ಪ್ರಸ್ತುತ ದಿನಗಳಲ್ಲಿ ವಿದ್ಯಾವಂತ ಸಮುದಾಯವೇ ತಮ್ಮ ತಂದೆ-ತಾಯಿಯಂದಿರನ್ನು ಬಹಳವಾಗಿ ಕಡೆಗಣಿಸುತ್ತಿದೆ ಎಂದು ಅಪರ ಜಿಲ್ಲಾಧಿಕಾರಿ ಡಾ.ಎಚ್.ಎಲ್.ನಾಗರಾಜು ವಿಷಾದ ವ್ಯಕ್ತಪಡಿಸಿದರು.
ಮಂಡ್ಯ ನಗರದ ಸೇವಾಕಿರಣ ವೃದ್ದಾಶ್ರಮ ಸಭಾಂಗಣದಲ್ಲಿ ಸೇವಾಕಿರಣ ಚಾರಿಟಬಲ್ ಟ್ರಸ್ಟ್ ಉಚಿತ ವೃದ್ದಾಶ್ರಮ ಆಯೋಜಿಸಿದ್ದ ತಿಂಗಳ ಅತಿಥಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
20ವರ್ಷ ಸಲಹಿ ಲಾಲನೆ ಪಾಲನೆ ಮಾಡಿದ ವಯೋವೃದ್ದ ತಂದೆ ತಾಯಿಯರನ್ನು ವಿದ್ಯಾವಂತ ಮಕ್ಕಳು ಮನೆಯಿಂದ ಹೊರಹಾಕುವ ಪ್ರಕರಣಗಳನ್ನು ಕಂಡಿದ್ದೇವೆ, ಆಸ್ತಿ, ಹಣಕ್ಕಾಗಿ ಹಿರಿಯ ನಾಗರೀಕರಿಗೆ ಮಾನಸಿಕ-ದೈಹಿಕವಾಗಿ ಹಿಂಸೆ ನೀಡುವುದು ಹೆಚ್ಚಾಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಹಿರಿಯ ನಾಗರೀಕರ ಹಿತ ಕಾಯಲು ಸಂವಿಧಾನದಡಿ ಸಾಕಷ್ಟು ಕಾನೂನುಗಳ ಹಕ್ಕುಗಳಿವೆ, ರಕ್ಷಣೆ ಮಾಡಿಕೊಳ್ಳಲು ಸೌಲಭ್ಯಗಳಿವೆ, ತೊಂದರೆ ನೀಡವ ಮಕ್ಕಳಿಗೆ, ಸೊಸೆಯಂದಿರಿಗೆ ಶಿಕ್ಷೆಯಾದ ಪ್ರಕರಣಗಳು ಇವೆ, ಹಿರಿಯರನ್ನು ಗೌರವದಿಂದ ಕಾಪಾಡುವ ಜವಬ್ದಾರಿ ಪ್ರತಿ ಮಕ್ಕಳ ಮೇಲಿದೆ ಎಂದು ಎಚ್ಚರಿಸಿದರು.
ಸೇವಾಕಿರಣ ಚಾರಿಟಬಲ್ ಟ್ರಸ್ಟ್ ಕಾರ್ಯದರ್ಶಿ ಜಿ.ವಿ.ನಾಗರಾಜು, ಆಶ್ರಮ ಸ್ಥಾಪನೆ ಮಾಡಿ 20 ವರ್ಷವಾಗಿದೆ, ಉಚಿತವಾಗಿ ಆಶ್ರಮವಾಸಿಗಳಿಗೆ ಎಲ್ಲಾ ಸೌಲಭ್ಯ, ಸೌಕರ್ಯಗಳನ್ನು ನೀಡಲಾಗುತ್ತಿದೆ, 30 ಮಂದಿ ಆಶ್ರಮದಲ್ಲಿ ಫಲಾನುಭವಿಗಳಾಗಿದ್ದಾರೆ ಎಂದು ಮಾಹಿತಿ ನೀಡಿದರು.
ಸೇವಾಕಿರಣ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಬಿ.ಸಿ.ಶಿವನಂದ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ರಾಮಕೃಷ್ಣ ವಿವೇಕಾನಂದ ಆಶ್ರಮದ ಗುರೂಜಿ ಮಂಜುನಾಥ್, ನಿವೃತ್ತ ಪಾಂಶುಪಾಲ ಜಿ.ವಿ.ಕುಮಾರ್, ಸೇವಾದಳ ಸಂಘಟಕ ಗಣೇಶ್, ಆಶ್ರಮ ಮೇಲ್ವಿಚಾರಕ ರಾಜಣ್ಣ, ದೇವರಾಜು, ನಾರಾಯಣಸ್ವಾಮಿ ಮತ್ತಿತರರಿದ್ದರು.




