Friday, September 20, 2024

ಪ್ರಾಯೋಗಿಕ ಆವೃತ್ತಿ

ಬಿಜೆಪಿ ಸೋಲಿಸಿ, ಪ್ರಜಾಪ್ರಭುತ್ವ ಉಳಿಸಬೇಕಾದ ತುರ್ತು ನಮ್ಮ ಮುಂದಿದೆ: ಬಡಗಲಪುರ ನಾಗೇಂದ್ರ

ಮೋದಿ ಸರ್ಕಾರ ಮತ್ತೆ ಅಧಿಕಾರಕ್ಕೆ ಬಂದರೆ ಮುಂದೆ ಚುನಾವಣೆಯೇ ನಡೆಯಲ್ಲ. ಬಿಜೆಪಿಯನ್ನು ಸೋಲಿಸಿ, ಪ್ರಜಾಪ್ರಭುತ್ವವನ್ನು ಉಳಿಸಬೇಕಾದ ತುರ್ತು ನಮ್ಮ ಮುಂದಿದೆ ಎಂದು ಕರ್ನಾಟಕ ರಾಜ್ಯ ರೈತಸಂಘದ  ಅಧ್ಯಕ್ಷ ಬಡಗಲಪುರ ನಾಗೇಂದ್ರ ಹೇಳಿದ್ದಾರೆ.

ಬೆಂಗಳೂರಿನಲ್ಲಿ ನಾನಾ ಸಂಘಟನೆಗಳ ನೇತೃತ್ವದಲ್ಲಿ ನಡೆಯುತ್ತಿರುವ ‘ಮಹಾಧರಣಿಯಲ್ಲಿ ಅವರು ಮಾತನಾಡಿದರು. “ಸ್ವತಂತ್ರ ನಂತರ ರೈತರ ಸಮುದಾಯ ಯಾವ ಸಮಸ್ಯೆಗೆ ಎದುರಾಗಿತ್ತಿದೆಯೊ ಅದರ ವಿರುದ್ಧ ನಿರಂತರ ಹೋರಾಟ ನಡೆದಿದೆ. ಆದರೆ ದೆಹಲಿ ಹೋರಾಟ ರೈತರ ಆಕ್ರೋಶ ಕಟ್ಟೆ ಒಡೆದ ಹೋರಾಟವಾಗಿದೆ. 780 ರೈತರು ತಮ್ಮ ಪ್ರಾಣವನ್ನು ಇದಕ್ಕೆ ಅರ್ಪಿಸಿದ್ದಾರೆ. ರೈತರ ಈ ತೀವ್ರ ಹೋರಾಟವು ಕಾಯ್ದೆ ವಾಪಾಸ್ ಪಡೆಯಲೇ ಬೇಕಾದ ಸ್ಥಿತಿ  ತಂದಿಟ್ಟಿತ್ತು. 2020ರಲ್ಲಿ ಹೋರಾಟಗಾರ ಮಾರುತಿ ಮಾನ್ಪಡೆ ತೀರಿಕೊಂಡರು. ಈ ವೇಳೆ ಬಿಜೆಪಿಯ ಯಡಿಯೂರಪ್ಪ ಅವರ ಸರ್ಕಾರ ರೈತ ವಿರೋಧಿ ಕಾಯ್ದೆಯನ್ನು ಜಾರಿ ತಂದಾಗ ರೈತ, ದಲಿತ, ಕಾರ್ಮಿಕರು ಐಕ್ಯವಾಗಿ ಹೋರಾಟ ನಡೆಸಿದೆವು” ಎಂದು ತಿಳಿಸಿದರು.

“ಸ್ವತಂತ್ಯ್ರ ಪಡೆಯಲು ನಾವು 2 ಶತಮಾನಗಳ ಕಾಲ ಹೋರಾಟ ಮಾಡಿದ್ದೇವೆ ನಾವು. ಈ ದೇಶಕ್ಕಾಗಿ ಜನರು ತಮ್ಮ ಆಯುಷ್ಯವನ್ನೇ ಮುಡಿಪಿಟ್ಟಿದ್ದಾರೆ. ನಾವು ಈಗ ಸಂವಿಧಾನ ಉಳಿಸಿಕೊಳ್ಳಬೇಕಾದ ಪರಿಸ್ಥಿತಿಯಿದೆ. 2024ರ ಚುನಾವಣೆಯಲ್ಲಿ ಭಾರತದ ದೇಶದ ಜನರಿಗೆ ದೊಡ್ಡ ಮಹತ್ವವಾದ ಚುನಾವಣೆ. ಈ ಚುನಾವಣೆಯಲ್ಲಿ ಕೋಮುವಾದಿ, ಬಂಡವಾಳಶಾಹಿಯನ್ನು ಪ್ರತಿನಿಧಿಸುವ ಮೋದಿ ಸರ್ಕಾರ ಮತ್ತೆ ಚುನಾತರಾದರೆ, ಮುಂದೆಂದೂ ಚುನಾವಣೆ ನಡೆಯುವುದಿಲ್ಲ” ಎಂದರು.

“2024ರ ಚುನಾವಣೆಯಲ್ಲಿ ಬಿಜೆಪಿ ಮತ್ತು ಸಂಘಪರಿವಾರವನ್ನು ಪ್ರತಿನಿಧಿಸುವ ಜನರು ಅಧಿಕಾರಕ್ಕೆ ಬಂದರೆ ಭಾರತ ಸೋಲುತ್ತದೆ. ಜನಚಳವಳಿಗಲೇ ನಾವು ಬದಲಾವಣೆ ತರಬೇಕು. ರಾಜಕೀಯ ಪಕ್ಷಗಳಿಂದ ಬದಲಾವಣೆ ಸಾಧ್ಯವಿಲ್ಲ. 2024ರ ಚುನಾವಣೆ ಜನಚಳವಳಿಗಳು ನಿರ್ಣಾಯ ಪಾತ್ರ ವಹಿಸಬೇಕು” ಎಂದರು.

ಧರಣಿಯಲ್ಲಿ ಮಾತನಾಡಿದ ರೈತ ಹೋರಾಟಗಾರ ಡಾ. ವಿಜು ಕೃಷ್ಣನ್, “2014ರಲ್ಲಿ ಚುನಾಔಣೆ ಬಂದಾಗ ಹಲವಾರು ಭರವಸೆಗಳನ್ನು ಬಿಜೆಪಿ ನೀಡಿತ್ತು. ಆ ಮೂಲಕ ಅಧಿಕಾರಕ್ಕೆ ಬಂದಿತು. ರೈತರು, ಯುವಜನರು ಹಾಘೂ ಮಹಿಳೆಯರಿಗೆ ‘ಅಚ್ಛೇ ದಿನ್’ ಬರುತ್ತದೆ ಎಂದಿದ್ದರು. ಆದರೆ, ಯಾರಿಗೆ ಅಚ್ಛೇ ದಿನ್ ಬಂದಿದೆ. ರೈತರು, ಯುವಜನರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಮಹಿಳೆಯರ ಮೇಲೆ ದೌರ್ಜನ್ಯಗಳು ನಡೆಯುತ್ತಿವೆ” ಎಂದು ಕಿಡಿಕಾರಿದರು.

“ಉತ್ಪಾದನೆ ಖರ್ಚಿಗಿಂತ 50% ಹೆಚ್ಚು ಅದಾಯ ಬರುವಂತೆ ಬೆಂಬಲ ಬೆಲೆ ನೀಡುತ್ತೇವೆ ಎಂದಿದ್ದರು. ಆದರೆ, ಈಗ ಕೃಷಿ ಮಂತ್ರಿಯನ್ನ ಕೇಳಿದರೆ, ‘ಚುನಾವಣಾ ಸಮಯದಲ್ಲಿ ಎಲ್ಲ ರಾಜಕೀಯ ಪಕ್ಷಗಳು ಭರವಸೆ ನೀಡುತ್ತವೆ. ಅದೆಲ್ಲವನ್ನೂ ಅನುಷ್ಠಾನಕ್ಕೆ ತರಲು ಸಾಧ್ಯವಿಲ್ಲ’ ಎಂದು ಈಗ ಅವರು ಹೇಳುತ್ತಿದ್ದಾರೆ. ರೈತರ ಭೂಮಿಯನ್ನು ಕಸಿದುಕೊಳ್ಳುವ ನೀತಿಗಳನ್ನು ಸುಗ್ರೀವಾಜ್ಞೆ ಮೂಲಕ ಜಾರಿಗೆ ತಂದರು. ಅದರ ವಿರುದ್ಧ ದಲಿತ, ಕಾರ್ಮಿಕರ, ರೈತರು ಐಕ್ಯ ಹೋರಾಟ ನಡೆಸಿದರು. ಹೀಗಾಗಿ, ಸಂಸತ್ತಿನಲ್ಲಿ ಆ ಮಸೂದೆಯನ್ನು ಹಿಂಪಡೆದುಕೊಂಡರು” ಎಂದು ತಿಳಿಸಿದರು.

“ಕೊರೊನಾ ಸಮಯದಲ್ಲಿ ರೈತ ವಿರೋಧಿ ನೀತಿಗಳನ್ನು ಜಾರಿಗೆ ತಂದರು. ಅವುಗಳ ವಿರುದ್ಧ ಸಾಂಕ್ರಾಮಿಕ ರೋಗಕ್ಕೂ ಹೆದರದೆ, ರೈತರು ಹೋರಾಟ ನಡೆಸಿದರು. ಸಂಯುಕ್ತ ಕಿಸಾನ್ ಮೂರ್ಚಾ, ‘ಗ್ರಾಮೀಣ್ ಭಾರತ್ ಬಂದ್’ಗೆ ಕರೆಕೊಟ್ಟು, ದೆಹಲಿ ಗಡಿಯಲ್ಲಿ ಒಂದು ವರ್ಷದ ಕಾಲ ಹೋರಾಟ ನಡೆಸಿದರು. ಆ ಹೋರಾಟ ಗೆದ್ದಿತು. ಅದಕ್ಕೆ ಕಾರಣ, ಎಲ್ಲರ ಐಕ್ಯತೆ. ಈ ಐಕ್ಯತೆಯನ್ನ ಎಲ್ಲರೂ ಮುಂದೆ ಕೊಂಡೊಯ್ಯಬೇಕು” ಎಂದರು.

“ನರಗುಂದ, ನವಲಗುಂದ ರೈತ ಹುತಾತ್ಮರ ಭೂಮಿ. ರಾಜ್ಯದ ರೈತರು, ದಲಿತರು, ಆದಿವಾಸಿಗಳು ಹೋರಾಟದ ಐಕ್ಯತೆಯಲ್ಲಿ ಇಡೀ ದೇಶದಲ್ಲೇ ಎರಡು ಹೆಜ್ಜೆ ಮುಂದಿದ್ದಾರೆ. ಎಲ್ಲೆಡೆ, ಇನ್ನೂ ಎಲ್ಲರನ್ನೂ ಒಗ್ಗೂಡಿಸಲು ಪ್ರಯತ್ನಿಸಲಾಗುತ್ತಿದೆ. ಇಲ್ಲಿ, ಎಲ್ಲರೂ ಒಗ್ಗೂಡಿ ಹೋರಾಟ ನಡೆಸುತ್ತಿದ್ದಾರೆ” ಎಂದರು.

“ಪ್ರಸ್ತುತ ಐದು ರಾಜ್ಯಗಳಲ್ಲಿ ಚುನಾವಣೆ ನಡೆಯುತ್ತಿದೆ. ಅಲ್ಲಿ, ಮೋದಿ ಅವರ ಹೆಸರಿನಲ್ಲಿ ಭರವಸೆ ನೀಡಲಾಗುತ್ತಿದೆ. ಅವರು ರಾಜಸ್ಥಾನದಲ್ಲಿ 450 ರೂ.ಗೆ ಅಡುಗೆ ಅನಿಲ ನೀಡುತ್ತೇವೆಂದು ಹೇಳುತ್ತಿದ್ದಾರೆ. ಆದರೆ, ಮೋದಿ ಅವರು ಅಧಿಕಾರಕ್ಕೆ ಬರುವ ಮುನ್ನ 380 ರೂ. ಇದ್ದ ಸಿಲಿಂಡರ್ ಬೆಲೆ, ಈಗ 1250 ರೂ. ದಾಟಿದೆ. ಈಗ ಅವರು ಸುಳ್ಳು ಭರವಸೆಗಳನ್ನ ನೀಡುತ್ತಿದ್ದಾರೆ” ಎಂದು ಆರೋಪಿಸಿದರು.

“ಇನ್ಫೋಸಿಸ್ ನಾರಾಯಣ ಮೂರ್ತಿ ಅವರು ಹೇಳುತ್ತಿದ್ದಾರೆ – ಕಾರ್ಮಿಕರು 72 ಗಂಟೆ ಕೆಲಸ ಮಾಡಬೇಕು ಅಂತ. ಆ ನೀತಿಯನ್ನು ಬಿಜೆಪಿ ಸರ್ಕಾರ ಜಾರಿಗೆ ತಂದಿದೆ. ಆದರೆ, ಈಗ ಅಧಿಕಾರದಲ್ಲಿರುವ ಕಾಂಗ್ರೆಸ್‌ ಕೂಡ ಆ ನೀತಿಯನ್ನು ಹಿಂಪಡೆದುಕೊಂಡಿಲ್ಲ. ತಮಿಳುನಾಡಿನಲ್ಲಿ ಈ ನೀತಿಯ ವಿರುದ್ಧ ಹೋರಾಟಗಳು ನಡೆದವು. ಅಲ್ಲಿನ ಸರ್ಕಾರ ಕಾರ್ಮಿಕ ವಿರೋಧಿ ನೀತಿಯನ್ನು ಹಿಂಪಡೆದುಕೊಂಡಿತು. ಆದರೆ, ರಾಜ್ಯದಲ್ಲಿ ಇನ್ನೂ ಆ ನೀತಿ ಹಾಗೆಯೇ ಉಳಿದಿದೆ” ಎಂದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!