Wednesday, May 15, 2024

ಪ್ರಾಯೋಗಿಕ ಆವೃತ್ತಿ

ಕರ್ನಾಟಕದಲ್ಲಿ 2 ಹಂತದಲ್ಲಿ ಲೋಕಸಭಾ ಚುನಾವಣೆ| ಮಂಡ್ಯದಲ್ಲಿ ಏ.26ಕ್ಕೆ ಮತದಾನ

ಲೋಕಸಭಾ ಚುನಾವಣೆ ಏಳು ಹಂತಗಳಲ್ಲಿ ನಡೆಯಲಿದ್ದು,ಕರ್ನಾಟಕದಲ್ಲಿ ಎರಡು ಹಂತಗಳಲ್ಲಿ ಚುನಾವಣೆ ನಡೆಯಲಿದೆ ಎಂದು ಕೇಂದ್ರ ಚುನಾವಣಾ ಆಯೋಗ ಇಂದು ಪ್ರಕಟಿಸಿದೆ.

ಕರ್ನಾಟಕದಲ್ಲಿ 28 ಲೋಕಸಭಾ ಕ್ಷೇತ್ರಗಳಿಗೆ ಎರಡು ಹಂತದಲ್ಲಿ ಚುನಾವಣೆ ನಡೆಯಲಿದ್ದು,ಏಪ್ರಿಲ್‌ 26 ಮೊದಲ ಹಂತದ ಚುನಾವಣೆ ನಡೆಯಲಿದ್ದು, ಮೇ 7 ರಂದು ಎರಡನೇ ಹಂತದಲ್ಲಿ ಚುನಾವಣೆ ನಡೆಯಲಿದೆ. ಜೂನ್ 4 ರಂದು ಮತ ಎಣಿಕೆ ನಡೆಯಲಿದೆ.

ಏಪ್ರಿಲ್ 26ರ ಮೊದಲ ಹಂತದಲ್ಲಿ ಮಂಡ್ಯ, ಮೈಸೂರು, ಹಾಸನ, ಚಾಮರಾಜನಗರ, ಬೆಂಗಳೂರು ದಕ್ಷಿಣ, ಬೆಂಗಳೂರು ಉತ್ತರ, ಬೆಂಗಳೂರು ಕೇಂದ್ರ, ಬೆಂಗಳೂರು ಗ್ರಾಮಾಂತರ,ಚಿತ್ರದುರ್ಗ, ತುಮಕೂರು, ಚಿಕ್ಕಬಳ್ಳಾಪುರ, ಉಡುಪಿ- ಚಿಕ್ಕಮಗಳೂರು, ಕೋಲಾರ,ದಕ್ಷಿಣ ಕನ್ನಡ ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದೆ.

ಮೇ 7ರ ಎರಡನೇ ಹಂತದಲ್ಲಿ ಬಾಗಲಕೋಟೆ, ಬೆಳಗಾವಿ, ಚಿಕ್ಕೋಡಿ ಧಾರವಾಡ, ದಾವಣಗೆರೆ, ಉತ್ತರ ಕನ್ನಡ, ಶಿವಮೊಗ್ಗ, ಹಾವೇರಿ, ಬಳ್ಳಾರಿ, ಕೊಪ್ಪಳ, ರಾಯಚೂರು, ಕಲಬುರಗಿ, ಬೀದರ್, ವಿಜಯಪುರ ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದೆ.

ದೇಶಾದ್ಯಂತ ಏಳು ಹಂತಗಳಲ್ಲಿ ಚುನಾವಣೆ ನಡೆಯಲಿದ್ದು,ಒಟ್ಟು 543 ಲೋಕಸಭಾ ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. ಶನಿವಾರದಿಂದಲೇ ರಾಜ್ಯದಲ್ಲಿ ಮಾದರಿ ನೀತಿ ಸಂಹಿತೆ ಜಾರಿಯಾಗಿದ್ದು, ಫಲಿತಾಂಶ ಬರುವವರೆಗೂ ನೀತಿ ಸಂಹಿತೆ ಜಾರಿಯಲ್ಲಿರುತ್ತದೆ. ದೇಶದ ಒಟ್ಟು 97 ಕೋಟಿ ಮತದಾರರು ಇದ್ದಾರೆ.ಪುರುಷ ಮತದಾರರು 49.70 ಮತ್ತು ಮಹಿಳಾ ಮತದಾರರು 47.10 ಇದ್ದಾರೆ.

ಐದು ವಿಧಾನಸಭೆಯ ಮತದಾನಕ್ಕೂ ದಿನಾಂಕ ಪ್ರಕಟ

ಲೋಕಸಭೆಯ ಜತೆಗೆ ಒಡಿಶಾ, ಸಿಕ್ಕಿಂ, ಆಂಧ್ರ ಪ್ರದೇಶ ಹಾಗೂ ಅರುಣಾಚಲ ಪ್ರದೇಶ ಚುನಾವಣಾ ಆಯೋಗ ವೇಳಾಪಟ್ಟಿ ಪ್ರಕಟಿಸಿದೆ.

ಆಂಧ್ರ ಪ್ರದೇಶ ರಾಜ್ಯದ 175 ವಿಧಾನಸಭೆ, ಒಡಿಶಾದ 47 ವಿಧಾನಸಭೆ, ಅರುಣಾಚಲ ಪ್ರದೇಶದ 60 ವಿಧಾನಸಭೆ ಹಾಗೂ ಸಿಕ್ಕಿಂ ರಾಜ್ಯದ 32 ವಿಧಾನಸಭೆ ಕ್ಷೇತ್ರಗಳಿಗೆ ಚುನಾವಣಾ ಆಯೋಗ ದಿನಾಂಕ ನಿಗದಿ
ಮಾಡಿದೆ.

2019ರ ಲೋಕಸಭೆ ಚುನಾವಣೆ

2019ರ ಲೋಕಸಭಾ ಚುನಾವಣೆಗೆ ಆಯೋಗವು ಮಾರ್ಚ್ 10ರಂದು ವೇಳಾಪಟ್ಟಿ ಪ್ರಕಟಿಸಿತ್ತು. ಏಪ್ರಿಲ್ 11 ಹಾಗೂ ಮೇ 19ರ ನಡುವೆ ಏಳು ಹಂತಗಳಲ್ಲಿ ಮತದಾನ ನಡೆದಿತ್ತು. ಮೇ 23ರಂದು ಮತ ಎಣಿಕೆ ನಡೆಸಲಾಗಿತ್ತು. 2019ರಲ್ಲಿ ಶೇಕಡ 67.40ರಷ್ಟು ದೇಶದಲ್ಲಿ ಒಟ್ಟು ಮತದಾನ ನಡೆದಿತ್ತು.

ನರೇಂದ್ರ ಮೋದಿಯವರ ನೇತೃತ್ವದಲ್ಲಿ ಬಿಜೆಪಿಯು 303 ಸ್ಥಾನಗಳಲ್ಲಿ ಗೆದ್ದು ಅಧಿಕಾರದ ಚುಕ್ಕಾಣಿ ಹಿಡಿದಿದ್ದರೆ, ಕಾಂಗ್ರೆಸ್ 52 ಸ್ಥಾನಗಳಿಗೆ ತೃಪ್ತಿ ಪಟ್ಟಿತ್ತು. ಪ್ರಸ್ತುತ ಲೋಕಸಭೆಯ ಅವಧಿ ಜೂನ್ 16ಕ್ಕೆ ಕೊನೆಯಾಗಲಿದೆ. ಅದಕ್ಕೆ ಮುನ್ನ ಹೊಸ ಸರ್ಕಾರ ರಚನೆಯಾಗಬೇಕಿದೆ.

“>

 

ದೇಶದ ಮತದಾರರ ಸಂಖ್ಯೆ ಸಂಕ್ಷಿಪ್ತ ವಿವರ ಹೀಗಿದೆ

ಒಟ್ಟು ಮತದಾರರ ಸಂಖ್ಯೆ: 96,88,21,926
ಪುರುಷ ಮತದಾರರು: 49,72,31,994
ಮಹಿಳಾ ಮತದಾರರು: 47,15,41,888
ಲೈಂಗಿಕ ಅಲ್ಪಸಂಖ್ಯಾತರು: 48,044
ವಿಶೇಷ ಚೇತನ ಮತದಾರರು: 88,35,449
18-19ರ ವಯಸ್ಸಿನವರು: 1,84,81,610
20-29ರ ವಯಸ್ಸಿನವರು:19,74,37,160
80+ ಇರುವವರು: 1,85,92,918
100+ ಇರುವವರು: 2,38,791
ಜನಸಂಖ್ಯೆ ಅನುಪಾತ: 66.76
ಲಿಂಗಾನುಪಾತ: 948

ಕರ್ನಾಟಕದಲ್ಲಿರುವ ಒಟ್ಟು ಮತದಾರರ ವಿವರಗಳು ಹೀಗಿದೆ:

  • ಒಟ್ಟು ಮತದಾರರ ಸಂಖ್ಯೆ: 5,37,85,815
  • ಪುರುಷರ ಸಂಖ್ಯೆ: 2,69,33,750
  • ಮಹಿಳೆಯರ ಸಂಖ್ಯೆ: 2,68,47,145
  • ಇತರೆ: 4,920
  • ಸೇವಾ ಮತದಾರರ ಸಂಖ್ಯೆ: 46,501
  • ಯುವ ಮತದಾರರ ಸಂಖ್ಯೆ: 3,88,527
  • ವಿದೇಶದಲ್ಲಿರುವ ಮತದಾರರ ಸಂಖ್ಯೆ: 3,164
  • 80 ವರ್ಷ ದಾಟಿರುವ ಮತದಾರರ ಸಂಖ್ಯೆ: 12,71,862
  • ಶತಾಯುಷಿ ಅಂದರೆ 100ಕ್ಕೂ ಹೆಚ್ಚು ವರ್ಷ ತುಂಬಿರುವವರ ಸಂಖ್ಯೆ: 17,937
  • ವಿಕಲ ಚೇತನ ಮತದಾರರ ಸಂಖ್ಯೆ: 5,62,890
  • ಮತದಾನ ಕೇಂದ್ರಗಳ ಸಂಖ್ಯೆ: 58,834

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!