Thursday, September 19, 2024

ಪ್ರಾಯೋಗಿಕ ಆವೃತ್ತಿ

ರಾಜ್ಯದಲ್ಲಿ ವಿವಾದಿತ ‘ಹಮಾರೆ ಬಾರಾಹ್’ ಸಿನಿಮಾಕ್ಕೆ ನಿಷೇಧ

ಕರ್ನಾಟಕ ಸಿನಿಮಾ ಕಾಯ್ದೆ 1964ರ ಸೆಕ್ಷನ್‌ಗಳ ಅಡಿಯಲ್ಲಿ ‘ಹಮಾರೆ ಬಾರಾಹ್’ ಸಿನಿಮಾ ಬಿಡುಗಡೆಗೆ ರಾಜ್ಯದಲ್ಲಿ ನಿಷೇಧ ಹೇರಿ ಸರ್ಕಾರ ಆದೇಶ ಹೊರಡಿಸಿದೆ.

ಕರ್ನಾಟಕ ಸರ್ಕಾರದ ಈ ನಿರ್ಧಾರಕ್ಕೂ ಮೊದಲು, ಜೂನ್‌ 14ರವರೆಗೆ ಈ ಸಿನಿಮಾವನ್ನು ಬಿಡುಗಡೆ ಮಾಡದಂತೆ ಈ ಮೊದಲೇ ಬಾಂಬೆ ಹೈಕೋರ್ಟ್‌ ತಡೆ ನೀಡಿತ್ತು. ಬರೀ ಸಿನಿಮಾ ಮಾತ್ರವಲ್ಲದೆ ಈ ಚಿತ್ರದ ಟ್ರೇಲರ್‌ ಬಿಡುಗಡೆಗೂ ತಡೆಯಾಜ್ಞೆ ನೀಡಲಾಗಿತ್ತು. ಈಗ ಕರ್ನಾಟಕದಲ್ಲಿ ಎರಡು ವಾರಗಳ ಕಾಲ ಈ ಚಿತ್ರ ಪ್ರದರ್ಶನಕ್ಕೆ ತಡೆ ನೀಡಿ ಆದೇಶ ಹೊರಡಿಸಲಾಗಿದೆ.

ರಾಜ್ಯದಲ್ಲಿ ಬಿಡುಗಡೆಗೆ ಅವಕಾಶ ನೀಡಿದರೆ ಕೋಮುಗಲಭೆ ಸೃಷ್ಟಿಯಾಗುತ್ತದೆ ಎನ್ನಲಾಗಿದೆ. ಆದ್ದರಿಂದ ಎರಡು ವಾರಗಳವರೆಗೆ ಅಥವಾ ಮುಂದಿನ ಸೂಚನೆ ಬರುವವರೆಗೆ ಹಮಾರೆ ಬಾರಾ ಸಿನಿಮಾ ಬಿಡುಗಡೆ ನಿಷೇಧಿಸಲಾಗಿದೆ.

‘ಹಮಾರೆ ಬಾರಾ’ ಬಿಡುಗಡೆಯಿಂದ ರಾಜ್ಯದಲ್ಲಿ ಕೋಮು ಉದ್ವಿಗ್ನತೆ ಉಂಟಾಗುತ್ತದೆ ಎಂದು ಹಲವು ಅಲ್ಪಸಂಖ್ಯಾತ ಸಂಘಟನೆಗಳು ಸರ್ಕಾರದ ಮುಂದೆ ಮನವಿ ಮಾಡಿದ್ದವು. ಮನವಿ ಸ್ವೀಕರಿಸಿದ ನಿಯೋಗ ಚಿತ್ರದ ಟ್ರೇಲರ್‌ ವೀಕ್ಷಣೆ ಮಾಡಿ ಈ ನಿರ್ಧಾರ ಪ್ರಕಟಿಸಿದೆ.

ಈ ಹಿಂದೆ ಈ ಸಿನಿಮಾದ ಟ್ರೇಲರ್‌ ಬಿಡುಗಡೆಯಾದಾಗ, ಅಜರ್‌ ಎಂಬುವವರು ಟ್ರೇಲರ್‌ನಲ್ಲಿ ಆಕ್ಷೇಪಾರ್ಹ ಸಂಗತಿಗಳಿವೆ. ಇಸ್ಲಾಂ ಧರ್ಮದ ಬಗ್ಗೆ ಕೆಟ್ಟದಾಗಿ ತೋರಿಸುವ ಪ್ರಯತ್ನ ಈ ಸಿನಿಮಾದಲ್ಲಿ ನಡೆದಿದೆ ಎಂದು ಆರೋಪಿಸಿ ಬಾಂಬೆ ಹೈಕೋರ್ಟ್‌ ಮೆಟ್ಟಿಲೇರಿದ್ದರು. ಅರ್ಜಿಯ ಪರಿಶೀಲನೆ ಮಾಡಿದ್ದ ಬಾಂಬೆ ಹೈಕೋರ್ಟ್‌ ಜೂನ್‌ 10ರ ವರೆಗೆ ಸಿನಿಮಾ ಪ್ರದರ್ಶನಕ್ಕೆ ತಡೆ ನೀಡಿತ್ತು. ಬಿರೇಂದರ್ ಭಗತ್, ರವಿ ಎಸ್ ಗುಪ್ತಾ, ಸಂಜಯ್ ನಾಗ್‌ಪಾಲ್ ಮತ್ತು ಶೀಯೋ ಬಾಲಕ್ ಸಿಂಗ್ ಜಂಟಿಯಾಗಿ ಹಮಾರಾ ಬಾರಾ ಸಿನಿಮಾ ನಿರ್ಮಿಸಿದ್ದಾರೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!