Friday, September 20, 2024

ಪ್ರಾಯೋಗಿಕ ಆವೃತ್ತಿ

ಲೋಕಸಭೆ| 5 ವರ್ಷಗಳಲ್ಲಿ ಒಮ್ಮೆಯೂ ಮಾತನಾಡದ ನಾಲ್ವರು ಬಿಜೆಪಿ ಸಂಸದರು !

ಕಳೆದ ಐದು ವರ್ಷಗಳ 1354 ಗಂಟೆಗಳ ಲೋಕಸಭೆ ಅಧಿವೇಶನದ ಅವಧಿಯಲ್ಲಿ ಕರ್ನಾಟಕದ ನಾಲ್ವರು ಬಿಜೆಪಿ ಸಂಸದರು ಒಮ್ಮೆಯೂ ಮಾತನಾಡಿಲ್ಲ, ಅಲ್ಲದೆ ಯಾವುದೇ ಚರ್ಚೆಯಲ್ಲಿ ಪಾಲ್ಗೊಂಡಿಲ್ಲ.

ಚಿಕ್ಕಬಳ್ಳಾಪುರದ ಬಿ ಎನ್ ಬಚ್ಚೇಗೌಡ, ಉತ್ತರ ಕನ್ನಡದ ಅನಂತ್ ಕುಮಾರ್ ಹೆಗಡೆ, ಚಾಮರಾಜ ನಗರದ ವಿ ಶ್ರೀನಿವಾಸ್ ಪ್ರಸಾದ್ ಹಾಗೂ ವಿಜಯಪುರದ ರಮೇಶ್ ಜಿಗಜಿಣಗಿ ಐದು ವರ್ಷದ ಲೋಕಸಭಾ ಅಧಿವೆಶನದಲ್ಲಿ ಒಮ್ಮೆಯೂ ಮಾತನಾಡಿಲ್ಲ.

ಕರ್ನಾಟಕದ ನಾಲ್ವರು ಸಂಸದರು ಯಾವುದೇ ಪ್ರಶ್ನೆಯನ್ನು ಕೇಳಿಲ್ಲ ಅಥವಾ ಯಾವುದೇ ಸಲ್ಲಿಕೆಯನ್ನು ಮುಂದಿಟ್ಟಿಲ್ಲ. ಅಲ್ಲದೆ ಯಾವುದೇ ಚರ್ಚೆಯಲ್ಲಿ ಪಾಲ್ಕೊಂಡಿಲ್ಲ ಎಂಬುದು ಸಚಿವಾಲಯದ ದಾಖಲೆಗಳಲ್ಲಿ ದಾಖಲಾಗಿದೆ.

ಒಟ್ಟು 9 ಮಂದಿಯಲ್ಲಿ ಮೂವರು ಒಂದು ಪ್ರಶ್ನೆಯನ್ನು ಕೇಳಿಲ್ಲ. ಉಳಿದ 6 ಮಂದಿ ಕನಿಷ್ಠ ಒಂದು ಅವಕಾಶವನ್ನು ಬಳಿಸಿಕೊಂಡಿದ್ದಾರೆ.

ಇವರ ಜೊತೆ ಬಿಜೆಪಿಯ ಶತೃಘ್ನ ಸಿನ್ಹಾ, ಸನ್ನಿ ಡಿಯೋಲ್, ಪ್ರಧಾನ್ ಬರುವಾ, ಬಿಎಸ್‌ಪಿಯ ಅತುಲ್ ರಾಯ್ ಹಾಗೂ ಟಿಎಂಸಿತ ದಿಬ್ಯಂದು ಅಧಿಕಾರಿ ಕೂಡ ಒಮ್ಮೆಯೂ ಸಂಸತ್ತಿನ ಅಧಿವೇಶನದಲ್ಲಿ ಬಾಯಿ ಬಿಟ್ಟಿಲ್ಲ ಎಂದು ಲೋಕಸಭೆಯ ಸಚಿವಾಲಯದ ಮೂಲಗಳು ತಿಳಿಸಿವೆ.

ಬಿಎಸ್‌ಪಿಯ ಅತುಲ್ ರಾಯ್ ತಮ್ಮ ಸದಸ್ಯದ ಪೂರ್ಣ ಅವಧಿಯವರೆಗೂ ಜೈಲಿನಲ್ಲಿದ್ದರೆ, ಶತೃಘ್ನ ಸಿನ್ಹಾ 2022ರ ಏಪ್ರಿಲ್‌ನಲ್ಲಿ ಲೋಕಸಭೆ ಪ್ರವೇಶಿಸಿದರು.

ಅಂಕಿಅಂಶಗಳ ವರದಿಯಂತೆ 17ನೇ ಲೋಕಸಭೆಯಲ್ಲಿ 222 ಮಸೂದೆಗಳ 1116 ಪ್ರಶ್ನೆಗಳಿಗೆ ಸಚಿವರು ಉತ್ತರ ನೀಡಿದ್ದಾರೆ ಶೂನ್ಯ ಅವಧಿಯ ಸಂದರ್ಭದಲ್ಲಿ 5568 ಪ್ರಶ್ನೆಗಳನ್ನು ಕೇಳಲಾಗಿದೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!