Thursday, September 19, 2024

ಪ್ರಾಯೋಗಿಕ ಆವೃತ್ತಿ

ರಾಜ್ಯಗಳ ತೆರಿಗೆ ಪಾಲು ವಿತರಿಸಿದ ಕೇಂದ್ರ| ಉತ್ತರ ಪ್ರದೇಶಕ್ಕೆ ₹13,088 ಕೋಟಿ, ಕರ್ನಾಟಕಕ್ಕೆ ₹2,660 ಕೋಟಿ

ರಾಜ್ಯಗಳ ತೆರಿಗೆ ಪಾಲನ್ನು ಮಂಗಳವಾರ ಬಿಡುಗಡೆ ಮಾಡಿರುವ ಕೇಂದ್ರ ಸರ್ಕಾರವು, ಒಟ್ಟು 72,961.21 ಕೋಟಿ ರೂ. ಹಂಚಿಕೆ ಮಾಡಿದೆ.

ಹೆಚ್ಚು ಮತ್ತು ತ್ವರಿತವಾಗಿ ತೆರಿಗೆ ಪಾಲು ಬಿಡುಗಡೆ ಮಾಡುವಂತೆ ಒತ್ತಾಯಿಸುತ್ತಿದ್ದ ಕರ್ನಾಟಕಕ್ಕೆ 2,660 ಕೋಟಿ ರೂ. ವಿತರಿಸಲಾಗಿದೆ. ಒಟ್ಟಾರೆ 72,961 ಕೋಟಿ ರೂ.ಗಳ ತೆರಿಗೆಯನ್ನು ರಾಜ್ಯಗಳಿಗೆ ಕೇಂದ್ರ ಸರಕಾರವು ಹಂಚಿಕೆ ಮಾಡಿದೆ.

ಮಂಗಳವಾರ ಹಣಕಾಸು ಸಚಿವಾಲಯ ಮಂಗಳವಾರ ಬಿಡುಗಡೆಗೊಳಿಸಿರುವ ಪಟ್ಟಿಯಲ್ಲಿ ಅತಿ ಹೆಚ್ಚು ತೆರಿಗೆ ಪಾಲು ಪಡೆದ ರಾಜ್ಯಗಳಲ್ಲಿ ಉತ್ತರ ಪ್ರದೇಶ(₹13,088.51 ಕೋಟಿ), ಬಿಹಾರ(₹7,338.44 ಕೋಟಿ) ಮತ್ತು ಮಧ್ಯಪ್ರದೇಶ(₹5,727.44 ಕೋಟಿ) ಮೊದಲ ಮೂರು ಸ್ಥಾನಗಳನ್ನು ಗಳಿಸಿವೆ. ಅತಿ ಕಡಿಮೆ ಪಾಲು ಪಡೆದ ರಾಜ್ಯಗಳಲ್ಲಿ ಗೋವಾ(₹281.63 ಕೋಟಿ) ಮೊದಲ ಸ್ಥಾನದಲ್ಲಿದೆ. ಸಿಕ್ಕಿಂ(₹283.10 ಕೋಟಿ), ಮಿಝೋರಾಂ(₹364.80 ಕೋಟಿ) ನಂತರದ ಸ್ಥಾನದಲ್ಲಿವೆ.

“>

ಸಾಮಾನ್ಯವಾಗಿ ನವೆಂಬರ್‌ 10ರಂದು ತೆರಿಗೆ ಪಾಲಿನ ಹಣವನ್ನು ರಾಜ್ಯಗಳಿಗೆ ವರ್ಗಾಯಿಸುವ ರೂಢಿಯನ್ನು ಕೇಂದ್ರ ಸರ್ಕಾರವು ಪಾಲಿಸುತ್ತಾ ಬಂದಿದೆ. ಆದರೆ, ಈ ಬಾರಿ ದೀಪಾವಳಿ ಹಬ್ಬದ ಹಂಗಾಮಿನ ಹಿನ್ನೆಲೆಯಲ್ಲಿ ಅವಧಿಗಿಂತ ಮೂರು ದಿನಗಳಿಗೆ ಮುಂಚಿತವಾಗಿಯೇ ತೆರಿಗೆಯ ಪಾಲನ್ನು ಕೇಂದ್ರ ಸರಕಾರ ರಾಜ್ಯ ಸರಕಾರಗಳಿಗೆ ನೀಡಿದೆ.

ಹಬ್ಬದ ಸಮಯದಲ್ಲಿ ಖರೀದಿ ಭರಾಟೆ ಜೋರಾಗಿದ್ದ ಹಿನ್ನೆಲೆಯಲ್ಲಿ ಅಕ್ಟೋಬರ್‌ ತಿಂಗಳಲ್ಲಿ ದಾಖಲೆಯ 1.72 ಲಕ್ಷ ಕೋಟಿ ರೂಪಾಯಿ ಜಿಎಸ್‌ಟಿ ಸಂಗ್ರಹವಾಗಿತ್ತು. ಅಕ್ಟೋಬರ್ ತಿಂಗಳ ಸರಕು ಮತ್ತು ಸೇವಾ ತೆರಿಗೆ ಸಂಗ್ರಹವು ಏಪ್ರಿಲ್ 2023ರ ನಂತರ ಸಂಗ್ರಹವಾದ ಎರಡನೇ ಅತಿ ಹೆಚ್ಚಿನ ತೆರಿಗೆ ಸಂಗ್ರಹವಾಗಿದೆ. ಇದರ ಬೆನ್ನಲ್ಲೇ ಇದೀಗ ಕೇಂದ್ರ ಸರ್ಕಾರ ರಾಜ್ಯಗಳಿಗೆ ತಮ್ಮ ತಮ್ಮ ತೆರಿಗೆ ಪಾಲನ್ನು ಬಿಡುಗಡೆ ಮಾಡಿದೆ.

ಕೃಪೆ: ಈದಿನ.ಕಾಂ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!