Thursday, September 19, 2024

ಪ್ರಾಯೋಗಿಕ ಆವೃತ್ತಿ

ದೇಶದ ಒಟ್ಟು ಮತದಾರರ ಸಂಖ್ಯೆ 96.88 ಕೋಟಿ : ಚುನಾವಣಾ ಆಯೋಗದ ಘೋಷಣೆ

ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಮತದಾನ ಮಾಡಲು ದೇಶದ 96.88 ಕೋಟಿ ಮತದಾರರು ಅರ್ಹರಾಗಿದ್ದಾರೆ ಎಂದು ಭಾರತೀಯ ಚುನಾವಣಾ ಆಯೋಗ ಶುಕ್ರವಾರ ಘೋಷಿಸಿದೆ.

ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಮತದಾನ ಮಾಡಲು ದೇಶದ 96.88 ಕೋಟಿ ಮತದಾರರು ಅರ್ಹರಾಗಿದ್ದಾರೆ ಎಂದು ಭಾರತೀಯ ಚುನಾವಣಾ ಆಯೋಗ ಶುಕ್ರವಾರ ಘೋಷಿಸಿದೆ.

ಇದೇ ವೇಳೆ ಲಿಂಗಾನುಪಾತವು 2023ರಲ್ಲಿ 940 ಇತ್ತು. 2024ರಲ್ಲಿ 948ಕ್ಕೆ ಏರಿಕೆಯಾಗಿರುವುದಾಗಿಯೂ ತಿಳಿಸಿದೆ.

ಕರಡು ಪಟ್ಟಿ ಸಿದ್ದಪಡಿಸುತ್ತಿದ್ದ(Draft) ವೇಳೆ 95,73,52,077 ಇದ್ದ ಮತದಾರರ ಸಂಖ್ಯೆಯು, ಫೆ.8ರ ಅಂತಿಮ ಪಟ್ಟಿಯ ವೇಳೆ 96,88,21,926 ಒಟ್ಟು ಮತದಾರರು ನೋಂದಾಯಿಸಿಕೊಂಡಿದ್ದಾರೆ. ಈ ಪೈಕಿ 49,72,31,994 ಮಂದಿ ಪುರುಷ ಮತದಾರರು, 47,15,41,888 ಮಂದಿ ಮಹಿಳೆಯರಿದ್ದಾರೆ ಎಂದು ಅಂಕಿ-ಸಂಖ್ಯೆಗಳನ್ನು ಆಯೋಗ ಪ್ರಕಟಿಸಿದೆ.

ಇದರ ಜೊತೆಗೆ 2,38,791 ಮಂದಿ ಶತಾಯುಷಿಗಳು(100+) ಕೂಡ ಮತದಾರರ ಪಟ್ಟಿಯಲ್ಲಿರುವುದಾಗಿ ತಿಳಿಸಿದೆ. ಜನಸಂಖ್ಯೆ ಅನುಪಾತವು 66.76 ಇರುವುದಾಗಿ ಭಾರತೀಯ ಚುನಾವಣಾ ಆಯೋಗ ಮಾಹಿತಿ ನೀಡಿದೆ.

17 ದಾಟಿರುವವರಿಂದಲೂ ಅರ್ಜಿ

ಈಗಾಗಲೇ 17+ ವಯಸ್ಸು ಆಗಿರುವವರಿಂದ ಕೂಡ ಅರ್ಜಿ ಸ್ವೀಕರಿಸಲಾಗಿದ್ದು, ಈವರೆಗೆ ದೇಶದಲ್ಲಿ 10.64 ಲಕ್ಷ ಮಂದಿಯಿಂದ ಮುಂಗಡ ಅರ್ಜಿಗಳನ್ನು ಸ್ವೀಕರಿಸಲಾಗಿದೆ ಎಂದಿರುವ ಚುನಾವಣಾ ಆಯೋಗ, ಮುಂದಿನ ದಿನಗಳಲ್ಲಿ 18 ಪೂರ್ತಿಯಾದವರನ್ನು ಪಟ್ಟಿಗೆ ಸೇರಿಸಲಾಗುವುದು ಎಂದು ತಿಳಿಸಿದೆ.

ಮತದಾರರು ಸಂಕ್ಷಿಪ್ತ ವಿವರ ಹೀಗಿದೆ

  • ಒಟ್ಟು ಮತದಾರರ ಸಂಖ್ಯೆ: 96,88,21,926
  • ಪುರುಷ ಮತದಾರರು: 49,72,31,994
  • ಮಹಿಳಾ ಮತದಾರರು: 47,15,41,888
  • ಲೈಂಗಿಕ ಅಲ್ಪಸಂಖ್ಯಾತರು: 48,044
  • ವಿಶೇಷ ಚೇತನ ಮತದಾರರು: 88,35,449
  • 18-19ರ ವಯಸ್ಸಿನವರು: 1,84,81,610
  • 20-29ರ ವಯಸ್ಸಿನವರು:19,74,37,160
  • 80+ ಇರುವವರು: 1,85,92,918
  • 100+ ಇರುವವರು: 2,38,791
  • ಜನಸಂಖ್ಯೆ ಅನುಪಾತ: 66.76
  • ಲಿಂಗಾನುಪಾತ: 948

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!