಯೆಯ ದಿನವೂ ಎಂದಿನಂತೆ ಮುಂದುವರೆಯಿತು. ಪಿತೃಪಕ್ಷಕ್ಕೆಂದು ತಯಾರಿಸಿದ ತಿಂಡಿಗಳನ್ನು ಸವಿದು ಹೋರಾಟಗಾರರು ಹೋರಾಟದಲ್ಲಿ ಭಾಗಿಯಾದರು.

ಮಂಡ್ಯ ನಗರದ ಸರ್ ಎಂ ವಿ ಪ್ರತಿಮೆ ಎದುರು ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ಜೊತೆ  ಕನ್ನಡ ಸೇನೆ ಕಾರ್ಯಕರ್ತರು ಬೆಂಗಳೂರು ಮೈಸೂರು ಹೆದ್ದಾರಿಯಲ್ಲಿ ಹಬ್ಬದ ತಿಂಡಿ ತಿನಿಸುಗಳನ್ನು ಸೇವಿಸುವ ಮೂಲಕ ಹೋರಾಟ ಮುಂದುವರಿಸಿದರು.

ಜಿಲ್ಲಾ ರೈತ ಹಿತರಕ್ಷಣಾ ಸಮಿತಿಯ ನಿರಂತರ ಧರಣಿಗೆ ಮಳವಳ್ಳಿ ಮತ್ತು ಕೆ.ಎಂ.ದೊಡ್ಡಿ ಭಾಗದ ರೈತ ಸಂಘದ ಕಾರ್ಯಕರ್ತರು ಬೆಂಬಲ ಸೂಚಿಸಿ ಭಾಗಿಯಾದರು. ಕೇಂದ್ರ- ರಾಜ್ಯ ಸರ್ಕಾರ ಮತ್ತು ಕಾವೇರಿ ನದಿ ನೀರು ಪ್ರಾಧಿಕಾರದ ವಿರುದ್ಧ ದಿಕ್ಕಾರದ ಘೋಷಣೆ ಕೂಗಿ ಜಲಾಶಯಗಳನ್ನು ಬರಿದು ಮಾಡುವ ಮೂಲಕ ರೈತರು ಮತ್ತು ಕನ್ನಡಿಗರನ್ನು ಸಂಕಷ್ಟಕ್ಕೆ ದೂಡಲಾಗಿದೆ ಎಂದು ಕಿಡಿ ಕಾರಿದರು.

ಜಿಲ್ಲಾ ರೈತ ಹಿತರಕ್ಷಣಾ ಸಮಿತಿಯ ಸುನಂದಾ ಜಯರಾಂ, ಕೆ ಬೋರಯ್ಯ, ಸಿದ್ದರಾಮೇಗೌಡ, ರೈತಸಂಘದ ಇಂಡುವಾಳು ಚಂದ್ರಶೇಖರ್, ಮುದ್ದೇಗೌಡ, ಕೃಷ್ಣ ಪ್ರಕಾಶ್, ಕನ್ನಡ ಸೇನೆ ಮಂಜುನಾಥ್, ನಾರಾಯಣ್, ರೈತಸಂಘದ ರಾಮಲಿಂಗೇಗೌಡ, ಬಸವರಾಜೇಗೌಡ, ತಳಗವಾದಿ ಚೆನ್ನಯ್ಯ, ಎಚ್ ಡಿ ರಾಮೇಗೌಡ,ಚಿಕ್ಕಮೊಗ ಕುರಿ ಕೆಂಪನದೊಡ್ಡಿ, ಸಿದ್ದರಾಮು,ನಾರಾಯಣ,  ಪುಟ್ಟಸ್ವಾಮಿ, ಬಸವರಾಜ, ಬೋರೇಗೌಡ, ಮಲ್ಲೇಶ್ ನೇತೃತ್ವ ವಹಿಸಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!