Friday, September 20, 2024

ಪ್ರಾಯೋಗಿಕ ಆವೃತ್ತಿ

ಹಬ್ಬ ಹರಿದಿನಗಳು ಸಂಸ್ಕೃತಿಯ ಪ್ರತಿಬಿಂಬ: ವಿಜಯ್ ರಾಮೇಗೌಡ

ದೇವಾಲಯಗಳ ಜೀರ್ಣೋದ್ಧಾರ, ಹಬ್ಬ ಹರಿದಿನಗಳು,ಜಾತ್ರೆಗಳು ನಮ್ಮ ಸಂಸ್ಕೃತಿಯ ಪ್ರತಿಬಿಂಬಗಳಾಗಿವೆ‌‌ ಎಂದು ಕಾಂಗ್ರೆಸ್ ಮುಖಂಡ ವಿಜಯ್ ರಾಮೇಗೌಡ ಅವರು ಅಭಿಪ್ರಾಯಪಟ್ಟರು.

ಕೆ.ಆರ್.ಪೇಟೆ ತಾಲ್ಲೂಕಿನ ಕಿಕ್ಕೇರಿ ಹೋಬಳಿ ಜೈಪುರ ಗ್ರಾಮದಲ್ಲಿ ಶ್ರೀಬಸವೇಶ್ವರ ನೂತನ ದೇವಾಲಯದ ಲೋಕಾರ್ಪಣೆ ಮಾಡಿದ ಸಂದರ್ಭದಲ್ಲಿ ‌ಮುಖ್ಯ ಅತಿಥಿಗಳಾಗಿ ಬಾಗವಹಿಸಿ ದೇವರಿಗೆ ಪೂಜೆ ಸಲ್ಲಿಸಿದ ನಂತರ ಮಾತನಾಡಿದರು.

ದೇವಾಲಯಗಳಿಗೆ ಭೇಟಿ ನೀಡುವುದರಿಂದ ಮಾನಸಿಕ ನೆಮ್ಮದಿ ಮೂಡಿಸುವಲ್ಲಿ ದೇವಾಲಯಗಳ ಪಾತ್ರ ಮಹತ್ವದ್ದಾಗಿದೆ. ಭಗವಂತ ಇದ್ದಾನೆ ಎನ್ನುವುದಿದ್ದರೂ ದೇವಾಲಯಗಳನ್ನು ನಿರ್ಮಿಸುವುದು ದೇವರನ್ನು ಮರೆಯಬಾರದು ಎನ್ನುವ ಕಾರಣದಿಂದಾಗಿ ಆದ್ಯಾತ್ಮಿಕ ನೆಲೆಗಟ್ಟಿನಲ್ಲಿ ನಿರ್ಮಿತವಾದ ಬದುಕು ಸುಖ ಸಂತೋಷ ಕಾಣುತ್ತದೆ. ಮಕ್ಕಳಿಗೆ ಉತ್ತಮ ಸಂಸ್ಕಾರ, ಧ್ಯಾನ ಹಾಗೂ ಧಾರ್ಮಿಕ ಚಿಂತನೆಗಳನ್ನು ಕಲಿಸಬೇಕಿದ್ದು, ಈ ದಿಸೆಯಲ್ಲಿ ಹಿರಿಯರು ಹಾಕಿಕೊಟ್ಟಿರುವ ಮಾರ್ಗದಲ್ಲಿ ನಡೆಯಬೇಕಿದೆ. ವಿಜ್ಞಾನದಿಂದ ಇಂದು ಬದುಕು ಅರಳುವ ಬದಲು ನರಳುತ್ತಿದ್ದು, ಎಷ್ಟೇ ಸೌಲಭ್ಯಗಳಿದ್ದರೂ ಸಹ ಮನಶ್ಯಾಂತಿ ಇಲ್ಲದಂತಾಗಿದೆ. ಈ ದಿಸೆಯಲ್ಲಿ ಧ್ಯಾನ ಹಾಗೂ ದೇವತಾ ಕಾರ್ಯಗಳು ನಮ್ಮನ್ನು ನಾವು ಅರ್ಥ ಮಾಡಿಕೊಂಡು ನೆಮ್ಮದಿ ಕಾಣಲು ಸಹಕಾರಿಯಾಗು ಇಂದು ನಿರ್ಮಿಸಿರುವ ಚೌಡೇಶ್ವರಿ ದೇವಿ ತಾಯಿ ಹೃದಯವು ಅರ್ಥಮಾಡಿಕೊಳ್ಳಬೇಕಿದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಜಿ.ಪಂ ಮಾಜಿ ಸದಸ್ಯ ದೇವರಾಜು,ತಾ. ಪಂ ಮಾಜಿ ಸದಸ್ಯ ಮಾಧವ್ ಪ್ರಸಾದ್, ಮಾಜಿ ತಾ.ಪಂ.ಸದಸ್ಯರಾದ ಶ್ಯಾಮಣ್ಣ, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಅಧ್ಯಕ್ಷ ವಿ. ಎಸ್ ಧನಂಜಯ್ ಕುಮಾರ್, ಗುಂಡ,ವಿಜಯ್ ರಾಮೇಗೌಡ ಆಪ್ತ ಸಹಾಯಕ ಬಸವರಾಜು ಸೇರಿದಂತೆ ಇತರರು ಉಪಸ್ಥಿತರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!