Saturday, May 18, 2024

ಪ್ರಾಯೋಗಿಕ ಆವೃತ್ತಿ

ಡಾ.ಶಿವಕುಮಾರ್ ಅವರ ವೈದ್ಯಕೀಯ ಸೇವೆ ಶ್ಲಾಘನೀಯ

ವೈದ್ಯಕೀಯ ಕ್ಷೇತ್ರ ಕಾರ್ಪೊರೇಟ್ ಸಂಸ್ಥೆಗಳ ಅಧೀನದಲ್ಲಿರುವ ಸಂದರ್ಭದಲ್ಲಿ ಜನರಿಂದ ಉತ್ತಮ ವೈದ್ಯರೆಂದು ಕರೆಸಿಕೊಂಡ ಡಾ. ಶಿವಕುಮಾರ್ ಅವರ ಸೇವೆ ಶ್ಲಾಘನೀಯ ಎಂದು ಅಪರ ಜಿಲ್ಲಾಧಿಕಾರಿ ವಿ.ಆರ್.ಶೈಲಜಾ ಗುಣಗಾನ ಮಾಡಿದರು.

ನಗರದ ರೆಡ್‌ಕ್ರಾಸ್ ಭವನದಲ್ಲಿ ಭಾರತೀಯ ರೆಡ್‌ಕ್ರಾಸ್ ಸಂಸ್ಥೆಯ ಜಿಲ್ಲಾ ಶಾಖೆ ಆಯೋಜಿಸಿದ್ದ ನಿವೃತ್ತರಾದ ಮಿಮ್ಸ್ ಪ್ರಾಂಶುಪಾಲ ಡಾ.ಕೆ.ಎಂ.ಶಿವಕುಮಾರ್ ಅವರ ಅಭಿನಂದನಾ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

ಒಂದು ದೇಶದ ಅಭಿವೃದ್ಧಿ ಅಳೆಯುವುದು ಆದಾಯದಿಂದಲ್ಲ.ಆ ದೇಶದಲ್ಲಿನ ಶಿಕ್ಷಣ, ಜನತೆಯ ಆರೋಗ್ಯ, ತಂತ್ರಜ್ಞಾನ, ಉದ್ಯೋಗದ ಹಂತಗಳು ಯಾವ ಮಾನದಂಡದಲ್ಲಿದೆ ಎಂಬುವುದು ಅಳತೆಗೋಲಾಗಿದೆ. ಆದ್ದರಿಂದ ಆರೋಗ್ಯ ಎಂಬುದು ದೇಶದ ಅಭಿವೃದ್ಧಿಯ ಸಂಕೇತ ಎಂದು ನುಡಿದರು.

ಮಂಡ್ಯ ನಗರಕ್ಕೆ ಡಾ.ಶಿವಕುಮಾರ್ ಅವರ ಸೇವೆ ಅವಶ್ಯಕತೆ ಇದೆ, ಅವರ ಸೇವೆ ನಿರಂತರವಾಗಿರಲಿ, ಅವರು ತಾಳ್ಮೆಯ ವ್ಯಕ್ತಿತ್ವ ಹೊಂದಿದ್ದಾರೆ.ಪ್ರಾವೀಣ್ಯತೆ ಪಡೆದಂತಹ ವೈದ್ಯರು ಮೆಟ್ರೋ ನಗರಗಳಲ್ಲಿ ದುಡಿಮೆ ಮಾಡಬಹುದಿತ್ತು.ಆದರೆ ಡಾ.ಶಿವಕುಮಾರ್ ಅವರು ತನ್ನೂರಿನ ನೆಲದಲ್ಲೇ ಆರೋಗ್ಯ ಸೇವೆ ಸಲ್ಲಿಸುತ್ತಿರುವುದು ಮೆಚ್ಚುಗೆಯ ವಿಷಯ ಎಂದು ತಿಳಿಸಿದರು.

ಕೋವಿಡ್ ಸಂಕಷ್ಟದಲ್ಲಿ ಶಿವಕುಮಾರ್ ಅವರು ಮಂಡ್ಯ ಜಿಲ್ಲೆಯಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಿದ್ದು, ಅವರ ನಿವೃತ್ತಿ ಜೀವನ ಸುಖಕರವಾಗಿರಲಿ ಎಂದು ಆಶಿಸಿದರು.

ಸಮಾರಂಭದಲ್ಲಿ ರೆಡ್ ಕ್ರಾಸ್ ಸಂಸ್ಥೆ ಸಭಾಧ್ಯಕ್ಷೆ ಮೀರಾ ಶಿವಲಿಂಗಯ್ಯ, ವೈದ್ಯರಾದ ಡಾ.ವಿ.ಎಲ್.ನಂದೀಶ್, ಡಾ. ಜಗದೀಶ್‌ಕುಮಾರ್, ಪದಾಧಿಕಾರಿಗಳಾದ ಕೆ.ಟಿ. ಹನುಮಂತು, ರಂಗಸ್ವಾಮಿ ಸೇರಿದಂತೆ ಇತರರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!