Friday, September 20, 2024

ಪ್ರಾಯೋಗಿಕ ಆವೃತ್ತಿ

ಸ್ವಾಮಿ ವಿವೇಕಾನಂದರ ಆಧ್ಯಾತ್ಮಿಕ ಚಿಂತನೆ ವಿಶ್ವಕ್ಕೆ ಮಾರ್ಗದರ್ಶಕ: ಕೆ.ಟಿ.ಹನುಮಂತು

ಸ್ವಾಮಿ ವಿವೇಕಾನಂದ ವಿಚಾರ, ಆಧ್ಯಾತ್ಮಿಕ ಚಿಂತನೆಗಳು ವಿಶ್ವಕ್ಕೆ ಮಾರ್ಗದರ್ಶನವಾಗಿವೆ ಎಂದು ಕೃಷಿಕ ಲಯನ್ಸ್ ಸಂಸ್ಥೆ ಆಡಳಿತಾಧಿಕಾರಿ ಕೆ.ಟಿ.ಹನುಮಂತು ಹೇಳಿದರು.

ಮಂಡ್ಯನಗರದ ಜಿಲ್ಲಾಸ್ಪತ್ರೆಯ ಹೆರಿಗೆ ವಾರ್ಡ್ ಬಳಿಯ ಮಮತೆಯ ಮಡಿಲು ನಿತ್ಯದಾಸೋಹ ಕೇಂದ್ರದಲ್ಲಿ ಕೃಷಿಕ ಲಯನ್ಸ್ ಸಂಸ್ಥೆ ಮತ್ತು ಭೂಮಿ ಬೆಳಗು ಸಾಂಸ್ಕೃತಿಕ ಸಂಘ ಆಯೋಜಿಸಿದ್ದ ಸ್ವಾಮಿ ವಿವೇಕಾನಂದರ 161ನೇ ವರ್ಷ ಜಯಂತ್ಯೋತ್ಸವ ಹಾಗೂ ವಿವೇಕಾನಂದ ಸದ್ಭಾವನ ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಯುವಕರನ್ನು ದೇಶದ ಆಸ್ತಿ ಎಂದವರು ಇವರೇ, ಯುವಕರು ದೇಶ ಕಟ್ಟುವ ಕೆಲಸ ಮಾಡಬೇಕು ಎಂಬುದು ನಮ್ಮ ಹಿಂದಿನ ತಲೆಮಾರಿನವರ ಆಶಯ. ಒಟ್ಟಾರೆ ಯುವಜನರಿಂದ ಪರಿವರ್ತನೆ ಸಾಧ್ಯ. ದೇಶದ ನಾಳಿನ ಸುಭದ್ರ ಭವಿಷ್ಯಕ್ಕೆ ಹಿಂದಿನ ಯುವಜನರೇ ಬುನಾದಿ. ಅಂದ ಹಾಗೆ ಇಂದು ರಾಷ್ಟ್ರೀಯ ಯುವದಿನವಾದರೂ ವಿಶ್ವಸಂಸ್ಥೆಯು 1985ರಲ್ಲಿ ಅಂತರಾಷ್ಟ್ರೀಯ ಯುವದಿನ ಎಂದು ಘೋಷಿಸಿದೆ ಎಂದು ಸ್ಮರಿಸಿದರು.

ಇದೇ ಸಂದರ್ಭದಲ್ಲಿ ಜಿಲ್ಲಾಸ್ಪತ್ರೆಯ ನೌಕರ ಮಲ್ಲೇಶ್ ಅವರಿಗೆ ವಿವೇಕಾನಂದ ಸದ್ಭಾವನ ಪ್ರಶಸ್ತಿ ಪ್ರದಾನ ಮಾಡಲಾಯಿತು. ಬಳಿಕ ಗರ್ಭಿಣಿ, ಬಾಣಂತಿ ಸೇರಿದಂತೆ ಅಗತ್ಯಯುಳ್ಳವರಿಗೆ ಪೌಷ್ಠಿಕಾಹಾರ ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಜಿಲ್ಲಾಸ್ಪತ್ರೆಯ ನಿವೃತ್ತ ನೌಕರ ಉಮೇಶ್, ಭೂಮಿ ಬೆಳಗು ಸಾಂಸ್ಕೃತಿಕ ಸಂಘದ ಅಧ್ಯಕ್ಷ ಯೋಗೇಶ್‌ ಮಂಗಲ ಮತ್ತಿತರರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!