Friday, September 20, 2024

ಪ್ರಾಯೋಗಿಕ ಆವೃತ್ತಿ

ಒರಿಸ್ಸಾದಲ್ಲಿ ಬಿಜೆಪಿಗೆ ಲಾಭ : ವಿ.ಕೆ.ಪಾಂಡಿಯನ್ ಆಗಿದ್ದಾರೆ ವಿಲನ್ !

ಇಡೀ‌ ದೇಶದಲ್ಲಿ ಬಿಜೆಪಿ ಉತ್ತಮ ಸಾಧನೆ ಮಾಡುತ್ತಿರುವ ರಾಜ್ಯಗಳಲ್ಲಿ ಒಡಿಸ್ಸಾ ಮೊದಲ ಸ್ಥಾನದಲ್ಲಿದೆ.‌ ಕಳೆದ ಲೋಕಸಭಾ ಚುನಾವಣೆಯಲ್ಲಿ‌ ಎಂಟು ಸ್ಥಾನಗಳನ್ನು ಗೆದ್ದಿದ್ದ ಬಿಜೆಪಿ ಈ ಬಾರಿ ಗಮನಾರ್ಹವಾಗಿ ಸ್ಥಾನಗಳನ್ನು ‌ಹೆಚ್ಚಿಸಿಕೊಳ್ಳುವ ಸಾಧ್ಯತೆ ನಿಚ್ಚಳವಾಗಿದೆ.ಇದಕ್ಕೆ ಬಿಜೆಪಿ ಕಂಡುಕೊಂಡಿರುವ ಮಾರ್ಗ ವಿ‌.ಕೆ.ಪಾಂಡಿಯನ್ ಎಂಬ ತಮಿಳುನಾಡು ಮೂಲದ‌ ಐಎಎಸ್ ಆಫೀಸರ್ ನರೆಟೀವ್.

ಪಾಂಡಿಯನ್‌ ತಮಿಳುನಾಡು ಮೂಲದ‌‌ ಐಎಎಸ್ ಅಧಿಕಾರಿಯಾಗಿದ್ದು,ಸ್ವಯಂ ನಿವೃತ್ತಿ ಪಡೆದ ನಂತರ ಒರಿಸ್ಸಾ ಸಿಎಂ ನವೀನ್ ಪಟ್ನಾಯಕ್ ಅವರ ಖಾಸಗಿ ಕಾರ್ಯದರ್ಶಿಯಾಗಿ ಆಡಳಿತದಲ್ಲಿ ಹಲವು ಸುಧಾರಣೆ,ಕಲ್ಯಾಣಾಭಿವೃದ್ಧಿ ಕಾರ್ಯಕ್ರಮಗಳನ್ನು ಜಾರಿಗೆ ತಂದು ಒರಿಸ್ಸಾ ಜನರ ಮನಸ್ಸಿಗೆ ಬಿಜು ಜನತಾದಳ ಪಕ್ಷವನ್ನು ಹತ್ತಿರವಾಗಿಸಿದ್ದಾರೆ.ಸಿಎಂ ನವೀನ ಪಟ್ನಾಯಕ್ ಅವರ ಉತ್ತರಾಧಿಕಾರಿ ಎಂದೇ ಬಿಂಬಿತವಾಗಿದ್ದಾರೆ.

ಇದನ್ನು ಸಮರ್ಥವಾಗಿ ಬಳಸಿಕೊಂಡಿರುವ ಬಿಜೆಪಿ ಬೇರೆ ರಾಜ್ಯದ ವ್ಯಕ್ತಿಗೆ ರಾಜ್ಯ‌ವನ್ನು‌ ಕೊಡಬೇಕಾ ಎನ್ನುವ ನರೇಟಿವ್ ಅನ್ನು ಸಮರ್ಥವಾಗಿ‌ ಒರಿಸ್ಸಾ ಜನರ‌ ನಡುವೆ ಬಿತ್ತಿದ್ದು, ಇದರ ಫಲವಾಗಿ ಬಿಜೆಪಿ‌ ಒರಿಸ್ಸಾದಲ್ಲಿ‌ ಬಂಪರ್‌ ಬೆಳೆ ತೆಗೆಯುವ ಸಾಧ್ಯತೆಗಳಿವೆ ಎಂದು ರಾಜಕೀಯ ಪಂಡಿತರು ಮಾತಾಡುತ್ತಿದ್ದಾರೆ.


ತಮಿಳುನಾಡು ಮೂಲದ ವಿಕೆ ಪಾಂಡಿಯನ್ 2000 ಇಸವಿಯ ಐಎಎಸ್ ಅಧಿಕಾರಿಯಾಗಿದ್ದಾರೆ. 2011 ರಿಂದಲೂ ಒರಿಸ್ಸಾ ಸಿಎಂ ನವೀನ್ ಪಟ್ನಾಯಕ್ ಅವರ ಖಾಸಗಿ ಕಾರ್ಯದರ್ಶಿಯಾಗಿ ಕೆಲಸ ಮಾಡುತ್ತಿದ್ದ ಪಾಂಡಿಯನ್ ಅವರು 2023ರಲ್ಲಿ ಸ್ವಯಂ ನಿವೃತ್ತಿ ಪಡೆಯುತ್ತಾರೆ. ಅವರನ್ನು ಸಿಎಂ ನವೀನ್ ಪಟ್ನಾಯಕ್ ಅವರು ‘ನಬಿನ್ ಒಡಿಶಾ’ ಎಂಬ ಸರ್ಕಾರದ ಯೋಜನೆಯ ಅಧ್ಯಕ್ಷರಾಗಿ ನೇಮಿಸಿ, ಅವರಿಗೆ ಸಚಿವ ಸಂಪುಟ ಸ್ಥಾನಮಾನ ನೀಡುತ್ತಾರೆ. ಈ ಸ್ಥಾನವನ್ನು ಪಡೆದ ಮೊದಲ ಅಧಿಕಾರಿ ಎಂಬ ಹೆಗ್ಗಳಿಕೆ ಇವರದ್ದು‌. ವಿ.ಕೆ. ಪಾಂಡಿಯನ್ ಒರಿಸ್ಸಾ ಮೂಲದ ಐಎಎಸ್ ಅಧಿಕಾರಿ ಸುಜಾತಾ ಕಾರ್ತಿಕೇಯನ್ ಅವರನ್ನು ವಿವಾಹವಾಗಿದ್ದು,ಪ್ರಸ್ತುತ ಬಿಜು ಜನತಾದಳ ಪಕ್ಷದಲ್ಲಿ ನವೀನ ಪಟ್ನಾಯಕ್ ಅವರ ನಂತರದ ಸ್ಥಾನದಲ್ಲಿದ್ದಾರೆ. ರಾಜಕಾರಣಿಗಳು, ಅಧಿಕಾರಿಗಳು, ಕೈಗಾರಿಕೋದ್ಯಮಿಗಳು ನವೀನ್ ಪಟ್ನಾಯಕ್ ಅವರ ಸಂಪರ್ಕ ಪಡೆಯಲು ಕೊಂಡಿಯಾಗಿ ವಿ.ಕೆ. ಪಾಂಡಿಯನ್ ಇದ್ದಾರೆ.

ಇದನ್ನೇ ಬಳಸಿಕೊಂಡ ಬಿಜೆಪಿ ತಮಿಳುನಾಡು ಮೂಲದ ವಿ.ಕೆ. ಪಾಂಡಿಯನ್ ಅವರ ಕೈಗೆ ಒರಿಸ್ಸಾ ರಾಜ್ಯವನ್ನು ಕೊಡಲು ನವೀನ್ ಪಟ್ನಾಯಕ್ ಮುಂದಾಗಿದ್ದಾರೆ ಎಂಬ ನರೇಟಿವ್ ಅನ್ನು ಜನರ ಮನಸ್ಸಿನಲ್ಲಿ ತುಂಬಿದ್ದು, ಇದು ಫಲ ಕೊಡುವ ಸಾಧ್ಯತೆಗಳಿದೆ ಎಂದು ರಾಜಕೀಯ ವಿಶ್ಲೇಷಕರು ಹೇಳುತ್ತಿದ್ದಾರೆ. ಒರಿಸ್ಸಾದ 147 ವಿಧಾನ ಸಭಾ ಕ್ಷೇತ್ರ ಹಾಗೂ 21 ಲೋಕಸಭಾ ಕ್ಷೇತ್ರಗಳಿಗೆ ಪ್ರಸ್ತುತ ಚುನಾವಣೆ ನಡೆಯುತ್ತಿದ್ದು, ಸತತವಾಗಿ ಐದನೇ ಅವಧಿಗೆ ಆಡಳಿತ ನಡೆಸಿರುವ ಮುಂದಾಗಿರುವ ಬಿಜೆಡಿ ಹಣಿಯಲು ಬಿಜೆಪಿ ವಿ‌.ಕೆ.ಪಾಂಡಿಯನ್ ಎಂಬ ಅಸ್ತ್ರ ಬಳಸುತ್ತಿದ್ದು, ಏನಾಗುವುದೋ ಎಂಬ ಕುತೂಹಲ ಮೂಡಿಸಿದೆ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!