Thursday, September 19, 2024

ಪ್ರಾಯೋಗಿಕ ಆವೃತ್ತಿ

ಮಂಡ್ಯ| ಹವಾಮಾನ ವೈಪರಿತ್ಯ- ಜಾಗತಿಕ ತಾಪಮಾನ ಕಾರ್ಯಾಗಾರ

ಮಂಡ್ಯ ನಗರದ ಪಿಇಎಸ್ ಎಂಜಿನಿಯರಿಂಗ್ ಕಾಲೇಜಿನ ಕೆ.ವಿ. ಶಂಕರಗೌಡ ವಿವಿದೋದ್ದೇಶ ಸಭಾಭವನದಲ್ಲಿ ವಿಕಸನ ಗ್ರಾಮೀಣ ಮತ್ತು ನಗರಾಭಿವೃದ್ಧಿ ಸಂಸ್ಥೆ, ಮಂಡ್ಯ ಹಾಗೂ ವಿಶ್ವ ಯುವಕ ಕೇಂದ್ರ, ನವದೆಹಲಿ ಇವರ ಸಂಯುಕ್ತ ಆಶ್ರಯದಲ್ಲಿ ಹವಾಮಾನ ವೈಪರಿತ್ಯ ಮತ್ತು ಜಾಗತಿಕ ತಾಪಮಾನ ಕುರಿತ ಕಾರ್ಯಾಗಾರವನ್ನು ಇಂಜಿನಿಯರಿಂಗ್ ಕಾಲೇಜಿನ ಅಕಾಡೆಮಿ ಡೀನ್ ಡಾ.ಬಿ.ದಿನೇಶ್ ಪ್ರಭು ಉದ್ಘಾಟಿಸಿದರು.

ನಂತರ ಮಾತನಾಡಿದ ಅವರು ಹವಾಮಾನ ವೈಪರೀತ್ಯ ಮತ್ತು ಜಾಗತಿಕ ಸಮಸ್ಯೆಗಳಿಂದಾಗಿ ಜೀವ ವೈವಿಧ್ಯತೆ ಸಂಕಷ್ಟಕ್ಕೆ ಒಳಗಾಗಿದ್ದು ಮುಂದಿನ ದಿನಗಳಲ್ಲಿ ನಾವು ನಮ್ಮ ರಾಜ್ಯವನ್ನು ಜಾಗತಿಕ ಸಮಸ್ಯೆಗಳಿಂದ ಹೇಗೆ ಕಾಪಾಡಿಕೊಳ್ಳಬೇಕು ಎಂಬುದರ ಬಗ್ಗೆ ಇಂದಿನ ಯುವ ಪೀಳಿಗೆಗೆ ಮನವರಿಕೆ ಮಾಡಬೇಕಾಗಿರುವುದು ಅತ್ಯಗತ್ಯ ಎಂದು ಅಭಿಪ್ರಾಯಪಟ್ಟರು.

ವಿಕಸನ ಸಂಸ್ಥೆಯ ನಿರ್ದೇಶಕರಾದ ಮಹೇಶ್ ಚಂದ್ರಗುರು ಮಾತನಾಡಿ, ಅತಿ ಹೆಚ್ಚು ರಾಸಾಯನಿಕ ಗೊಬ್ಬರಗಳ ಬಳಕೆಯಿಂದ ಕೃಷಿ ಮೇಲೆ ದೀರ್ಘಕಾಲದ ಪ್ರತಿಕೂಲ ಪರಿಣಾಮಗಳು ಉಂಟಾಗುತ್ತವೆ. ಇದರಿಂದ ನಾವು ದಿನನಿತ್ಯ ಉಪಯೋಗಿಸುವ ಆಹಾರದಲ್ಲಿ ನಮ್ಮ ಶರೀರಕ್ಕೆ ಅಡಚಣೆ ಉಂಟಾಗುತ್ತದೆ. ಇದರ ಜೊತೆಗೆ ಸಸಿಯನ್ನು ನೆಡಬೇಕು. ಇದರಿಂದ ಪರಿಸರದ ಅಭಿವೃದ್ಧಿ ಆಗುತ್ತದೆ ಎಂದು ನುಡಿದರು.

ವೇದಿಕೆಯಲ್ಲಿ ಕಾರ್ಯಕ್ರಮದ ಸಂಯೋಜನಾಧಿಕಾರಿ ಮಂಜುನಾಥ್ ಬೆಂಗಳೂರಿನ, ಡಾ. ಶಂಕರ್ ಪ್ರಸಾದ್, ಇನ್ನಿತರರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!