ಕೇಂದ್ರ ಸರ್ಕಾರದ ಮಧ್ಯಂತರ ಬಜೆಟ್ ನಲ್ಲಿ ಘೋಷಿಸಿರುವ 300 ಯೂನಿಟ್ ಉಚಿತ ವಿದ್ಯುತ್ ಯೋಜನೆಯನ್ನು ಕಾಂಗ್ರೆಸ್ ಪಕ್ಷವು ಲೇವಡಿ ಮಾಡಿದೆ.
ಒಂದು ಕೋಟಿ ಮನೆಗೆ 300 ಯೂನಿಟ್ ಉಚಿತ ವಿದ್ಯುತ್” ಎಂಬ ಘೋಷಣೆಯ ಹಿಂದಿನ ಸತ್ಯವೇನೆಂದರೆ ಮನೆಯೂ ನಿಮ್ಮದೇ, ಚಾವಣಿಯೂ ನಿಮ್ಮದೇ, ಸೂರ್ಯನೂ ನಿಮ್ಮವನೇ, ಬೆಳಕೂ ನಿಮ್ಮದೇ, ಸೋಲಾರ್ ಪ್ಯಾನಲ್ ಗೆ ಅರ್ಧ ಬಂಡವಾಳವೂ ನಿಮ್ಮದೇ! ಅದರಿಂದ ಬರುವ ವಿದ್ಯುತ್ ಮಾತ್ರ ಕೇಂದ್ರ ಸರ್ಕಾರ ಕೊಡುವುದಂತೆ!, ಇದು ಬಿಜೆಪಿ ಸರ್ಕಾರದ ಬೋಗಸ್ ಯೋಜನೆಯಾಗಿದೆ ಎಂದು ಕಾಂಗ್ರೆಸ್ ಕಿಡಿಕಾರಿದೆ.
ಕೇಂದ್ರ ಸರ್ಕಾರದ “ ಒಂದು ಕೋಟಿ ಮನೆಗೆ 300 ಯೂನಿಟ್ ಉಚಿತ ವಿದ್ಯುತ್” ಎಂಬ ಘೋಷಣೆಯ ಹಿಂದಿನ ಸತ್ಯ..
ಮನೆಯೂ ನಿಮ್ಮದೇ,
ಚಾವಣಿಯೂ ನಿಮ್ಮದೇ,
ಸೂರ್ಯನೂ ನಿಮ್ಮವನೇ,
ಬೆಳಕೂ ನಿಮ್ಮದೇ,
ಸೋಲಾರ್ ಪ್ಯಾನಲ್ ಗೆ ಅರ್ಧ ಬಂಡವಾಳವೂ ನಿಮ್ಮದೇ!ಅದರಿಂದ ಬರುವ ವಿದ್ಯುತ್ ಮಾತ್ರ ಕೇಂದ್ರ ಸರ್ಕಾರ ಕೊಡುವುದಂತೆ!
ಇಂತಹ ಹೆಡ್ಲೈನ್ ಮ್ಯಾನೇಜ್ಮೆಂಟ್ ನಿಂದಲೇ…
— Karnataka Congress (@INCKarnataka) February 3, 2024
“>
ಇಂತಹ ಅಗ್ಗದ ಹೆಡ್ಲೈನ್ ಮ್ಯಾನೇಜ್ಮೆಂಟ್ ನಿಂದಲೇ ಜನರನ್ನು ಮೂರ್ಖರನ್ನಾಗಿಸುತ್ತ ಕೇಂದ್ರ ಸರ್ಕಾರ ಜನರನ್ನು ಯಾಮಾರಿಸುತ್ತಿದೆ ಎಂದು ಕಾಂಗ್ರೆಸ್ ‘ಎಕ್ಸ್’ ನಲ್ಲಿ ಟೀಕಿಸಿದೆ.