ಮಂಡ್ಯ ಜಿಲ್ಲೆಯಲ್ಲಿ ಸದ್ಯದಲ್ಲೆ ಹಗುರ ಮಳೆಯಾಗುವ ನಿರೀಕ್ಷೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ಹಾಗೂ ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯ ಮಾಹಿತಿ ನೀಡಿವೆ.
ಮಾ.16ರಿಂದ 20ರವರೆಗೆ ಸ್ಪಷ್ಟ ವಾತಾವರಣವಿರುವುದರಿಂದ ಈ ಅವಧಿಯಲ್ಲಿ ಗರಿಷ್ಟ 35.5 ಹಾಗೂ ಕನಿಷ್ಟ 15.7 ಡಿಗ್ರಿ ಸೆಲ್ಸಿಯಸ್ ಉಷ್ಮಾಂಶ ಇರಲಿದೆ. ಗಾಳಿಯೂ ಪ್ರತಿ ಗಂಟೆಗೆ 8 ರಿಂದ 12 ಕಿ.ಮೀ ವೇಗದಲ್ಲಿ ಬೀಸುವ ಸಾಧ್ಯತೆ ಇದ್ದು, ಮಳೆಯಾಗುವ ಸಂಭವವಿದೆ ಎಂದು ತಿಳಿಸಿದೆ.





