Friday, September 20, 2024

ಪ್ರಾಯೋಗಿಕ ಆವೃತ್ತಿ

ಕಾವೇರಿ ಹೋರಾಟ| ಕೆಎಸ್ಆರ್’ಟಿಸಿ ನಿವೃತ್ತ ನೌಕರರಿಂದ ರಸ್ತೆತಡೆ

ಕಾವೇರಿ ವಿಚಾರದಲ್ಲಿ ಕರ್ನಾಟಕ ರಾಜ್ಯದ ಹಿತ ಕಾಪಾಡದ ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿರುದ್ಧ ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ನಡೆಸುತ್ತಿರುವ ನಿರಂತರ ಧರಣಿಗೆ ಗುರುವಾರ ಕೆಎಸ್ಆರ್’ಟಿಸಿ ನಿವೃತ್ತ ನೌಕರರು ಮಂಡ್ಯದಲ್ಲಿ ರಸ್ತತಡೆ ನಡೆಸಿ ಬೆಂಬಲ ವ್ಯಕ್ತಪಡಿಸಿದರು. ವಾಹನ ಸಂಚಾರಕ್ಕೆ ಅಡ್ಡಿಪಡಿಸಿ ಹೆದ್ದಾರಿ ತಡೆ ಮಾಡಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಧಿಕ್ಕಾರದ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ನಿವೃತ್ತ ನೌಕರರ ಕ್ಷೇಮಾಭಿವೃದ್ಧಿ ಸಂಘದ ನೇತೃತ್ವದಲ್ಲಿ ನಿವೃತ್ತ ನೌಕರರು ಮಂಡ್ಯ ನಗರದ ಸಂಜಯ ವೃತ್ತದಿಂದ ಮೆರವಣಿಗೆ ಹೊರಟು, ರೈತ ಹಿತರಕ್ಷಣ ಸಮಿತಿ ನಡೆಸುತ್ತಿರುವ ಧರಣಿ ಸ್ಥಳಕ್ಕೆ ಧಾವಿಸಿ ಬೆಂಬಲ ವ್ಯಕ್ತಪಡಿಸಿದರು.

ಸಂಘದ ಮುಖಂಡ ವೆಂಕಟರಾಮು ಮಾತನಾಡಿ, ಆಳುವ ಸರ್ಕಾರಗಳು ಆಗಾಗ್ಗೆ ಹಣಕಾಸು ವಿಚಾರವಾಗಿ ಶ್ವೇತ ಪತ್ರ ಹೊರಡಿಸುತ್ತವೆ,ಆದರೆ ಜನತೆಗೆ ಅತ್ಯಮೂಲ್ಯವಾದ ನೀರಿನ ವಿಚಾರದಲ್ಲಿ ನಿರ್ಲಕ್ಷ ವಹಿಸಿದೆ, ಜಲಾಶಯಗಳಲ್ಲಿ ಇರುವ ನೀರಿನಲ್ಲಿ ಲಭ್ಯತೆ, ಜನ ಜಾನುವಾರುಗಳಿಗೆ ಕುಡಿಯುವ ನೀರು, ರೈತರ ಜಮೀನಿನಲ್ಲಿ ಇರುವ ಬೆಳೆ, ಮತ್ತೆ ಎಷ್ಟು ಪ್ರದೇಶದಲ್ಲಿ ಬೆಳೆ ಹಾಕಬೇಕಾಗಿದೆ, ಕೆರೆಕಟ್ಟೆಗಳಿಗೆ ಬೇಕಾಗಿರುವ ನೀರು ಎಷ್ಟು ಬೇಕು ಎಂಬ ಲೆಕ್ಕಾಚಾರದ ಶ್ವೇತ ಪತ್ರ ಹೊರಡಿಸುವುದಿಲ್ಲ, ಇದನ್ನು ಗಮನಿಸಿದರೆ ಆಳುವ ವರ್ಗಕ್ಕೆ ರೈತರ ಬಗ್ಗೆ ಎಷ್ಟು ಕಾಳಜಿ ಇದೆ ಎಂಬುದನ್ನು ತೋರ್ಪಡಿಸುತ್ತದೆ ಎಂದರು.

ಸಂಘದ ಅಧ್ಯಕ್ಷ ಚಿಕ್ಕದೇವಯ್ಯ, ಗೌರವಾಧ್ಯಕ್ಷ ಮುನಿಯಪ್ಪ, ಕೆ ಶಿವಣ್ಣ, ನರಸೇಗೌಡ,ಮಹದೇವಸ್ವಾಮಿ ನೇತೃತ್ವ ವಹಿಸಿದ್ದರು

ಧರಣಿಯಲ್ಲಿ ಜಿಲ್ಲಾ ರೈತ ಹಿತರಕ್ಷಣಾ ಸಮಿತಿಯ ಪ್ರಧಾನ ಕಾರ್ಯದರ್ಶಿ ಕೆ ಬೋರಯ್ಯ, ಸುನಂದ ಜಯರಾಂ, ಮಲ್ಲನಾಯಕನಕಟ್ಟೆ ಬೋರೇಗೌಡ, ರೈತಸಂಘದ ಇಂಡುವಾಳು ಚಂದ್ರಶೇಖರ್, ಮುದ್ದೇಗೌಡ, ಕನ್ನಡ ಸೇನೆ ಮಂಜುನಾಥ್, ನಾರಾಯಣ್, ಅಂಬುಜಮ್ಮ, ಇಂಡುವಾಳು ಬಸವರಾಜು, ಹುರುಗಲವಾಡಿ ರಾಮಯ್ಯ ಸೇರಿದಂತೆ ಇತರರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!