Friday, September 20, 2024

ಪ್ರಾಯೋಗಿಕ ಆವೃತ್ತಿ

ಸಹಸ್ರಾರು ಭಕ್ತಾದಿಗಳ ಸಮ್ಮುಖದಲ್ಲಿ ವಿಜೃಂಭಣೆಯಿಂದ ನೆರವೇರಿದ ವೈದ್ಯನಾಥೇಶ್ವರ ಸ್ವಾಮಿ ಬ್ರಹ್ಮರಥೋತ್ಸವ

ವರದಿ : ಪ್ರಭು ವಿ ಎಸ್

ಮದ್ದೂರು ತಾಲೂಕಿನ ವೈದ್ಯನಾಥಪುರದ ಶ್ರೀವೈದ್ಯನಾಥೇಶ್ವರಸ್ವಾಮಿ ಬ್ರಹ್ಮರಥೋತ್ಸವ ಸಹಸ್ರಾರು ಭಕ್ತಾದಿಗಳ ಸಮ್ಮುಖದಲ್ಲಿ ವಿಜೃಂಭಣೆಯಿಂದ ನೆರವೇರಿತು.

ಶ್ರೀವೈದ್ಯನಾಥೇಶ್ವರ ಸ್ವಾಮಿ ಅವರ ಶ್ರೀಮದ್ವಿವ್ಯ ಮಹಾರಥೋತ್ಸವದ ಅಂಗವಾಗಿ ಫೆ.01ಶುಕ್ರವಾರ ರಂದು ಮಧ್ಯಾಹ್ನ 3ಕ್ಕೆ ವೈದ್ಯನಾಥಪುರ ಗ್ರಾಮಸ್ಥರಿಂದ ಶ್ರೀಹೊಳೆ ಆಂಜನೇಯಸ್ವಾಮಿ ಸನ್ನಿಧಿಯಿಂದ ಮೀಸಲು ನೀರು ತರುವ ಜತೆಗೆ ಹಳೇಬೂದನೂರು ಶ್ರೀಅಂಕನಾಥೇಶ್ವರಸ್ವಾಮಿ ಅವರ ವೀರಗಾಸೆ ಜರುಗಿತು.

ದಿನಾಂಕ 02- ನೇ ಶನಿವಾರದಂದು ಸ್ವಸ್ತಿಶ್ರೀ ವಿಜಯಾಭ್ಯುದಯ ಶಾಲಿವಾಹನ ಶಕ ವರ್ಷಂಗಳು 1945ನೇ ಶ್ರೀ ಶೋಭಕೃತ್ ನಾಮ ಸಂವತ್ಸರದ ಮಾಘ ಮಾಸ ಕೃಷ್ಣ ಪಕ್ಷ ಸಪ್ತಮಿ ಬೆಳಿಗ್ಗೆ 10-45 ರಿಂದ 11-15 ರೊಳಗೆ ಸಲ್ಲುವ ಶುಭ ಮೇಷ ಲಗ್ನದಲ್ಲಿ ಶ್ರೀ ವೈದ್ಯನಾಥೇಶ್ವರಸ್ವಾಮಿಯವರ ಬ್ರಹ್ಮರಥೋತ್ಸವವು ನೆರವೇರಿತು

ಕಾರ್ಯಕ್ರಮಗಳು

ರಾತ್ರಿ7 ಕ್ಕೆ ಶ್ರೀಪ್ರಸನ್ನ ಪಾರ್ವತಾಂಭ ವೈದ್ಯನಾಥೇಶ್ವರ ಸ್ವಾಮಿಯವರ ಬಸವಪ್ಪ, ಮದ್ದೂರಿನ ಶ್ರೀ ಮದ್ದೂರಮ್ಮ, ಆಲೂರಿನ ಶ್ರೀ ಆಲೂರಮ್ಮ ಹಾಗೂ ನಗರಕೆರೆ – ಉಪ್ಪಿನಕೆರೆ ಶ್ರೀ ಪಟ್ಟಲದಮ್ಮ
ಹಳೇಬೂದನೂರಿನ ಶ್ರೀ ಅಂಕನಾಥೇಶ್ವರಸ್ವಾಮಿ ವೀರಗಾಸೆ ಕುಣಿತ ಪೂಜಾ ಉತ್ಸವ ಏರ್ಪಡಿಸಲಾಗಿತ್ತು.

ಅನ್ನಸಂತರ್ಪಣೆ:

ರಾಮನಗರ ಜಿಲ್ಲೆ ಚನ್ನಪಟ್ಟಣ ತಾಲೂಕು ವಿರುಪಾಕ್ಷಿಪುರ ಹೋಬಳಿ ಜೆ.ಬ್ಯಾಡರಹಳ್ಳಿ ಶ್ರೀವೈದ್ಯನಾಥೇಶ್ವರ ಸಮಿತಿ ಮತ್ತು ಗ್ರಾಮಸ್ಥರಿಂದ ವಿಶೇಷ ಪೂಜೆಯೊಟ್ಟಿಗೆ ರಥೋತ್ಸವಕ್ಕೆ ಆಗಮಿಸುವ ಭಕ್ತಾದಿಗಳಿಗೆ ಅನ್ನಸಂತರ್ಪಣೆ ಆಯೋಜಿಸಿ ರಥೋತ್ಸವದ ಅಂಗವಾಗಿ ದೇವಾಲಯಕ್ಕೆ ಆಗಮಿಸುವ ಭಕ್ತರ ಅನುಕೂಲಕ್ಕೆ ಕೆಎಸ್‌ಆರ್‌ಟಿಸಿ ವತಿಯಿಂದ ವಿಶೇಷ ಸಾರಿಗೆ ವ್ಯವಸ್ಥೆ ಕಲ್ಪಿಸಲಾಗಿತ್ತು.

ಪಾನಕ ಮಜ್ಜಿಗೆ ಕೋಸಂಬರಿ
ವಿನಾಯಕ ಗೆಳೆಯರ ಬಳಗ ಗ್ರಾಮದ ಯುವಕರು ಮತ್ತು ಭಕ್ತರು ರಥೋತ್ಸವ ವೇಳೆ ಆಗಿಮಿಸಿದ ಸಾವಿರಾರು ಭಕ್ತರಿಗೆ ಮಜ್ಜಿಗೆ ಪಾನಕ ಕೋಸಂಬರಿ ವಿತರಿಸಲಾಯಿತು.

ರಥೋತ್ಸವದ ವೇಳೆ ಟ್ರಸ್ಟ್ ಪದಾಧಿಕಾರಿಗಳು ವಿವಿಧ ಗ್ರಾಮದ ಗ್ರಾಮದ ಭಕ್ತರು, ಹಾಗೂ ಗ್ರಾಮಸ್ಥರು ಹಾಜರಿದ್ದರು

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!