Friday, September 20, 2024

ಪ್ರಾಯೋಗಿಕ ಆವೃತ್ತಿ

ಮದ್ಧೂರು| ಅಹಿಂದ ವೇದಿಕೆಯಿಂದ ಕೋರೇಗಾಂವ್ ವಿಜಯೋತ್ಸವ

ವರದಿ: ನ.ಲಿ.ಕೃಷ್ಣ

ಮದ್ದೂರು ತಾಲೂಕು ಅಹಿಂದ ವೇದಿಕೆಯ ವತಿಯಿಂದ ಹೊಸ ವರ್ಷದ ಸೋಮವಾರ ಸಂಜೆ ಕೋರೆಗಾಂವ್ ವಿಜಯೋತ್ಸವ ಆಚರಣೆಯನ್ನು ಆಚರಣೆ ಮಾಡಲಾಯಿತು. ಡಾ.ಬಿ ಆರ್ ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ, ಕೋರೇಗಾಂವ್ ವಿಜಯೋತ್ಸವ ಸ್ತೂಪಕ್ಕೆ ಪುಪ್ಷರ್ಜನೆ ಮಾಡಿ, ಮೇಣದ ದೀಪ ಹಚ್ಚುವುದರ ಮೂಲಕ ನಮನ ಸಲ್ಲಿಸಲಾಯಿತು.

ತಹಶೀಲ್ದಾರ್ ಸೋಮಶೇಖರ್ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಭೀಮ್ ಕೋರೆಗಾಂವ್ ಯುದ್ದದಲ್ಲಿ ಪೇಶ್ವೆಗಳ ವಿರುದ್ಧ ಹೋರಾಡಿ ಜಯಗಳಿಸಿದ ದಿನವೇ ಭೀಮಾ ಕೋರೇಗಾಂವ್ ಯುದ್ದ. ಈ ದಿನದಂದು ಡಾ.ಬಿ ಆರ್ ಅಂಬೇಡ್ಕರ್ ಆ ಸ್ಥಳಕ್ಕೆ ಬಂದು ಹೋರಾಟದಲ್ಲಿ ಮಾಡಿದ ಮಹರ್ ಸೈನಿಕರಿಗೆ ನಮನ ಸಲ್ಲಿಸುತ್ತಿದ್ದರು. ಅಂಬೇಡ್ಕರ್ ಅವರ ಅನುಯಾಯಿಗಳು ಅವರ ತತ್ವ ಸಿದ್ಧಾಂತಗಳನ್ನು ಅಳವಡಿಸಿಕೊಳ್ಳಬೇಕು ಎಂದು ತಿಳಿಸಿದರು.

ಶಿಕ್ಷಕ ಬಿ.ವಿ.ನಾರಾಯಣ್ ಮಾತನಾಡಿ, ಅಸ್ಪೃಶ್ಯತೆ ಆಚರಣೆ ಮಾಡುತ್ತಿದ್ದ ಪೇಶ್ವೆಗಳ ದುರಾಡಳಿತದ ವಿರುದ್ಧ ಮಹರ್ ಜನಾಂಗದ ನಾಯಕ ಸಿದ್ದನಾಕನ ನೇತೃತ್ವದಲ್ಲಿ 500ಜನ ಸೈನಿಕರೂಡಗೂಡಿ ಪೇಶ್ವೆಗಳ 28,000 ಸಾವಿರ ಸೈನಿಕರ ವಿರುದ್ಧ ಹೋರಾಟ ನಡೆಸುವ ಮೂಲಕ ಕೋರೆಗಾಂವ್ ಯುದ್ದದಲ್ಲಿ ಜಯ ಸಾಧಿಸಿದರು.

ಈ ಸಂದರ್ಭದಲ್ಲಿ ಬ್ರಿಟಿಷ್ ಸರ್ಕಾರ ಮಹರ್ ಸೈನಿಕರ ನಾಯಕರನ್ನು ಕೆರೆದು ನಿಮಗೆ ಏನು ಬೇಕು ಎಂದು ಕೇಳಿದಾಗ ಅವರು, ನಮ್ಮ ಜನ ಸಾವಿರಾರು ವರ್ಷಗಳಿಂದ ಶಿಕ್ಷಣ ಇಲ್ಲದೆ ಉಳಿದಿದ್ದಾರೆ, ಅವರಿಗೆ ಶಿಕ್ಷಣ ಕಲಿಯಲು ಅವಕಾಶ ಕಲ್ಪಿಸಿ ಕೊಡಿ ಎಂದು ಕೇಳಿದರು ಎಂದು ಸ್ಮರಿಸಿದರು.

ಕಾರ್ಯಕ್ರಮದಲ್ಲಿ ಮದ್ದೂರು ತಾಲೂಕು ಅಹಿಂದ ವೇದಿಕೆಯ ಅಧ್ಯಕ್ಷ ಅತಗೂರು ನಿಂಗಯ್ಯ ,
ಉಪಾಧ್ಯಕ್ಷ ಕೆ ಟಿ ಶಿವಕುಮಾರ್, ಇಮ್ತಿಯಾಜ್ ಉಲ್ಲಾ ಖಾನ್, ದಾಕ್ಷಾಯಿಣಿ ವೆಂಕಟೇಶ್,
ಪ್ರಧಾನ ಕಾರ್ಯದರ್ಶಿ ಶ್ರೀ ನಿವಾಸ ಶೆಟ್ಟಿ, ಕಾರ್ಯಾಧ್ಯಕ್ಷ ಪಿ. ಶಶಿ ಕುಮಾರ್, ಖಜಾಂಚಿ ಟಿ ರಮೇಶ್, ಮಾರ್ಗದರ್ಶಕ ಎಂ ಮಹಾದೇವಯ್ಯ, ಮುಖ್ಯ ಶಿಕ್ಷಕರಾದ ಮಹಾದೇವ ಸ್ವಾಮಿ, ಸುಶೀಲಮ್ಮ
ಮುಖಂಡರಾದ ನಾಗಲಿಂಗ, ವೀರಭದ್ರ, ಹೆಚ್,ಸಿ, ಶಿವಕುಮಾರ್, ನಗರಕೆರೆ ಜಯರಾಮಣ್ಣ, ಬಿ.ಪಿ.ಗಿರೀಶ್, ಶಿಕ್ಷಕ ಮಹೇಶ್, ಮರಳಿಗ ಶಿವರಾಜ್, ಶಂಕರ್, ಪ್ರಕಾಶ್, ಶ್ರೀನಿವಾಸ್, ಪೇಂಟ್ ಶಿವಕುಮಾರ್ ಹಾಗೂ ಮರಿದೇವರು ಉಪಸ್ಥಿತರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!