Thursday, September 19, 2024

ಪ್ರಾಯೋಗಿಕ ಆವೃತ್ತಿ

ಸಂವಿಧಾನದಿಂದ ಪ್ರತಿಯೊಬ್ಬರಿಗೂ ಸಮಾನತೆ ಲಭಿಸಿದೆ: ಶಾಸಕ ಉದಯ್

ವರದಿ: ಪ್ರಭು ವಿ. ಎಸ್

ಭಾರತ ಸಂವಿಧಾನವು ಪ್ರತಿಯೊಬ್ಬ ಭಾರತೀಯನನ್ನು ಸಶಕ್ತಗೊಳಿಸಿ ಸರ್ವರಿಗೂ ಸಮಾನತೆಯನ್ನು ಒದಗಿಸಿದೆ ಎಂದು ಶಾಸಕ ಎಂ. ಉದಯ್ ಅವರು ಹೇಳಿದರು.

ಮದ್ದೂರು ಪಟ್ಟಣದ ಶಿವಪುರದ ಧ್ವಜ ಸತ್ಯಾಗ್ರಹಸೌಧದಲ್ಲಿ ಹೆಚ್.ಕೆ.ವೀರಣ್ಣಗೌಡ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ಘಟಕ ಆಯೋಜಿಸಿದ್ದ 75ನೇ ವರ್ಷದ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ಪ್ರತಿಯೊಬ್ಬರಿಗೂ ಹಕ್ಕು ಮತ್ತು ಕ ಕರ್ತವ್ಯಗಳನ್ನು ನೀಡಿರುವ ಸಂವಿಧಾನವು ನಮಗೆ ಬಹುದೊಡ್ಡ ಶಕ್ತಿಯಾಗಿದ್ದು ಸಮಾಜದ ಎಲ್ಲರನ್ನೂ ರಕ್ಷಿಸುತ್ತಿದೆ ಎಂದು ಅವರು ಹೇಳಿದರು.

ಭಾರತದ ಗಣರಾಜ್ಯೋತ್ಸವವು ನಮ್ಮ ಸ್ವಾತಂತ್ರ್ಯ ಹೋರಾಟಗಾರರ ಮತ್ತು ಅವರ ತ್ಯಾಗಕ್ಕೆ ಸಾಕ್ಷಿಯಾಗಿದ್ದು ಏಕತೆ ಮತ್ತು ಶಾಂತಿಯಿಂದ ಬದುಕಲು ಕಲಿಸುತ್ತದೆ ಎಂದ ಅವರು ಸಂವಿಧಾನದ ಆಸೆಯ ದಂತೆ ಪ್ರತಿಯೊಬ್ಬ ಯುವಕರು ಕರ್ತವ್ಯ ನಿರ್ವಹಿಸಿ ಭಾರತದ ಸಾರ್ವಭೌಮತೆಯನ್ನು ಕಾಪಾಡಿಕೊಂಡು ಹೋಗಬೇಕೆಂದು ಅವರು ಕಿವಿಮಾತು ಹೇಳಿದರು.

ಅಭಿವೃದ್ಧಿಗೆ ಕ್ರಮ

ಶಿವಪುರದ ದ್ವಜ ಸತ್ಯಾಗ್ರಹದ ಅಭಿವೃದ್ಧಿಗೆ ಈಗಾಗಲೇ ಸಮಿತಿಯನ್ನ ರಚಿಸಿದ್ದು ಸ್ವಲ್ಪ ಹಣವನ್ನು ಇಡಲಾಗಿದೆ ಎಂದ ಅವರು ದ್ವಜ ಸತ್ಯಾಗ್ರಹಸೌಧವು ತಾಲೂಕಿಗೆ ಹೆಮ್ಮೆಯ ಸೌಧವಾಗಿದ್ದು ಮುಂದಿನ ದಿನಗಳಲ್ಲಿ ಪ್ರವಾಸಿ ತಾಣವಾಗಿ ಅಭಿವೃದ್ಧಿ ಪಡಿಸಿ ಸ್ವಾತಂತ್ರ್ಯ ಹೋರಾಟಗಾರರ ಮಾಹಿತಿಯನ್ನು ವಿದ್ಯಾರ್ಥಿಗಳು ತಿಳಿದು ಕೊಳ್ಳುವಂತಹ ಕೇಂದ್ರವಾಗಿ ರೂಪಿಸಲಾಗುವುದು ಎಂದು ಅವರು ಹೇಳಿದರು.

ಮುಖ್ಯಮಂತ್ರಿಗಳನ್ನ ಭೇಟಿ ಮಾಡಿ ಸವದ ಅಭಿವೃದ್ಧಿಗೆ ಹಣ ಕೇಳುವುದರ ಜೊತೆಗೆ ಅದನ್ನ ಜಿಲ್ಲೆಯ ಪ್ರತಿಷ್ಠಿತ ಪ್ರವಾಸಿ ತಾಣವಾಗಿ ಅಭಿವೃದ್ಧಿಪಡಿಸಿ ಪ್ರವಾಸಿಗರನ್ನು ಆಕರ್ಷಿಸಲಾಗುವುದು ಎಂದರು

ಈ ವೇಳೆ ಹಿರಿಯ ಸ್ವಾತಂತ್ರ ಹೋರಾಟಗಾರ ಕೆ.ಟಿ .ಚಂದು, ತಹಸಿಲ್ದಾರ್ ಕೆ.ಎಸ್. ಸೋಮಶೇಖರ್ ಎಂ .ಎಚ್. ಚನ್ನೇಗೌಡ ವಿದ್ಯಾ ಸಂಸ್ಥೆಯ ಅಧ್ಯಕ್ಷ ಎಂ.ಸ್ವರೂಪ್ ಚಂದ್, ಕಾರ್ಯದರ್ಶಿ ಸಿ .ಅಪೂರ್ವ ಚಂದ್ರು , ಸಂಸ್ಥೆಯ ನಿರ್ದೇಶಕರುಗಳಾದ ಮಲ್ಲಿಕಾರ್ಜುನ್ ಎಮ್.ಎ. ರಾಮಲಿಂಗಯ್ಯ ಇನ್ನರ್ ವೀಲ್ ಸಂಸ್ಥೆಯ ಅಧ್ಯಕ್ಷ ಕಲಾವತಿ, ನಾಡಪ್ರಭು ಕೆಂಪೇಗೌಡ ಒಕ್ಕಲಿಗರ ಸಂಘದ ಅಧ್ಯಕ್ಷ ಡಿ.ಪಿ .ಸ್ವಾಮಿ, ಚುಂಚಶ್ರೀ ಒಕ್ಕಲಿಗರ ವೇದಿಕೆ ಅಧ್ಯಕ್ಷ ಬಿ ಕೃಷ್ಣಪ್ಪ ಪ್ರಾಂಶುಪಾಲರುಗಳಾದ ಜಿ.ಎಸ್ .ಶಂಕರೇಗೌಡ , ಯು. ಎಸ್ .ಶಿವಕುಮಾರ್, ಉಪ ಪ್ರಾಂಶು ಪಾಲರಾದ ಪ್ರಕಾಶ್, ನಂದಿನಿ ಮುಖ್ಯ ಶಿಕ್ಷಕರಾದ ಎನ್ .ಕೃಷ್ಣ ಎಂ.ಟಿ,. ಚಂದ್ರಶೇಖರ್ ಜಿ, ಅನಿತಾ ಕೆ.ಎಸ್.ವರದರಾಜು, ಆಡಳಿತ ಅಧಿಕಾರಿ ಯು. ಎಸ್. ರವಿ, ರಾಷ್ಟ್ರೀಯ ಸೇವಾ ಯೋಜನೆ ಯ ಅಧಿಕಾರಿಗಳಾದ ಎಚ್.ಎಸ್. ಪಂಚಲಿಂಗೇಗೌಡ , ಎ.ವಿ ಪ್ರದೀಪ ಸೇರಿದಂತೆ ಇತರರು ಹಾಜರಿದ್ದರು

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!