Thursday, September 19, 2024

ಪ್ರಾಯೋಗಿಕ ಆವೃತ್ತಿ

ಮಂಡ್ಯ| ಸಿಎಂ ಸಿದ್ದರಾಮಯ್ಯ ತೇಜೋವಧೆ; ಕಿಡಿಗೇಡಿಗಳ ವಿರುದ್ದ ದೂರು ನೀಡಿದ ಕಾಂಗ್ರೆಸ್

ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಮಾಹಿತಿ ಹರಡಿ ಮುಖ್ಯಮಂತ್ರಿಗಳ ತೇಜೊವಧೆ ಮಾಡಿ, ಸಾಮಾಜಿಕ ಸ್ವಾಸ್ಥ್ಯ ಕೆಡಿಸುತ್ತಿರುವ ವ್ಯಕ್ತಿಗಳ ಮೇಲೆ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಮಂಡ್ಯ ಜಿಲ್ಲಾ ಅಪರ ಪೊಲೀಸ್ ವರಿಷ್ಠಾಧಿಕಾರಿ ಗಂಗಾಧರ್ ಸ್ವಾಮಿ ಅವರಿಗೆ ಎನ್ ಚಲುವರಾಯಸ್ವಾಮಿ ಹಿತೈಷಿಗಳ ಬಳಗದ ಅಧ್ಯಕ್ಷ ನವೀನ್ ಕುಮಾರ್ ಸೇರಿದಂತೆ ಹಲವು ಕಾಂಗ್ರೆಸ್ ಮುಖಂಡರು ದೂರು ನೀಡಿದ್ದಾರೆ.

ಬೋರಲಿಂಗ ಎಂಬ ವ್ಯಕ್ತಿಯು ತನ್ನ ಫೇಸ್ ಬುಕ್ ಖಾತೆಯಲ್ಲಿ ಇಂದ್ರಪ್ರಸ್ಥ ಎಂಬ ಬೇನಾಮಿ ಖಾತೆಯಿಂದ ಪೋಸ್ಟ್ ವೊಂದನ್ನು ಸಿಎಂ ಸಿದ್ದರಾಮಯ್ಯ ಅವರ ಕುರಿತು ಪೋಸ್ಟ್ ಒಂದನ್ನು ಹಂಚಿಕೊಂಡಿದ್ದು, ಅದರಲ್ಲಿ ‘ಪವಿತ್ರ ರಂಜಾನ್ ಹಬ್ನದ ಪ್ರಯುಕ್ತ ಮಸೀದಿಗಳಿಗೆ ಮಾತ್ರ ಕುಡಿಯುವ ನೀರು ಎಂದು ಟ್ಯಾಂಕರುಗಳ ಚಿತ್ರಸಿದಂತೆ ಪೋಸ್ಟರ್ ಸೃಷಿಸಿ ಹಂಚಿಕೊಂಡಿದ್ದಾನೆ, ಈತ ಹಿಂದೂಗಳನ್ನು ಗಲಭೆಗೆ ಪ್ರಚೋದಿಸುವ ಸಲುವಾಗಿ ಈ ರೀತಿಯ ಪೋಸ್ಟರ್ ರಚಿಸಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾನೆಂದು ದೂರಿದ್ದಾರೆ.

nudikarnataka.com

ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ತಾರತಮ್ಯ ಮಾಡುತ್ತಿದ್ದಾರೆಂದು ಅವರ ಚಾರಿತ್ರ್ಯವಧೆ ಮಾಡುವುದು ಹಾಗೂ ಹಿಂದೂ ಮುಸ್ಲಿಂ ಗಲಭೆಗೆ ಪ್ರಚೋದನೆ ನೀಡುವುದು ಇದರ ಉದ್ದೇಶವಾಗಿದೆ, ಇದೇ ಮಾದರಿಯಲ್ಲಿ ಕೃಷ್ಣ ಹೆಚ್.ಬಿ ಎಂಬ  ವ್ಯಕ್ತಿ ಇದೇ ಪೋಸ್ಟ್ ಅನ್ನು ಗುಲಾಮರ ಅಪ್ಪ ಎಂಬ ಸಾಮಾಜಿಕ ಖಾತೆಯಿಂದ ಹಂಚಿಕೊಂಡಿದ್ದು, ಸಾಮಾಜಿಕ ಸ್ವಾಸ್ಥ್ಯ ಕೆಡಿಸುವ ದುರುದ್ದೇಶ ಹೊಂದಿದ್ದಾನೆ, ಈ ಹಿನ್ನೆಲೆಯಲ್ಲಿ ಇಂತಹ ಕಿಡಿಗೇಡಿಗಳ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕೆಂದು ಕಾಂಗ್ರೆಸ್ ಮುಖಂಡರು ಆಗ್ರಹಿಸಿದ್ದಾರೆ.

ಅಲ್ಲದೇ ಸಾಮಾಜಿಕ ಜಾಲತಾಣಗಳಾದ ಫೇಸ್ಬುಕ್, ವಾಟ್ಸಾಪ್ ಗಳಲ್ಲಿ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ತೇಜೋವಧೆ ಮಾಡುವ ಮೂಲಕ ಕೋಮು ಗಲಭೆಗೆ ಪ್ರಚೋದಿಸುತ್ತಿದ್ದವರ ಇತರರ ಮೇಲೆಯೂ ಕಾನೂನು ಕ್ರಮ ಕೈಗೊಳ್ಳುವಂತೆ ದೂರು ಸಲ್ಲಿಸಿದ್ದಾರೆ.

ಈ ಸಂದರ್ಭದಲ್ಲಿ ಮಂಡ್ಯ ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಮುಜಾಹಿದ್ ಅಲಿ ಖಾನ್, ವಕ್ಫ್ ಮಂಡಳಿ ಮಾಜಿ ಅಧ್ಯಕ್ಷ ಶೇಕ್ ಉಬೇದ್ಉಲ್ಲಾ, ನಗರಸಭಾ ಸದಸ್ಯ ಜಾಕೀರ್ ಪಾಷ ಮತ್ತು ಜಬಿವುಲ್ಲಾ ಖಾನ್ ಉಪಸ್ಥಿತರಿದ್ದರು

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!