Friday, September 20, 2024

ಪ್ರಾಯೋಗಿಕ ಆವೃತ್ತಿ

ಮಂಡ್ಯ ಲೋಕಸಭೆ| ಟಿಕೆಟ್ ಸಿಗಲಿ…. ಸಿಗದಿರಲಿ…. ಸುಮಲತಾ ಸ್ಪರ್ಧೆ ಖಚಿತ: ಶಶಿಕುಮಾರ್

ಪ್ರಸ್ತುತ ರಾಜಕೀಯ ಸನ್ನಿವೇಶದಲ್ಲಿ ರಾಜ್ಯ ರಾಜಕಾರಣದಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿ ಮಾಡಿಕೊಂಡಿದ್ದು, ಸಂಸದೆ ಸುಮಲತಾ ಅವರಿಗೆ ಮಂಡ್ಯ ಲೋಕಸಭೆಯ ಮೈತ್ರಿಯ ಅಭ್ಯರ್ಥಿಯಾಗಿ ಟಿಕೆಟ್ ಸಿಗುವ ವಿಶ್ವಾಸವಿದೆ, ಒಂದು ವೇಳೆ ಟಿಕೆಟ್ ಸಿಗದಿದ್ದರೆ ಪಕ್ಷೇತರವಾಗಿಯಾದರೂ ಸ್ಪರ್ಧೆ ಮಾಡುವುದು ಖಚಿತ ಎಂದು ಸುಮಲತಾ ಅವರ ಆಪ್ತ ಹನಕೆರೆ ಶಶಿಕುಮಾರ್ ಸ್ಪಷ್ಟಪಡಿಸಿದರು.

ಮಂಡ್ಯದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ನಾವು ಬಿಜೆಪಿ ಅಭ್ಯರ್ಥಿಗಳಿಗೆ ಬಾಹ್ಯ ಬೆಂಬಲ ನೀಡಿದ್ದೇವು, ಆದ್ದರಿಂದ ಈ ಲೋಕಸಭಾ ಚುನಾವಣೆಯಲ್ಲಿ ಸುಮಲತಾ ಅವರಿಗೆ ಬಿಜೆಪಿ-ಜೆಡಿಎಸ್ ಮೈತ್ರಿಯ ಬಿ.ಫಾರಂ ಸಿಗುತ್ತದೆ ಎಂಬ ವಿಶ್ವಾಸವಿದೆ, ಒಂದು ವೇಳೆ ಮೈತ್ರಿಯ ಬಿ.ಫಾರಂ ಸಿಗದಿದ್ದರೂ ಅವರು ಪಕ್ಷೇತರವಾಗಿ ಸ್ಪರ್ಧಿಸಲಿದ್ದಾರೆ. ಇದರಲ್ಲಿ ಯಾವುದೇ ಅನುಮಾನ ಬೇಡವೆಂದು ಸ್ಪಷ್ಟಪಡಿಸಿದರು.

ಒಂದು ವೇಳೆ ಕಾಂಗ್ರೆಸ್ ಪಕ್ಷದಿಂದ ಟಿಕೆಟ್ ಸಿಕ್ಕರೆ ಸುಮಲತಾ ಅವರು ಸ್ಪರ್ಧಿಸುವರೇ ಎಂಬ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಸುಮಲತಾ ಅವರು ಇದುವರೆಗೆ ಯಾವುದೇ ರಾಜಕೀಯ ಪಕ್ಷದಲ್ಲಿ ಗುರುತಿಸಿಕೊಂಡಿಲ್ಲ, ಕೇವಲ ಬಾಹ್ಯ ಬೆಂಬಲವನ್ನಷ್ಟೆ ನೀಡಿದ್ದಾರೆ. ಅಂತಹ ಬೆಳವಣಿಗೆ ನಡೆದರೆ ಕಾಂಗ್ರೆಸ್ ನಿಂದ ಸ್ಪರ್ಧಿಸುವುದನ್ನು ತಳ್ಳಿ ಹಾಕುವಂತಿಲ್ಲ ಎಂದು ತಿಳಿಸಿದರು.

ಸುಮಲತಾ ಅವರು ಕಳೆದ ನಾಲ್ಕೂವರೆ  ವರ್ಷಗಳಿಂದ ಮಂಡ್ಯ ಜಿಲ್ಲೆಯ ಜ್ವಲಂತ ಸಮಸ್ಯೆಗಳಿಗೆ ಧ್ವನಿಯಾಗಿ ಜನಪರ ಕಾರ್ಯಕ್ರಮಗಳನ್ನು ರಾಜ್ಯ ಹಾಗೂ ಕೇಂದ್ರ ಸಹಕಾದೊಂದಿಗೆ ಹಲವು ಅಭಿವೃದ್ಧಿ ಕೆಲಸಗಳನ್ನು ಮಾಡಿಕೊಂಡು ಬಂದಿದ್ದಾರೆ. ಅವರ ಅಧ್ಯಕ್ಷತೆಯಲ್ಲಿ ನಡೆಯುವ ದಿಶಾ ಸಭೆಯನ್ನು ಕಾಲಕಾಲಕ್ಕೆ ನಡೆಸಿಕೊಂಡು ರಾಜ್ಯದ ಸಂಸದಲ್ಲಿಯೇ ಮೊದಲಿಗರಾಗಿರುವ ಹೆಗ್ಗಳಿಕೆ ಅವರದಾಗಿರುತ್ತದೆ. ಸಂಸದರ ನಿಧಿಯನ್ನು ಸಮರ್ಪಕವಾಗಿ ಬಳಕೆ ಮಾಡಿರುವ ಸಂಸದರಲ್ಲಿ ಸುಮಲತಾ  ಎರಡನೆಯವರಾಗಿದ್ದಾರೆ ಎಂದರು.

2019ರ ಚುನಾವಣೆಯಲ್ಲಿ ರೈತರಿಗೆ ಮಾತುಕೊಟ್ಟಂತೆ ಮಂಡ್ಯ ಜಿಲ್ಲೆಯ ಪಾಂಡವಪುರ ಸಕ್ಕರೆ ಕಾರ್ಖಾನೆ ಹಾಗೂ ಮೈಷುಗರ್ ಸಕ್ಕರೆ ಕಂಪನಿಯು ಪ್ರಾರಂಭವಾಗಲೂ ಸುಮಲತಾ ಅವರು ಹಗಲಿರುಳು ಶ್ರಮಿಸಿದ್ದಾರೆ. ಮಂಡ್ಯ ಜಿಲ್ಲೆಯಲ್ಲಿ ನಡೆಯುತ್ತಿರುವ ಅಕ್ರಮ ಗಣಿಗಾರಿಕೆ ತಡೆದು ಕೆ.ಆರ್.ಎಸ್.ಜಲಾಶಯದ ಉಳಿವಿಗಾಗಿ ನಡೆಸಿದ ಹೋರಾಟದ ಫಲವಾಗಿ ಕರ್ನಾಟಕ ಕೈ ಕೋರ್ಟ್ ಕೆ.ಆರ್.ಎಸ್ ಸುತ್ತಮುತ್ತ 20 ಕಿ.ಮೀ ವ್ಯಾಪ್ತಿಯಲ್ಲಿ ಗಣಿಗಾರಿಕೆ ನಿಷೇಧಿಸಿದ ಆದೇಶಿಸಿರುವುದು, ಅವರ ಹೋರಾಟಕ್ಕೆ ಸಂದ ಜಯವಾಗಿದೆ ಎಂದರು.

ಸಚ್ಚಿದಾನಂದ ಭೇಟಿ ವೈಯಕ್ತಿಕ

ಸಂಸದೆ ಸುಮಲತಾ ಅವರ ಆಪ್ತ ಬೆಂಬಲಿಗರಾಗಿರುವ ಇಂಡುವಾಳು ಸಚ್ಚಿದಾನಂದ ಅವರು ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಉತ್ತಮ ಮತ ಪಡೆದು, ಪರಾಭವಗೊಂಡಿದ್ದಾರೆ. ಈ ನಡುವೆ ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿರುವುದು ರಾಜಕೀಯ ವಿಚಾರವಾಗುವುದಿಲ್ಲ, ಅದು ಅವರ ವೈಯಕ್ತಿಕ ಭೇಟಿ ಸುಮಲತಾ ಸ್ಪರ್ಧೆಗೆ ಸಚ್ಚಿದಾನಂದ ಬೆಂಬಲ ನಿರಂತರವಾಗಿರಲಿದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಸ್ವಾಭಿಮಾನಿ ಪಡೆಯಲ್ಲಿ ಬಿರುಕಿಲ್ಲ

ಸಂಸದೆ ಸುಮಲತಾ ನೇತೃತ್ವದ ಸ್ವಾಭಿಮಾನಿ ಪಡೆಯಲ್ಲಿ ಯಾವುದೇ ಬಿರುಕಿಲ್ಲ, ಬೇಲೂರು ಸೋಮಶೇಖರ್ ಹಾಗೂ ತಮ್ಮ ನಡುವೆ ಸಾಮರಸ್ಯವಿದೆ, ಅನ್ಯ ಕಾರ್ಯ ನಿಮ್ಮಿತ್ತ ಪತ್ರಿಕಾಗೋಷ್ಠಿಗೆ ಬಂದಿಲ್ಲ, ಅದನ್ನು ದೊಡ್ಡದು ಮಾಡುವ ಅವಶ್ಯಕತೆ ಇಲ್ಲ ಎಂದರು.

ಗೋಷ್ಠಿಯಲ್ಲಿ ಮುಖಂಡರಾದ ಹೆಚ್.ಬಿ.ಅರವಿಂದ ಕುಮಾರ್, ಹಾಗಲಹಳ್ಳಿ ಬಸವರಾಜು, ಮಟ್ಟನಹಳ್ಳಿ ಮಹೇಂದ್ರ ಹಾಗೂ ಕೋಣಸಾಲೆ ಜಯರಾಮು ಉಪಸ್ಥಿತರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!