ಮಂಡ್ಯ ತಾಲ್ಲೂಕಿನ ಬೇವಿನಹಳ್ಳಿ ಹಾಗೂ ಇಂಡುವಾಳು ಗ್ರಾಮ ಪಂಚಾಯಿತಿಗಳಿಗೆ ಜಿ.ಪಂ.ಸಿಇಓ ದಿವ್ಯಾಪ್ರಭು ರವರು ಭೇಟಿ ನೀಡಿ, ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ ಕಾಮಗಾರಿಗಳ ಪರಿಶೀಲನೆ ನಡೆಸಿದರು.
ಮಹಾತ್ಮ ಗಾಂಧಿ ರಾಷ್ಟೀಯ ಗ್ರಾಮೀಣ ಯೋಜನೆಯಡಿ ಪ್ರತಿಯೊಬ್ಬರು 100 ದಿನಗಳ ಕಾಲ ಕೆಲಸವನ್ನು ಪಡೆದುಕೊಳ್ಳಬೇಕು. ಯೋಜನೆಯಡಿ ಕಾಯಕ ಸಂಘದ ಮೂಲಕ ಕೂಲಿಕಾರರು, ಸಮಗ್ರ ಕೆರೆ- ಕಟ್ಟೆ ಅಭಿವೃದ್ಧಿ, ಬದು,ಕಾಲುವೆ ಸುಧಾರಣೆಯಂತಹ ಕಾಮಗಾರಿಗಳಲ್ಲಿ ಕೆಲಸವನ್ನು ಪಡೆದುಕೊಳ್ಳಬೇಕು ಎಂದು ತಿಳಿಸಿದರು.
ಕೂಲಿಕಾರರೊಂದಿಗೆ ಮಾತನಾಡಿ, ಕೂಲಿಕಾರರು ಕಾಲಕಾಲಕ್ಕೆ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಬೇಕು. ಪ್ರತಿಯೊಬ್ಬರೂ ಆಯುಷ್ಮಾನ್ ಆರೋಗ್ಯ ಕಾರ್ಡ್ ಹಾಗೂ ಲೇಬರ್ ಕಾರ್ಡ ಪಡೆದುಕೊಂಡು ಅದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು.
ನರೇಗಾ ಯೋಜನೆಯಡಿ ದುಡಿಯೋಣ ಬಾ ಅಭಿಯಾನದಡಿ, ಬೇಸಿಗೆ ಅವಧಿಯಲ್ಲಿ ನಿರಂತರವಾಗಿ ದುಡಿಯುವ ಕೈಗಳಿಗೆ ಕೆಲಸ ನೀಡಿ, 319 ರೂಗಳು ಕೂಲಿ ಹಣವನ್ನು ನೀಡಲಾಗುತ್ತಿದೆ ಎಂದರು.
ನಂತರ ಅವರು ಬೇವಿನಹಳ್ಳಿ ಗ್ರಾಮದ ಕಾಲುವೆ ಅಭಿವೃದ್ಧಿ ಕಾಮಗಾರಿ, ಇಂಡುವಾಳು ಗ್ರಾಮದ ಕೆರೆ ಅಭಿವೃದ್ಧಿ ಕಾಮಗಾರಿಗಳ ಸ್ಥಳಕ್ಕೆ ಭೇಟಿ ನೀಡಿ, ಕಾಮಗಾರಿ ಕಡತಗಳನ್ನು ಪರಿಶೀಲನೆ ನಡೆಸಿದರು.
ಇದೇ ವೇಳೆ ಕಾರ್ಯನಿರ್ವಾಹಕಾಧಿಕಾರಿಗಳಾದ ಎ.ಬಿ ವೇಣುರವರು, ಪಿಡಿಓಗಳಾದ ವಿಶಾಲ್ ಮೂರ್ತಿ, ಸಿದ್ದರಾಜು, ಕಾರ್ಯದರ್ಶಿಗಳಾದ ಆನಂದ್, ದಯಾನಂದ್, ಜಿಲ್ಲಾ ಪಂಚಾಯತ್ ಎಡಿಪಿಸಿ ಮುನಿರಾಜು, ಡಿಎಂಐಎಸ್ ರಶ್ಮಿ, ಟಿಸಿ ರವಿಕಿಮಾರ್, ಐಇಸಿ ಸಂಯೋಜಕಿ ಆಶಾ.ಡಿ, ಟಿಎಂಐಎಸ್ ಚೇತನ್, ಟಿಎಇಗಳಾದ ಮನು, ಗಿರೀಶ್ ಹಾಗೂ ಗ್ರಾಮ ಪಂಚಾಯಿತಿ ಸಿಬ್ಬಂದಿಗಳು ಹಾಜರಿದ್ದರು.