Thursday, September 19, 2024

ಪ್ರಾಯೋಗಿಕ ಆವೃತ್ತಿ

ಇಂಗ್ಲೀಷ್ ಜ್ಞಾನ ವೃದ್ದಿಗಾಗಿ ಶಬ್ಧಕೋಶ ಅವಶ್ಯಕ – ಸತೀಶ್

ಗ್ರಾಮೀಣ ವಿದ್ಯಾರ್ಥಿಗಳ ಇಂಗ್ಲೀಷ್ ಜ್ಞಾನ ವೃದ್ದಿಗಾಗಿ ಶಬ್ಧಕೋಶ ಅತ್ಯವಶ್ಯ ಎಂದು ಸಕ್ಕರೆನಾಡು ರೋಟರಿ ಸಂಸ್ಥೆ ಅಧ್ಯಕ್ಷ ಸತೀಶ್ ಹೇಳಿದರು.

ಮಂಡ್ಯ ತಾಲೂಕಿನ ಸಂತೆಕಸಲಗೆರೆ ಗ್ರಾಮದಲ್ಲಿರುವ ಸರ್ಕಾರಿ ಪ್ರೌಢಶಾಲೆಯಲ್ಲಿ ಎಂದು ಸಕ್ಕರೆನಾಡು ರೋಟರಿ ಸಂಸ್ಥೆ ಆಯೋಜಿಸಿದ್ದ ಶಾಲಾ ವಿದ್ಯಾರ್ಥಿಗಳಿಗೆ ಇಂಗ್ಲೀಷ್ ಶಬ್ಧಕೋಶ ವಿತರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ಪ್ರಸ್ತುತ ದಿನಗಳಲ್ಲಿ ಕನ್ನಡಮಾಧ್ಯಮ ವಿದ್ಯಾರ್ಥಿಗಳಿಗೆ ಇಂಗ್ಲೀಷ್ ವಿಷಯವು ಇದ್ದು, ಕೌಸಲಜ್ಞಾನ ಹೆಚ್ಚಳಕ್ಕೆ ಶಬ್ಧಕೋಶ ಸಹಕಾರಿಯಾಗುತ್ತದೆ, ಕಠಿಣ ಪದಗಳ ಅರ್ಥಗಳನ್ನು ಅರಿತುಕೊಳ್ಳಲು ನೆರವಾಗಲಿದೆ ಎಂದು ನುಡಿದರು.

ಸಕ್ಕರೆನಾಡು ರೋಟರಿ ಸಂಸ್ಥೆಯಿಂದ ಅನೇಕ ಸಮಾಜಮುಖಿ ಸೇವಾ ಸುಕಾರ್ಯಗಳನ್ನು ಮಾಡುತ್ತ ಬರುತ್ತಿದ್ದು, ಪರಿಸರ ಕಾಳಜಿ, ಬಡವರಿಗೆ ಆರೋಗ್ಯಸೇವೆ, ಪ್ರತಿಭಾವಂತರಿಗೆ ನೆರವು, ಅಗತ್ಯಯುಳ್ಳವರಿಗೆ ಪರಿಕರಗಳನ್ನು ನೀಡುತ್ತ ಬರುತ್ತಿದ್ದೇವೆ, ಇಂದು ಗ್ರಾಮೀಣ ವ್ಯಾಪ್ತಿಯ ಶೈಕ್ಷಣಿಕ ವಿದ್ಯಾರ್ಥಿಗಳತ್ತ ಮುಖಮಾಡಿದೇವೆ ಎಂದರು.

ಸಂತೆಕಲಸಗೆರೆ ಸರ್ಕಾರಿ ಪೌಢಶಾಲೆಯ ವಿದ್ಯಾರ್ಥಿಗಳು ಪ್ರತಿವರ್ಷ ಎಸ್.ಎಸ್.ಎಲ್.ಸಿ ಪರೀಕ್ಷೆಯ ಫಲಿತಾಂಶದಲ್ಲಿ ಶೇ.100ರಷ್ಟು ಫಲಿತಾಂಶ ದಾಖಲಿಸುತ್ತಾ ಬರುತ್ತಿದ್ದಾರೆ, ಈವರ್ಷವೂ ಉತ್ತಮ ಅಂಕಪಡೆದು ವಿದ್ಯಾರ್ಥಿಗಳ ಭವಿಷ್ಯ ಉಜ್ವಲವಾಗಿರಲಿ ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ಬೃಹತ್ ಗಾತ್ರದ ಇಂಗ್ಲೀಷ್ ಮತ್ತು ಕನ್ನಡ ಅರ್ಥ ಉಳ್ಳ ಶಬ್ಧಕೋಶಗಳನ್ನು ವಿದ್ಯಾರ್ಥಿಗಳಿಗೆ ಪದಾಧಿಕಾರಿಗಳು ವಿತರಿಸಿದರು.

ಕಾರ್ಯಕ್ರಮದಲ್ಲಿ ಸಕ್ಕರೆನಾಡು ರೋಟರಿ ಸಂಸ್ಥೆಯ ಕಾರ್ಯದರ್ಶಿ ನಂದೀಶ್, ಮಾಜಿ ಕಾರ್ಯದರ್ಶಿ ವಿನೋದ್, ಮಾಜಿ ಅಧ್ಯಕ್ಷರಾದ ಬಸವರಾಜು, ವಿನಯ್, ಮುಖ್ಯ ಶಿಕ್ಷಕ ನಾಸೀರ್ ಹುಸೇನ್ ಮತ್ತು ಶಿಕ್ಷಕ ವೃಂದ ಹಾಜರಿದ್ದರು.

ಮಂಡ್ಯ ತಾಲೂಕಿನ ಸಂತೆಕಸಲಗೆರೆ ಗ್ರಾಮದಲ್ಲಿರುವ ಸರ್ಕಾರಿ ಪ್ರೌಢಶಾಲೆಯಲ್ಲಿ ಎಂದು ಸಕ್ಕರೆನಾಡು ರೋಟರಿ ಸಂಸ್ಥೆ ಆಯೋಜಿಸಿದ್ದ ಶಾಲಾ ವಿದ್ಯಾರ್ಥಿಗಳಿಗೆ ಇಂಗ್ಲೀಷ್ ಶಬ್ಧಕೋಶ ವಿತರಣೆ ಕಾರ್ಯಕ್ರಮಕ್ಕೆ ಎಂದು ಸಕ್ಕರೆನಾಡು ರೋಟರಿ ಸಂಸ್ಥೆ ಅಧ್ಯಕ್ಷ ಸತೀಶ್ ಚಾಲನೆ ನೀಡಿದರು

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!