Tuesday, November 17, 2026

ಪ್ರಾಯೋಗಿಕ ಆವೃತ್ತಿ

ಕರ್ನಾಟಕ ಅರಣ್ಯ ಇಲಾಖೆ| 540 ಪಾರೆಸ್ಟ್ ಗಾರ್ಡ್ ಹುದ್ದೆಗಳಿಗೆ ಅರ್ಜಿ ಆಹ್ವಾನ…ಇಲ್ಲಿದೆ ಸಂಪೂರ್ಣ ಮಾಹಿತಿ…..

ಕರ್ನಾಟಕ ರಾಜ್ಯ ಅರಣ್ಯ ಇಲಾಖೆಯಿಂದ ಹೊಸ ನೇಮಕಾತಿ ಅಧಿಸೂಚನೆ ಹೊರಡಿಸಲಾಗಿದ್ದು, 540 ಪಾರೆಸ್ಟ್ ಗಾರ್ಡ್ ಹುದ್ದೆಗಳಿಗೆ ಅನ್ ಲೈನ್ ಅರ್ಜಿ ಆಹ್ವಾನಿಸಲಾಗಿದೆ, ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು.

ಇಲಾಖೆ ಹೆಸರು: ಕರ್ನಾಟಕ ರಾಜ್ಯ ಅರಣ್ಯ – KFD

ಹುದ್ದೆಗಳ ಹೆಸರು: ಅರಣ್ಯ ರಕ್ಷಕ (ಫಾರೆಸ್ಟ್ ಗಾರ್ಡ್)

ಒಟ್ಟು ಹುದ್ದೆಗಳು : 540

ಅರ್ಜಿ ಸಲ್ಲಿಸುವ ಬಗೆ : ಆನ್ ಲೈನ್ 

ವಿದ್ಯಾರ್ಹತೆ: ಅಭ್ಯರ್ಥಿಯು ಯಾವುದೇ ಮಾನ್ಯತೆ ಪಡೆದ ಮಂಡಳಿಗಳು ಅಥವಾ ವಿಶ್ವವಿದ್ಯಾನಿಲಯಗಳಿಂದ 12ನೇ/ಪಿಯುಸಿ ಪೂರ್ಣಗೊಳಿಸಿರಬೇಕು.

ವಯೋಮಿತಿ: ಕರ್ನಾಟಕ ಅರಣ್ಯ ಇಲಾಖೆಯ ನೇಮಕಾತಿ ಅಧಿಸೂಚನೆಯ ಪ್ರಕಾರ, ಅಭ್ಯರ್ಥಿಯು 30-ಡಿಸೆಂಬರ್-2023 ರಂತೆ ಕನಿಷ್ಠ 18 ವರ್ಷಗಳು ಮತ್ತು ಗರಿಷ್ಠ 35 ವರ್ಷಗಳನ್ನು ಹೊಂದಿರಬೇಕು.

2ಎ, 2ಬಿ, 3ಎ, 3ಬಿ, ಒಬಿಸಿ ಅಭ್ಯರ್ಥಿಗಳು 02 ವರ್ಷಗಳು, ಎಸ್ಸಿ-ಎಸ್ಟಿ ಪ್ರವರ್ಗ – 1 ಅಭ್ಯರ್ಥಿಗಳು: 03 ವರ್ಷಗಳ ವಯೋಮಿತಿ ಸಡಿಲಿಕೆ ಇರುತ್ತದೆ.

ವೇತನ ಶ್ರೇಣಿ: ₹ 47,500

ಅರ್ಜಿ ಶುಲ್ಕ: ಎಸ್ಸಿ-ಎಸ್ಟಿ ಪ್ರವರ್ಗ – 1 ಅಭ್ಯರ್ಥಿಗಳಿಗೆ ರೂ.100/- ಎಲ್ಲಾ ಇತರ ಅಭ್ಯರ್ಥಿಗಳು, ರೂ 200/-

ಆಯ್ಕೆ ವಿಧಾನ: ಲಿಖಿತ ಪರೀಕ್ಷೆ ಮತ್ತು ಸಂದರ್ಶನ, ವೈದ್ಯಕೀಯ ಫಿಟ್ನಸ್ ಪರೀಕ್ಷೆ

ಪರೀಕ್ಷೆ ಹೀಗೆ ನಡೆಯಲಿದೆ

ಗಸ್ತು ಅರಣ್ಯ ಪಾಲಕ ಹುದ್ದೆಗಳಿಗೆ ಯಶಸ್ವಿಯಾಗಿ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ ಮೊದಲು ದೈಹಿಕ ಸಾಮರ್ಥ್ಯತೆ ಹಾಗೂ ದೈಹಿಕ ಸಹಿಷ್ಣುತೆ ಪರೀಕ್ಷೆ ನಡೆಯಲಿದೆ. ಪುರುಷ ಮತ್ತು ಮಹಿಳಾ ಅಭ್ಯರ್ಥಿಗಳಿಗೆ ಪ್ರತ್ಯೇಕ ಮಾನದಂಡಗಳಿದ್ದು ಅವುಗಳಿಗಾಗಿ ಆಸಕ್ತರು ಅಧಿಸೂಚನೆ ನೋಡಿಕೊಳ್ಳಬಹುದು.

ದೈಹಿಕ ಪರೀಕ್ಷೆಯಲ್ಲಿ ಪಾಸಾಗುವ ಅಭ್ಯರ್ಥಿಗಳಿಗೆ ಲಿಖಿತ ಪರೀಕ್ಷೆ ಇರುತ್ತದೆ. ಲಿಖಿತ ಪರೀಕ್ಷೆ ವಸ್ತುನಿಷ್ಠ ಮಾದರಿಯಲ್ಲಿ ಇರುತ್ತದೆ. 2 ಗಂಟೆ ಅವಧಿಯ 100 ಅಂಕಗಳ ಒಂದೇ ಪತ್ರಿಕೆ ಇದಾಗಿರುತ್ತದೆ.

ಇದರಲ್ಲಿ ಎರಡು ಭಾಗ ಇದ್ದು 40 ಅಂಕಗಳಿಗೆ ಗಣಿತ ವಿಷಯ ಆಧರಿಸಿದ 40 ಅಪ್ಟಿಟ್ಯೂಡ್ ಪ್ರಶ್ನೆಗಳಿರುತ್ತವೆ. ಎರಡನೇ ಭಾಗದಲ್ಲಿ ಸಾಮಾನ್ಯ ಜ್ಞಾನ, ಪ್ರಚಲಿತ ವಿಷಯಕ್ಕೆ ಸಂಬಂಧಿಸಿದಂತೆ 60 ಅಂಕಗಳಿಗೆ 60 ಪ್ರಶ್ನೆಗಳಿರುತ್ತವೆ.

ಹುದ್ದೆಗಳ ವಿಭಾಗವಾರು ವರ್ಗೀಕರಣ, ಮೀಸಲು ರೋಸ್ಟರ್‌ಗಾಗಿ ಮತ್ತು ಹೆಚ್ಚಿನ ಮಾಹಿತಿಗಾಗಿ ಅರಣ್ಯ ಇಲಾಖೆಯ aranya.gov.in ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಬಹುದು.

5 ವರ್ಷ ಸೇವೆ ಕಡ್ಡಾಯ

ಅರಣ್ಯ ಪಾಲಕ ಹುದ್ದೆಗಳಿಗೆ ಆಯ್ಕೆಯಾಗುವ ಅಭ್ಯರ್ಥಿಗಳಿಗೆ 9 ತಿಂಗಳು ಮೂಲ ತರಬೇತಿ ಇರುತ್ತದೆ. ತರಬೇತಿ ಅವಧಿಯೂ ಸೇರಿದಂತೆ 36 ತಿಂಗಳು ಪ್ರೊಬೇಷನರಿ ಅವಧಿ ಇರುತ್ತದೆ. ಅಲ್ಲದೇ ಆಯ್ಕೆಯಾಗುವ ಅಭ್ಯರ್ಥಿಗಳು ತಮ್ಮ ಹುದ್ದೆಗಳಲ್ಲಿ ಕನಿಷ್ಠ ಐದು ವರ್ಷ ಕೆಲಸ ಮಾಡಬೇಕು.

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : ಡಿಸೆಂಬರ್ 30, 2023

ನೋಟೀಫಿಕೇಷನ್ : ಇಲ್ಲಿ ಕ್ಲಿಕ್ ಮಾಡಿ

ಆನ್ ಲೈನ್ ಅರ್ಜಿ ಸಲ್ಲಿಸಲು : ಇಲ್ಲಿ ಕ್ಲಿಕ್ ಮಾಡಿ

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ